ಸೋನು ಗೌಡ ದಿಡೀರನೆ ಸೋಶಿಯಲ್ ಮೀಡಿಯಾ ಲೈವ್ ಬಂದು ಕಣ್ಣೀರು ಹಾಕಿದ್ಯಾಕೆ? ಕೈ ಮುಗಿದು ಕೇಳಿಕೊಂಡಿದ್ದೇನು ಗೊತ್ತಾ?
ಸೋನು ಶ್ರೀನಿವಾಸ್ ಗೌಡ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡು ಗಳಗಳನೆ ಕಣ್ಣೀರು ಸುರಿಸಿದ್ದಾರೆ.
ಸ್ನೇಹಿತರೆ, ನಾಲ್ಕು ವರ್ಷಗಳ ಹಿಂದಿನಿಂದ ಸೋಶಿಯಲ್ ಮೀಡಿಯಾದಲ್ಲಿ (Social Media) ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ತಮ್ಮ ಅದ್ಭುತ ಲಿಪ್ಸಿಂಕ್ ವಿಡಿಯೋ, ಡ್ಯಾನ್ಸ್ ವಿಡಿಯೋ ಹೀಗೆ ಮುಂತಾದ ರೀಲ್ಸ್ ವಿಡಿಯೋಗಳನ್ನು ಮಾಡಿ ಪ್ರತಿನಿತ್ಯ ತಮ್ಮ ಇನ್ಸ್ಟಾಗ್ರಾಮ್, ಯೂಟ್ಯೂಬ್ ಹಾಗೂ ಫೇಸ್ಬುಕ್ನಂತಹ ಖಾತೆಗಳಲ್ಲಿ ಹಂಚಿಕೊಳ್ಳುತ್ತಾ ಟ್ರೆಂಡ್ ಸೃಷ್ಟಿ ಮಾಡುವಂತಹ ಸೋಶಿಯಲ್ ಮೀಡಿಯಾ ಇನ್ಫ್ಲುಎನ್ಸರ್.
ಆದರೆ ಈಕೆ ತನ್ನ ಟಿಕ್ ಟಾಕ್ ಹಾಗೂ ರೀಲ್ಸ್ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್ ವಿಡಿಯೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಂತಹ ಸ್ಟಾರ್ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ತಮ್ಮ ಐಫೋನ್ 12 ವಿಡಿಯೋದಿಂದಾಗಿ (iPhone 12 Video) ಬಹುದೊಡ್ಡ ಮಟ್ಟದ ಟ್ರೋಲ್ಗೆ ಒಳಗಾದಂತಹ ಸೋನು ಗೌಡ (Sonu Gowda) ಇದೀಗ ಆ ವಿಡಿಯೋದಿಂದ ಪಶ್ಚಾತಾಪ ಪಡುವಂತಹ ಸ್ಥಿತಿಗೆ ಬಂದಿದ್ದಾರೆ. ಹೌದು ಗೆಳೆಯರೇ ಬಿಗ್ ಬಾಸ್ ಮನೆಗೆ ತೆರಳಿ ತಮ್ಮ ವ್ಯಕ್ತಿತ್ವ ಎಂತದ್ದು ಎಂಬುದನ್ನು ಅನಾವರಣ ಗೊಳಿಸಿಕೊಂಡಂತಹ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಎಷ್ಟೇ ಪ್ರಯತ್ನ ಮಾಡಿದರು.. ಟ್ರೋಲಿಗರು ಆಕೆಯನ್ನು ಬೆಂಬಿಡದೆ ಕಾಡುತ್ತಿದ್ದಾರೆ..
ಇದರಿಂದ ಬೇಸತ್ತು ಹೋಗಿರುವಂತಹ ಸೋನು ಶ್ರೀನಿವಾಸ್ ಗೌಡ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ (YouTube Channel Video) ಒಂದನ್ನು ಹಂಚಿಕೊಂಡು ಗಳಗಳನೆ ಕಣ್ಣೀರು ಸುರಿಸಿದ್ದಾರೆ. ಹೌದು ಗೆಳೆಯರೇ ನಾನು 20 ವರ್ಷದವಳಿದ್ದಾಗ ಆ ಒಂದು ತಪ್ಪನ್ನು ಮಾಡಿದ್ದೆ ಈಗ ನಾನು 24 ವರ್ಷದ ಹುಡುಗಿ ನನಗೆ ಏನನ್ನು ಮಾಡಬೇಕು, ಏನನ್ನು ಮಾಡಬಾರದೆಂಬ ಅರಿವಿದೆ. ಗೊತ್ತಿಲ್ಲದೆ ತಪ್ಪು ಮಾಡುವುದು ಸಹಜ ಅದನ್ನು ತಿದ್ದಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ.
ಕನ್ನಡಿಗರ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಮತ್ತೊಂದು ಎಡವಟ್ಟು! ಬೇಕಂತಲೇ ಕನ್ನಡ ಕಡೆಗಣಿಸುವ ನ್ಯಾಷನಲ್ ಕ್ರಶ್
ನಾನು ಹಲವು ಬಾರಿ ತಪ್ಪು ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದೆ ಆದರೆ ನನ್ನ ಫ್ಯಾಮಿಲಿ ಗೋಸ್ಕರ ಇಂದು ನಾನು ಬದುಕಿದ್ದೇನೆ ಟ್ರೋಲ್ ಮಾಡಿ ನನ್ನಿಂದ ಅದೆಷ್ಟೋ ಜನ ಟ್ರೊಲ್ಗಿಗರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ.
ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ನನ್ನ ಟ್ರೋಲ್ ವಿಡಿಯೋಗಳನ್ನು (Troll Video) ನೋಡಿ ನಮ್ಮಮ್ಮ ಹುಷಾರು ತಪ್ಪಿದ್ದಾರೆ. ಆಕೆ ಅಳುವುದನ್ನು ನಾನು ನೋಡಲು ಆಗುತ್ತಿಲ್ಲ, ನನ್ನಿಂದ ಹೀಗಾಗುತ್ತಿದೆಯಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ.
ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳೋದಿಲ್ಲ ಆದರೆ ನನ್ನಿಂದ ನಮ್ಮ ಫ್ಯಾಮಿಲಿ ತಲೆ ತಗ್ಗಿಸಬಾರದು ದಯಮಾಡಿ ಅಸಭ್ಯವಾಗಿ ನನ್ನನ್ನು ಟ್ರೋಲ್ ಮಾಡಬೇಡಿ ಇತರ ಯಾರ್ಯಾರಿಗೋ ನನ್ನನ್ನು ಹೋಲಿಸಿ, ಅವರೊಂದಿಗೆ ನನ್ನನ್ನು ಕೆಟ್ಟದಾಗಿ ಹೋಲಿಕೆ ಮಾಡುತ್ತಾ ಟ್ರೋಲ್ ಮಾಡಬೇಡಿ.
ಕಳೆದ ಕೆಲವು ತಿಂಗಳುಗಳಿಂದ ಯಾರೊಂದಿಗೂ ಕಾಣಿಸಿಕೊಳ್ಳುತ್ತಿಲ್ಲ, ನನ್ನ ಪಾಡಿಗೆ ನಾನಿದ್ದೇನೆ ದಯವಿಟ್ಟು ಇನ್ನು ಮುಂದೆಯಾದರೂ ನನ್ನನ್ನು ನೆಮ್ಮದಿಯಿಂದ ಇರಲು ಬಿಟ್ಟು ಬಿಡಿ ಎಂದು ಕೈ ಮುಗಿದು ಕಣ್ಣೀರು ಸುರಿಸುತ್ತಾ ಕೇಳಿಕೊಂಡಿದ್ದಾರೆ.
ಇನ್ನು ಮುಂದೆಯಾದರೂ ಸೋನು ಶ್ರೀನಿವಾಸ್ ಗೌಡ ಮಾಡಿರುವಂತಹ ತಪ್ಪನ್ನು ಮನ್ನಿಸಿ ಸಾಮಾನ್ಯ ಗೌರವವನ್ನು ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Sonu Srinivas Gowda Cries in Social Media Live Goes Viral
Follow us On
Google News |