ಇದೆ ಫಸ್ಟ್ ಟೈಮ್ ಕಡಿಮೆ ಬೆಲೆಗೆ ಐಫೋನ್ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?

ಆಪಲ್‌ನ ಐಫೋನ್ SE 4 ಹೊಸ ವಿನ್ಯಾಸ, 48MP ಕ್ಯಾಮೆರಾ ಮತ್ತು A18 ಚಿಪ್‌ಸೆಟ್‌ನೊಂದಿಗೆ ಫೆಬ್ರವರಿ 19 ರಂದು ಬಿಡುಗಡೆಯಾಗಲಿದೆ. ಭಾರತ, ಅಮೆರಿಕ, ದುಬೈನಲ್ಲಿ ಬೆಲೆ ವಿವರಗಳು ಹೀಗಿವೆ.

  • ಫೆಬ್ರವರಿ 19 ರಂದು ಆಪಲ್ ಈವೆಂಟ್‌ನಲ್ಲಿ ಐಫೋನ್ SE 4 ಬಿಡುಗಡೆ
  • 48MP ಕ್ಯಾಮೆರಾ, OLED ಡಿಸ್ಪ್ಲೇ ಮತ್ತು A18 ಚಿಪ್‌ಸೆಟ್ ಪ್ರಮುಖ ವೈಶಿಷ್ಟ್ಯಗಳು
  • ಭಾರತದಲ್ಲಿ ರೂ. 50,000 ದರದಲ್ಲಿ ಬಿಡುಗಡೆಯ ನಿರೀಕ್ಷೆ

Apple iPhone SE4 : ಆಪಲ್ ಸಂಸ್ಥೆಯ ಬಹು ನಿರೀಕ್ಷಿತ ಐಫೋನ್ SE 4 ಬಿಡುಗಡೆಗೆ ಸಿದ್ಧವಾಗಿದೆ. ಫೆಬ್ರವರಿ 19 ರಂದು ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಕಂಪನಿಯು ಹೊಸ ಐಫೋನ್ ಅನ್ನು ಅನಾವರಣ ಮಾಡುವ ಸಾಧ್ಯತೆ ಇದೆ. ಆಪಲ್ ಅಧಿಕೃತ ಘೋಷಣೆ ನೀಡದಿದ್ದರೂ, ತಂತ್ರಜ್ಞಾನ ತಜ್ಞರಲ್ಲಿ ಈ ಬಗ್ಗೆ ಭಾರೀ ನಿರೀಕ್ಷೆ ಇದೆ.

ಐಫೋನ್ SE 4 ತನ್ನ ವೈಶಿಷ್ಟ್ಯಗಳಿಂದ ಗಮನ ಸೆಳೆಯಲಿದೆ. ಹೊಸ ಮಾದರಿಯು ಐಫೋನ್ 14 ಗೆ ಹೋಲುವ ವಿನ್ಯಾಸವನ್ನು ಹೊಂದಿದ್ದು, ತೆಳುವಾದ ಬೆಜೆಲ್‌ಗಳು ಮತ್ತು ಹೋಮ್ ಬಟನ್ ಇಲ್ಲದೆ ಬರಲಿದೆ.

ಇದನ್ನೂ ಓದಿ: ಏರ್ಟೆಲ್, ಜಿಯೋ ಕತೆ ಮುಗೀತು! BSNL ನಿಂದ ಅತ್ಯಂತ ಅಗ್ಗದ ಯೋಜನೆ ಬಿಡುಗಡೆ

iPhone SE4 ಕ್ಯಾಮೆರಾ

ನವೀಕೃತ 48-ಮೆಗಾಪಿಕ್ಸೆಲ್ ಕ್ಯಾಮೆರಾ, ಹಿಂದಿನ 12-ಮೆಗಾಪಿಕ್ಸೆಲ್ ಕ್ಯಾಮೆರಾಕ್ಕಿಂತ ಉತ್ತಮ ಪ್ರದರ್ಶನವನ್ನು ನೀಡಲಿದೆ. ಜೊತೆಗೆ, ಆಪಲ್‌ನ ಆಧುನಿಕ A18 ಚಿಪ್‌ಸೆಟ್ ಇದರಲ್ಲಿ ಬಳಸಲಾಗಲಿದೆ.

ಅಲ್ಲದೆ, ಟಿಮ್ ಕುಕ್ ಫೆಬ್ರವರಿ 19, 2025 ರಂದು ಭಾರತೀಯ ಕಾಲಮಾನದಲ್ಲಿ ರಾತ್ರಿ 11:30 ಕ್ಕೆ ಆರಂಭವಾಗುವ ಈವೆಂಟ್‌ ಬಗ್ಗೆ ವಿವರವನ್ನು ಹಂಚಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆಪಲ್ ಪಾರ್ಕ್‌ನಿಂದ ನೇರ ಪ್ರಸಾರ ಮಾಡಲಾಗುತ್ತದೆ. ಐಫೋನ್ SE 4 ಹೊರತಾದರೂ, ಆಪಲ್ ಮ್ಯಾಕ್‌ಬುಕ್ ಏರ್ M4 ಬಿಡುಗಡೆ ಸಾಧ್ಯತೆಗೂ ವರದಿಗಳು ಸೂಚಿಸುತ್ತಿವೆ.

Apple iPhone SE4

ಇದನ್ನೂ ಓದಿ: ಕಡಿಮೆ ಬಜೆಟ್‌ನಲ್ಲಿ ಹೊಸ 5G ಮೊಬೈಲ್, ಸುಮ್ನೆ ಚಾನ್ಸ್ ಮಿಸ್ ಮಾಡ್ಕೋಬೇಡಿ

iPhone SE4 ಬೆಲೆ

ಈ ಆವೃತ್ತಿಯ ಬೆಲೆ ಪ್ರತಿ ದೇಶದಲ್ಲಿ ವಿಭಿನ್ನವಾಗಿರಲಿದೆ. ಭಾರತದಲ್ಲಿ ಐಫೋನ್ SE 4 ರು. 50,000 ದರದಲ್ಲಿ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಮೆರಿಕದಲ್ಲಿ ಇದರ ಬೆಲೆ $500 (ಸುಮಾರು ರೂ. 43,477) ಇರಬಹುದು. ದುಬೈನಲ್ಲಿ AED 2,000 (ಸುಮಾರು ರೂ. 47,359) ದರದಲ್ಲಿ ದೊರೆಯುವ ಸಾಧ್ಯತೆ ಇದೆ.

ಮುಂಗಡ-ಆರ್ಡರ್ ಮಾಡುತ್ತಿರುವ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ಆಪಲ್ ನೀಡಬಹುದು ಎಂಬ ಅಂದಾಜು ಇದೆ.

ತಂತ್ರಜ್ಞಾನದ ಪ್ರಿಯರು ಕಾಯುತ್ತಿರುವ ಈ ಹೊಸ ಆವೃತ್ತಿಯು ಆಪಲ್‌ನ ಎಸ್ಇ ಸರಣಿಯಲ್ಲಿ ಮತ್ತೊಂದು ವಿಭಿನ್ನ ಮಟ್ಟವನ್ನು ತಲುಪಿಸಲಿದೆ. 6.1-ಇಂಚಿನ OLED ಡಿಸ್ಪ್ಲೇ ಮತ್ತು ಆಪಲ್‌ನ ಎಐ-ಸ್ನೇಹಿ ವೈಶಿಷ್ಟ್ಯಗಳೊಂದಿಗೆ, ಇದು ಅತ್ಯಂತ ಕೈಗೆಟುಕುವ ಐಫೋನ್ ಆಗುವ ಸಾಧ್ಯತೆಯಿದೆ.

Apple iPhone SE 4 Set for February 19 Launch

Related Stories