ಟಾಪ್ 10 ನಟಿಯರ ಲಿಸ್ಟ್ ಬಿಡುಗಡೆ! ಆದ್ರೆ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಮಾಯ

ದಕ್ಷಿಣ ಭಾರತ ಸಿನಿಮಾದಲ್ಲಿ ಮಿಂಚುತ್ತಿರುವ ಟಾಪ್ 10 ನಟಿಯರ ಲಿಸ್ಟ್ (Top 10 List) ಬಿಡುಗಡೆ ಆಗಿದೆ. ಸೌತ್ ಇಂಡಿಯಾದ ಬ್ಯೂಟಿಗಳು (South Indian Actress) ಯಾರಾಗಿರಬಹುದು ಅಂತ ಜನರಲ್ಲಿ ಕುತೂಹಲ ಮೂಡಿದೆ.

ದಕ್ಷಿಣ ಭಾರತ ಸಿನಿಮಾದಲ್ಲಿ ಮಿಂಚುತ್ತಿರುವ ಟಾಪ್ 10 ನಟಿಯರ ಲಿಸ್ಟ್ (Top 10 List) ಬಿಡುಗಡೆ ಆಗಿದೆ. ಸೌತ್ ಇಂಡಿಯಾದ ಬ್ಯೂಟಿಗಳು (South Indian Actress) ಯಾರಾಗಿರಬಹುದು ಅಂತ ಜನರಲ್ಲಿ ಕುತೂಹಲ ಮೂಡಿದೆ.

ಉತ್ತರ ಸಿನಿಮಾ ಇಂಡಸ್ಟ್ರಿಗೆ ಹೋಲಿಸಿದರೆ ದಕ್ಷಿಣ ಭಾಗದಲ್ಲಿ ನಾಯಕಿಯರಿಗೆ ತುಸು ಪ್ರಾಮುಖ್ಯತೆ ಜಾಸ್ತಿ. ಅದರಲ್ಲೂ ಒಬ್ಬರಿಗಿಂತಲೂ ಒಬ್ಬರು ಹೆಚ್ಚು ಬ್ಯೂಟಿಫುಲ್ ಹಾಗೂ ಟ್ಯಾಲೆಂಟ್ ಆಗಿರುವ ನಟಿಯರು ನಮ್ಮ ಕಣ್ಮುಂದೆ ಇದ್ದಾರೆ.

ಈ ಕಾರಣಕ್ಕೆ ಜನಪ್ರಿಯ ನಾಯಕಿ ಸ್ಥಾನಕ್ಕೆ ಯಾರು ಎನ್ನುವ ಪ್ರಶ್ನೆ ಆಗಾಗ ಉದ್ಭವಿಸುತ್ತದೆ.

ಟಾಪ್ 10 ನಟಿಯರ ಲಿಸ್ಟ್ ಬಿಡುಗಡೆ! ಆದ್ರೆ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಮಾಯ - Kannada News

ಈಕೆ ಸಿನಿಮಾಗೆ ಅಪಶಕುನ ಎಂದು ಹೀಯಾಳಿಸಿದವರ ಮುಂದೆ ನಟಿ ಕಲ್ಪನಾ ಮೆರೆದಿದ್ದು ಹೇಗೆ ಗೊತ್ತಾ?

ಜನಪ್ರಿಯ ಸೆಲೆಬ್ರಿಟಿಗಳ ಲಿಸ್ಟ್ ಬಿಡುಗಡೆ!

ಜನರಿಗೆ ಕುತೂಹಲ ಮೂಡಿಸುವಂತಹ ಹಾಗೂ ಅಚ್ಚರಿಯಾಗುವಂತಹ ಜನಪ್ರಿಯ ಸೆಲೆಬ್ರಿಟಿ ನಟಿಗಳ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅನೇಕ ಸೌತ್ ಸಿನಿಮಾದಲ್ಲಿ ನಟಿಸಿದ ಹಾಗೂ ಬಾಲಿವುಡ್ ಅಂಗಳದಲ್ಲಿಯೂ ಮಿಂಚಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿರುವ ನಟಿಯರ ಹೆಸರು ಸೇರಿಕೊಂಡಿದೆ.

ಇದರಿಂದಾಗಿ ನಟಿಯರ ಡಿಮ್ಯಾಂಡ್ ಇನ್ನಷ್ಟು ಜಾಸ್ತಿಯಾಗಿದೆ. ಹಾಗಾದ್ರೆ ಈ ಪಟ್ಟಿಯಲ್ಲಿ ಇರುವ ಹೆಸರು ಯಾವವು ನೋಡೋಣ.

ನಯನತಾರ – Nayanthara

Actress Nayantharaಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಲೇಡಿ ಸೂಪರ್ ಸ್ಟಾರ್ (lady superstar) ಎಂದು ಕರೆಸಿಕೊಳ್ಳುವ ನಟಿ ನಯನತಾರಾ (Nayanthara) ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ. ಇತ್ತೀಚಿಗೆ ಬಾಲಿವುಡ್ ಬಾದ್ಷ ಶಾರುಖ್ ಖಾನ್ (Shahrukh Khan) ಜೊತೆಗೆ ಜವಾನ್ ಸಿನಿಮಾದಲ್ಲಿ ನಟಿಸಿ, ಬಾಲಿವುಡ್ ನಲ್ಲಿಯೂ ಫೇಮಸ್ ಫೇಸ್ (famous face) ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಜಯಂ ರವಿ (jayam Ravi) ಅವರ ಜೊತೆಗಿನ ಇರಲು ಚಿತ್ರವು ಬಿಡುಗಡೆಯಾಗಿದ್ದು ಇದರಲ್ಲಿಯೂ ನಯನತಾರ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ.

ರಾತ್ರೋರಾತ್ರಿ ಪ್ರಭಾಸ್ Instagram ಖಾತೆ ಕಣ್ಮರೆ, ಅಭಿಮಾನಿಗಳು ಆತಂಕ! ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಸಮಂತಾ – Samantha

Actress Samanthaಸಮಂತಾ ( Samantha): ಇತ್ತೀಚಿಗೆ ಕಾಯಿಲೆಯಿಂದ ಚೇತರಿಸಿಕೊಂಡಿರುವ ಸಮಂತಾ ಮಾತ್ರ ಯಾವಾಗಲೂ ದಕ್ಷಿಣ ಕನ್ನಡದ ಫೇಮಸ್ ನಟಿ. ಇದೀಗ ಸೌತ್ ಇಂಡಿಯಾದ ಟಾಪ್ 10 ಲಿಸ್ಟ್ ನಲ್ಲಿ ಸಮಂತಾ ಎರಡನೇ ಸ್ಥಾನ ಗೆಟ್ಟಿಸಿಕೊಂಡಿದ್ದಾರೆ.

ಅವರ ಇತ್ತೀಚಿನ ಶಾಕುಂತಲ ಸಿನಿಮಾ ಹೆಚ್ಚು ಹೆಸರು ಹಣ ಗಳಿಸಿದೆ, ಜೊತೆಗೆ ಈಗ ರಿಲೀಸ್ ಆಗಿರುವ ಟಾಪ್ ಟೆನ್ ನಟಿಯರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿರುವ ಸಮಂತಾ ಇನ್ನಷ್ಟು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳುವುದಂತೂ ಗ್ಯಾರಂಟಿ.

ತ್ರಿಶಾ – Trisha

Actress Trishaತ್ರಿಶಾ – (Trisha): ಎವರ್ ಗ್ರೀನ್ ಸ್ಟಾರ್ ನಟಿ ತ್ರಿಶಾ ಮೂರನೇ ಸ್ಥಾನದಲ್ಲಿದ್ದಾರೆ. ಪೋನ್ನಿಯನ್ ಸೆಲ್ವನ್ ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ತ್ರಿಶಾ ಸಿನಿಮಾದಲ್ಲಿ ಸಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ವಿಜಯ್ ಅಭಿನಯದ ಲಿಯೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ.

ಇನ್ನು ಉಳಿದಂತೆ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ನಾಲ್ಕನೇ ಸ್ಥಾನದಲ್ಲಿದ್ದರೆ, ಕೀರ್ತಿ ಸುರೇಶ್ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿ ಕ್ರಮವಾಗಿ ಸಾಯಿ ಪಲ್ಲವಿ, ಜ್ಯೋತಿಕಾ, ಪ್ರಿಯಾಂಕಾ ಮೋಹನ್, ಶ್ರುತಿ ಹಾಸನ್ ಮತ್ತು ಅನುಷ್ಕಾ ಶೆಟ್ಟಿ ಟಾಪ್ 10 ನಟಿಯರ ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದಾರೆ.

ವಿಶೇಷ ಅಂದರೆ ಸೌತ್ ನಲ್ಲಿ ಸಿನಿಮಾ ಮಾಡುತ್ತಾ ಬಾಲಿವುಡ್ (Bollywood) ಗೂ ಕೂಡ ಫಾದರ್ಪಣೆ ಮಾಡಿರುವ ನ್ಯಾಷನಲ್ ರಶ್ಮಿಕಕಾ ಮಂದಣ್ಣ ಮಾತ್ರ ಲಿಸ್ಟ್ ನಲ್ಲಿ ಕಾಣಿಸಿಕೊಂಡಿಲ್ಲ. ಇದು ಸಮಾರಂಭದಲ್ಲಿ ಬಹಳ ಅನಿರೀಕ್ಷಿತ ಎಂದು ಹೇಳಬಹುದು. ಈ ಕಾರಣಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ಸೋಶಿಯಲ್ ಮೀಡಿಯಾ (social media) ದಲ್ಲಿ ಇನ್ನಷ್ಟು ಟ್ರೋಲ್ ಆಗುತ್ತಿದ್ದಾರೆ.

Top 10 actress list released, Rashmika Mandanna’s name is missing in the list

Follow us On

FaceBook Google News

Top 10 actress list released, Rashmika Mandanna's name is missing in the list