Bhupinder Singh; ಜನಪ್ರಿಯ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ ನಿಧನ
Bhupinder Singh: ಬಾಲಿವುಡ್‌ನ ಹಲವು ಚಿತ್ರಗಳಿಗೆ ತಮ್ಮ ಮಧುರ ಧ್ವನಿಯನ್ನು ನೀಡಿದ ಭೂಪಿಂದರ್ ಸಿಂಗ್ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನಿಧನರಾಗಿದ್ದಾರೆ
Bhupinder Singh: ಜನಪ್ರಿಯ ಹಿನ್ನೆಲೆ ಗಾಯಕ ಭೂಪಿಂದರ್ ಸಿಂಗ್ (82) ನಿಧನ… ಬಾಲಿವುಡ್‌ನ ಹಲವು ಚಿತ್ರಗಳಿಗೆ ತಮ್ಮ ಮಧುರ ಧ್ವನಿಯನ್ನು ನೀಡಿದ ಭೂಪಿಂದರ್ ಸಿಂಗ್ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೊನೆಯುಸಿರೆಳೆದರು. ಭೂಪೇಂದರ್ ಸಿಂಗ್ ಅವರು ಕರುಳಿನ ಕ್ಯಾನ್ಸರ್ ಮತ್ತು ಕೋವಿಡ್-ಸಂಬಂಧಿತ ತೊಡಕುಗಳಿಂದ ಸಾವನ್ನಪ್ಪಿದ್ದಾರೆ ಎಂದು ಗಾಯಕಿ ಮಿಥಾಲಿ ಮುಖರ್ಜಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಭೂಪಿಂದರ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪತ್ನಿ ಮಿಥಾಲಿ ಮುಖರ್ಜಿ ಹೇಳಿದ್ದಾರೆ.
ಮೂತ್ರದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಭಾಗವಾಗಿ, ಅವರಿಗೆ ಹಲವಾರು ಪರೀಕ್ಷೆಗಳನ್ನು ಮಾಡಲಾಯಿತು ಮತ್ತು ಅವರಿಗೆ ಕೋವಿಡ್ ಪಾಸಿಟಿವ್ ಎಂದು ರೋಗನಿರ್ಣಯ ಮಾಡಲಾಯಿತು. ಅವರು ನೆನ್ನೆ ಸಂಜೆ 7.45 ರ ಸುಮಾರಿಗೆ ನಿಧನರಾದರು ಎಂದು ಅವರು ಹೇಳಿದರು. ಭೂಪಿಂದರ್ ಸಿಂಗ್ ಕೊಲೊನ್ ಕ್ಯಾನ್ಸರ್ ಮತ್ತು ಕೋವಿಡ್ ತೊಡಕುಗಳಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಭೂಪಿಂದರ್ ಸಿಂಗ್ ಅವರು ಐದು ದಶಕಗಳ ಕಾಲದ ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ ಅನೇಕ ಚಿತ್ರಗಳಿಗೆ ಧ್ವನಿ ನೀಡಿದ್ದಾರೆ. ಅವರು ಬಾಲಿವುಡ್‌ನ ದಿಗ್ಗಜ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.
ಭೂಪೇಂದರ್ ಸಿಂಗ್ ನಿಧನಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಅವರ ನಿಧನಕ್ಕೆ ಹಲವರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಭೂಪಿಂದರ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Veteran Singer Bhupinder Singh Passes Away In Mumbai
Anguished by the passing away of Shri Bhupinder Singh Ji, who has given memorable songs for decades. His works struck a chord with several people. In this sad hour, my thoughts are with his family and admirers. Om Shanti.
— Narendra Modi (@narendramodi) July 18, 2022
Follow us On
Google News |
Advertisement