Oh My Ghost; ಸನ್ನಿಲಿಯೋನ್ ಅಭಿನಯದ ಓ ಮೈ ಘೋಸ್ಟ್ ಚಿತ್ರದ ಟೀಸರ್ ಬಿಡುಗಡೆ
Oh My Ghost Teaser Released : ಓ ಮೈ ಘೋಸ್ಟ್ ಹಾರರ್ ಕಾಮಿಡಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
Oh My Ghost Teaser : ತಮಿಳಿನಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ನಟಿ ಸನ್ನಿಲಿಯೋನ್ (SunnyLeone) ನಟಿಸುತ್ತಿದ್ದಾರೆ. ಇದರಲ್ಲಿ ಅವರು ಕಾಮಿಕ್ ಭೂತದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ಓ ಮೈ ಘೋಸ್ಟ್’ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ನಿರ್ದೇಶಕ ಯುವನ್ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಹಾಸ್ಯನಟ ಸತೀಶ್ ಜೊತೆ ಸನ್ನಿ ಲಿಯೋನ್, ದರ್ಶ ಗುಪ್ತಾ, ಸಂಜನಾ, ಯೋಗಿ ಬಾಬು, ತಂಗದುರೈ, ತಿಲಕ್ ರಮೇಶ್, ಜಿ.ಪಿ. ಮುತ್ತು ಮುಂತಾದವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದನ್ನೂ ಓದಿ : ಆಸ್ಪತ್ರೆಯಲ್ಲಿ ನಟ ಪ್ರಭಾಸ್, ಆತಂಕದಲ್ಲಿ ಅಭಿಮಾನಿಗಳು
ಈ ಚಿತ್ರವನ್ನು ವಾವ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಮತ್ತು ವೈಟ್ ಹಾರ್ಸ್ ಸ್ಟುಡಿಯೋಸ್ ಅಡಿಯಲ್ಲಿ ವೀರ ಶಕ್ತಿ ಮತ್ತು ಕೆ ಶಶಿಕುಮಾರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರವು ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ನಿರೀಕ್ಷೆಯಿದೆ. ಜಾವೇದ್ ರಿಯಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ದೀಪಕ್ ಡಿ.ಮೆನನ್ ಅವರ ಛಾಯಾಗ್ರಹಣ ಇದೆ. ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
SunnyLeone Oh My Ghost Teaser Released
Follow us On
Google News |