ಕನ್ನಡ ಸಿನಿಮಾ ರಂಗದ (Kannada Film Industry) ಕಲಾ-ಕುಸುಮ, ನಟಸಾರ್ವಭೌಮ, ಕಲಾಗಂಧರ್ವ ಹೀಗೆ ಡಾ. ರಾಜಕುಮಾರ್ (Dr Rajkumar) ಅವರನ್ನು ವರ್ಣಿಸಲು ಪದಗಳೇ ಸಾಲದು. ತಮ್ಮ ಅಮೋಘ ಅಭಿನಯದ ಮೂಲಕ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ತಮ್ಮದೇ ಆದ ವಿಶಿಷ್ಟ ಕೊಡುಗೆಯ ಮೂಲಕ ಕನ್ನಡ ಸಿನಿಮಾರಂಗದ (Kannada Cinema) ಯಶಸ್ಸನ್ನು ಉತ್ತುಂಗದ ಮಟ್ಟಕ್ಕೆ ಕೊಂಡುಯುವಲ್ಲಿ ಮೈಲುಗಲ್ಲನ್ನು ಹಾಕಿ ಕೊಟ್ಟಂತಹ ನಟ ಎಂದರೆ ತಪ್ಪಾಗಲಾರದು.
ಇಂದಿಗೂ ಅದೆಷ್ಟೋ ಅಭಿಮಾನಿಗಳು (Fans) ಡಾಕ್ಟರ್ ರಾಜಕುಮಾರ್ ಅವರನ್ನು ಆರಾಧ್ಯ ದೈವರಂತೆ ಮನೆಯಲ್ಲಿ ಪೂಜಿಸುತ್ತಿರುವಂತಹ ಉದಾಹರಣೆಗಳಿವೆ. ತಮ್ಮ ಅಮೋಘ ಅಭಿನಯ ಹಾಗೂ ಸಮಾಜ ಸೇವೆಗಳ ಮೂಲಕ ಬಹು ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದ ಡಾಕ್ಟರ್ ರಾಜಕುಮಾರ್ ಅವರಿಗೆ ಒಂದು ಕೊರತೆ ಇದ್ದಂತೆ ಅದುವೇ ಅವರ ಬಳಿ ಯಾರಾದರೂ ದುಡ್ಡನ್ನು ನೀಡಿದರೆ ಅದನ್ನು ಎಣಿಸಲು ಅಣ್ಣವರಿಗೆ ಬರುತ್ತಿರಲಿಲ್ಲವಂತೆ.
ಮಹಿಳೆಯರ ಒಳ ಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿಕೊಂಡ ಅಮಿತಾ ಬಚ್ಚನ್!
ಅಷ್ಟಕ್ಕೂ ಇದರ ಅಸಲಿ ಮಾಹಿತಿ ಏನು ಎಂಬುದನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ 1955ರ ಇಸವಿಯಲ್ಲಿ ಡಾಕ್ಟರ್ ರಾಜಕುಮಾರ್ ಆಗಸ್ಟೇ ಸಿನಿ ಬದುಕಿನ ಪಯಣವನ್ನು ಬೆಳೆಸಿದರೂ ಆಗ ಡಾಕ್ಟರ್ ರಾಜಕುಮಾರ್ ಸಿನಿಮಾ ಹಾಗೂ ನಾಟಕಗಳಲ್ಲಿ ಅಭಿನಯಿಸಿದರೆ ದುಪ್ಪಟ್ಟು ಹಣ ಕೊಡುತ್ತಿದ್ದರಂತೆ.
ಅದನ್ನು ಅಣ್ಣಾವ್ರು ತೆಗೆದುಕೊಳ್ಳುತ್ತಿರಲಿಲ್ಲವಂತೆ. ಅಣ್ಣಾವ್ರು ಸದಾ ತಮ್ಮ ತಂದೆ ಪುಟ್ಟ ಸ್ವಾಮಿ ಹೇಳಿದ ತಮ್ಮದಲ್ಲದ ವಸ್ತುಗಳಿಗೆ ಬೆಲೆ ನೀಡಬಾರದು ಎಂಬ ಮಾತನ್ನು ಪಾಲಿಸುತ್ತಿದ್ದರು. ಹೌದು ನಾವು ಮಾತನಾಡಿದಷ್ಟು ಮಾತ್ರ ಹಣ ಕೊಟ್ಟರೆ ಸಾಕು ಹೆಚ್ಚಿನ ಹಣವನ್ನು ನನಗೆ ಎಣಿಸಲು ಬರೋದಿಲ್ಲ. ದಯಮಾಡಿ ಈ ಹಣ ನನಗೆ ಬೇಡ ಎಂದು ಹೇಳುತ್ತಾ ಅಣ್ಣಾವ್ರು ತಮ್ಮ ಪಾಲನ್ನು ಹೊರತುಪಡಿಸಿ ಹೆಚ್ಚಿನದನ್ನು ಎಂದಿಗೂ ಸ್ವೀಕರಿಸಲು ಹೋಗುತ್ತಿರಲಿಲ್ಲ.
ಬಾಹುಬಲಿ ನಟ ಪ್ರಭಾಸ್ ಫೇಸ್‌ಬುಕ್ ಪೇಜ್ ಹ್ಯಾಕ್! ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದ ಪೇಜ್ ಏನಾಯ್ತು ಗೊತ್ತಾ?
ಈ ಕಾರಣದಿಂದ ನಾದಮಯ ಹಾಡಿಗೆ ಸೆಂಟ್ರಲ್ ಪ್ರಶಸ್ತಿ ಬಂದಾಗಲೂ ಕೂಡ ಅಣ್ಣಾವ್ರು ಅದನ್ನು ಸ್ವೀಕರಿಸಲು ಹೋಗದೆ ನಾನೇನು ಬೇರೆ ಗಾಯಕರಿಗಿಂತ ದೊಡ್ಡ ಸಿಂಗರ್ರಾ? ನನಗೆ ಏನು ಅರ್ಹತೆ ಇದೆ ಅಂತ ಇದನ್ನೆಲ್ಲ ಕೊಡುತ್ತಾರೆ? ಇದೆಲ್ಲ ಯಾಕೆ ಮಾಡುತ್ತಾರೆ? ನಾನು ನನ್ನ ಸೇವೆ ಮಾಡುತ್ತಿದ್ದೀನಿ ಅಷ್ಟೇ. ಇದಕ್ಕೆಲ್ಲ ನಾನು ಅರ್ಹನಲ್ಲ ಎಂದು ಹೇಳುವ ಮೂಲಕ ಅಣ್ಣಾವ್ರು ಯಾವುದೇ ಅವಾರ್ಡ್ ಫಂಕ್ಷನ್ಗಳಿಗೂ ಹೋಗುತ್ತಿರಲಿಲ್ಲ ಹಾಗೂ ತಮ್ಮ ಸಂಭಾವನೆ ಮೀರಿದ ಹಣ ಬಂದರೂ ಅದನ್ನು ತೆಗೆದುಕೊಳ್ಳುತ್ತಿರಲಿಲ್ಲವಂತೆ.
Unknown Facts About Kannada Actor Dr Rajkumar
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.