Tiger Nageswara Rao: ನಟ ರವಿತೇಜ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಟೈಗರ್ ನಾಗೇಶ್ವರ ರಾವ್’ ಹೊಸ ಪೋಸ್ಟರ್ ಬಿಡುಗಡೆ, ಬಿಡುಗಡೆ ದಿನಾಂಕ ಕೂಡ ಬಹಿರಂಗ
Tiger Nageswara Rao Release Date: ಸೌತ್ ಸಿನಿಮಾ ನಟ ರವಿತೇಜ (Telugu Actor Ravi Teja) ಅವರ ಮೊದಲ ಪ್ಯಾನ್ ಇಂಡಿಯಾ (Pan India Cinema) ಚಿತ್ರ 'ಟೈಗರ್ ನಾಗೇಶ್ವರ ರಾವ್' (Tiger Nageswara Rao) ಹೊಸ ಫಸ್ಟ್ ಲುಕ್ ಪೋಸ್ಟರ್ (First Look Poster Released) ಇಂದು ಬಿಡುಗಡೆಯಾಗಿದೆ.
Tiger Nageswara Rao Release Date: ಸೌತ್ ಸಿನಿಮಾ ನಟ ರವಿತೇಜ (Telugu Actor Ravi Teja) ಅವರ ಮೊದಲ ಪ್ಯಾನ್ ಇಂಡಿಯಾ (Pan India Cinema) ಚಿತ್ರ ‘ಟೈಗರ್ ನಾಗೇಶ್ವರ ರಾವ್’ (Tiger Nageswara Rao) ಹೊಸ ಫಸ್ಟ್ ಲುಕ್ ಪೋಸ್ಟರ್ (First Look Poster Released) ಇಂದು ಬಿಡುಗಡೆಯಾಗಿದೆ.
ರವಿತೇಜ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕ ಕೂಡ (Cinema Release Date Announced) ಬಹಿರಂಗವಾಗಿದೆ.
ಈ ವರ್ಷ ದಸರಾ ಸಂದರ್ಭದಲ್ಲಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಈ ಪೋಸ್ಟರ್ ನೋಡಿದ್ರೆ ಈ ಚಿತ್ರದಲ್ಲಿ ಆ್ಯಕ್ಷನ್ ಕಾಣಿಸಲಿದೆ. ಚಿತ್ರದ ಪೋಸ್ಟರ್‌ನಲ್ಲಿ ರವಿತೇಜ ಸ್ಟೀಮ್ ರೈಲಿನ ಇಂಜಿನ್ ಮೇಲೆ ನಿಂತಿರುವಂತೆ ಕಾಣಿಸುತ್ತಿದೆ. ಈ ಚಿತ್ರವನ್ನು ವಂಶಿ ನಿರ್ದೇಶಿಸುತ್ತಿದ್ದು, ಅಭಿಷೇಕ್ ಅಗರ್ವಾಲ್ ನಿರ್ಮಿಸುತ್ತಿದ್ದಾರೆ.
ರವಿತೇಜಾ ಜೊತೆಗೆ ಬಾಲಿವುಡ್ ನಟರಾದ ಅನುಪಮ್ ಖೇರ್, ನೂಪುರ್ ಸನೋನ್, ರೇಣು ದೇಸಾಯಿ, ಗಾಯತ್ರಿ ಭಾರದ್ವಾಜ್ ಮತ್ತು ಜಿಶುಸೇನ್ ಗುಪ್ತಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡ ರವಿತೇಜ, “ಈ ವರ್ಷ ಇದು ನಮಗೆಲ್ಲರಿಗೂ ವಿಶೇಷವಾಗಲಿದೆ” ಎಂದು ಬರೆದುಕೊಂಡಿದ್ದಾರೆ, “ಟೈಗರ್ ನಾಗೇಶ್ವರ ರಾವ್” ಅಕ್ಟೋಬರ್ 20 ರಂದು ಬಿಡುಗಡೆಯಾಗಲಿದೆ.
ಕನ್ನಡ ಸೇರಿದಂತೆ ಅಕ್ಟೋಬರ್ 20, 2023ಕ್ಕೆ ಬಿಡುಗಡೆ
‘ಟೈಗರ್ ನಾಗೇಶ್ವರ ರಾವ್’ ಚಿತ್ರವು ಅಕ್ಟೋಬರ್ 20, 2023 ರಂದು ದಸರಾ ಸಂದರ್ಭದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Telugu Actor Ravi Teja First Pan India Cinema Tiger Nageswara Rao Release Date Announced
View this post on Instagram
Follow us On
Google News |