Airtel 5G: ಏರ್‌ಟೆಲ್‌ನ ಇನ್ನೊಂದು ಮೈಲಿಗಲ್ಲು, 500 ನಗರಗಳಿಗೆ 5ಜಿ ಸೇವೆಗಳ ವಿಸ್ತರಣೆ

Story Highlights

Airtel 5G: ಏರ್‌ಟೆಲ್ ತನ್ನ 5ಜಿ ಸೇವೆಗಳನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಿದೆ. ಇತ್ತೀಚೆಗೆ ಮತ್ತೆ 235 ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೂಲಕ 500 ನಗರಗಳ ಮೈಲಿಗಲ್ಲನ್ನು ತಲುಪಿದೆ.

Airtel 5G: ಏರ್‌ಟೆಲ್ ತನ್ನ 5ಜಿ ಸೇವೆಗಳನ್ನು ಹೆಚ್ಚಿನ ನಗರಗಳಿಗೆ ವಿಸ್ತರಿಸಿದೆ. ಇತ್ತೀಚೆಗೆ ಮತ್ತೆ 235 ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೂಲಕ 500 ನಗರಗಳ ಮೈಲಿಗಲ್ಲನ್ನು ತಲುಪಿದೆ.

ಪ್ರಮುಖ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ 5G ಸೇವೆಗಳನ್ನು ವೇಗವಾಗಿ ವಿಸ್ತರಿಸುತ್ತಿದೆ. ಈ ನಿಟ್ಟಿನಲ್ಲಿ ರಿಲಯನ್ಸ್ ಜಿಯೋಗೆ ಪೈಪೋಟಿ ನೀಡುತ್ತಿರುವ ಕಂಪನಿಯು ಇತ್ತೀಚೆಗೆ ಇನ್ನೂ 235 ನಗರಗಳಲ್ಲಿ 5G ನೆಟ್‌ವರ್ಕ್ ಲಭ್ಯವಾಗುವಂತೆ ಮಾಡಿದೆ.

ಏರ್‌ಟೆಲ್ ತನ್ನ 5G ನೆಟ್‌ವರ್ಕ್ ಅನ್ನು 500 ನಗರಗಳು/ಪಟ್ಟಣಗಳಲ್ಲಿ ಲಭ್ಯವಾಗುವಂತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದೆಡೆ, ಜಿಯೋ ಈಗಾಗಲೇ ತನ್ನ ಸೇವೆಗಳನ್ನು 406 ನಗರಗಳು/ಪಟ್ಟಣಗಳಿಗೆ ವಿಸ್ತರಿಸಿದೆ.

Best Airtel Plans: ಏರ್‌ಟೆಲ್ ಹೊಸ ಯೋಜನೆಗಳು, ಅತ್ಯುತ್ತಮ ಏರ್‌ಟೆಲ್ ಯೋಜನೆಗಳ ಸಂಪೂರ್ಣ ಪಟ್ಟಿ

‘ಭಾರತಿ ಏರ್‌ಟೆಲ್ 235 ನಗರಗಳಲ್ಲಿ 5ಜಿ ನೆಟ್‌ವರ್ಕ್ ಸೇವೆಗಳನ್ನು ಲಭ್ಯವಾಗುವಂತೆ ಮಾಡಿದೆ. ಇದರೊಂದಿಗೆ, 500 ನಗರಗಳಲ್ಲಿ ನಮ್ಮ ಗ್ರಾಹಕರಿಗೆ 5G ನೆಟ್ವರ್ಕ್ ಸೇವೆಗಳು ಲಭ್ಯವಿವೆ. ಅಕ್ಟೋಬರ್ 2022 ರಲ್ಲಿ, ನಾವು ಮೊದಲು 5G ಸೇವೆಗಳನ್ನು ಪರಿಚಯಿಸಿದ್ದೇವೆ.

ಪ್ರತಿ ಏರ್‌ಟೆಲ್ ಗ್ರಾಹಕರಿಗೆ 5G ಸೇವೆಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ನಾವು ದಿನಕ್ಕೆ 30-40 ನಗರಗಳಿಗೆ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ. ಸೆಪ್ಟೆಂಬರ್ 2023 ರ ವೇಳೆಗೆ ದೇಶದ ಎಲ್ಲಾ ನಗರಗಳಲ್ಲಿ ಏರ್‌ಟೆಲ್ 5G ಸೇವೆಗಳು ಲಭ್ಯವಿರುತ್ತವೆ ಎಂದು ನಾವು ಭಾವಿಸುತ್ತೇವೆ” ಎಂದು ಭಾರ್ತಿ ಏರ್‌ಟೆಲ್ CTO ರಣದೀಪ್ ಸೆಖೋನ್ ಹೇಳಿದ್ದಾರೆ.

Airtel has expanded its 5G services to 500 cities

Related Stories