Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆ, ಅಲ್ಲು ಅರ್ಜುನ್ ಬಂಧನ
Allu Arjun : ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ದಿ ರೂಲ್ ಬೆನಿಫಿಟ್ ಶೋ ವೇಳೆ ಕಾಲ್ತುಳಿತದಲ್ಲಿ ರೇವತಿ (39) ಎಂಬ ಮಹಿಳೆ ಸಾವನ್ನಪ್ಪಿದ್ದರು. ಘಟನೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು
Allu Arjun : ಡಿಸೆಂಬರ್ 4 ರಂದು ಆರ್‌ಟಿಸಿ ಕ್ರಾಸ್‌ರೋಡ್‌ನಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 ದಿ ರೂಲ್ ಬೆನಿಫಿಟ್ ಶೋ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಆಗಮನದ ಸಂದರ್ಭ ಉಂಟಾದ ಕಾಲ್ತುಳಿತದಲ್ಲಿ ರೇವತಿ (39) ಎಂಬ ಮಹಿಳೆ ಸಾವನ್ನಪ್ಪಿದ್ದರು. ಆಕೆಯ ಪುತ್ರ ಶ್ರೀತೇಜ್ (9) ಗಾಯಗೊಂಡಿದ್ದರು. ಈ ಘಟನೆಯಲ್ಲಿ ಶ್ರೀತೇಜ್ ಸ್ಥಿತಿ ಚಿಂತಾಜನಕವಾಗಿದೆಯಂತೆ.
ಮೃತರ ಕುಟುಂಬಸ್ಥರ ದೂರಿನ ಪ್ರಕಾರ ಪೊಲೀಸರು ಈಗಾಗಲೇ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು. ಈ ಘಟನೆಯಲ್ಲಿ ಇತ್ತೀಚೆಗೆ ಪೊಲೀಸರು ಮೂವರನ್ನು ಬಂಧಿಸಿದ್ದರು. ಸೆಕ್ಯೂರಿಟಿ ಗಾರ್ಡ್ ಜೊತೆಗೆ ಥಿಯೇಟರ್ ಮಾಲೀಕರು ಸೇರಿ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಅಲ್ಲು ಅರ್ಜುನ್ ವಿರುದ್ಧ BNS 118 (1), BNS 105, Redwith 3/5 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸೆಕ್ಷನ್ 105 (ಜಾಮೀನು ರಹಿತ ಪ್ರಕರಣ) ಅಡಿಯಲ್ಲಿ ಐದರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆಯಂತೆ. ಏತನ್ಮಧ್ಯೆ, ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅಲ್ಲು ಅರ್ಜುನ್ ಈಗಾಗಲೇ 25 ಲಕ್ಷ ರೂಪಾಯಿಗಳ ನೆರವು ಘೋಷಿಸಿದ್ದಾರೆ. ಅವರ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೇನೆ ಎಂದೂ ಕೂಡ ತಿಳಿಸಿದ್ದಾರೆ.
Superstar Allu Arjun has been arrested in the stampede case