ಬಳಕೆಯಲ್ಲಿದ್ದ ಸಿಮ್ ಕಾರ್ಡ್ ರಾತ್ರೋ ರಾತ್ರಿ ರದ್ದುಗೊಳಿಸಿದ ಸರ್ಕಾರ: ನಿಮ್ಮ ನಂಬರ್ ಕೂಡ ಲಿಸ್ಟ್ ನಲ್ಲಿ ಇದೆಯಾ ನೋಡಿಕೊಳ್ಳಿ

ಇತ್ತೀಚಿಗೆ ಸೈಬರ್ ಕ್ರೈಂ (Cyber Crime) ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಎಷ್ಟೋ ಪ್ರಕರಣಗಳನ್ನು ಬಗೆಹರಿಸಲು ಸಾಧ್ಯವಾಗದೆ ಪೊಲೀಸರು (Police) ಕೂಡ ತಲೆಕೆಡಿಸಿಕೊಳ್ಳುವಂತೆ ಆಗಿದೆ.
ಈ ಸೈಬರ್ ಪ್ರಕರಣಗಳು, ವಂಚನೆಗಳು ಹೆಚ್ಚಾಗುತ್ತಿರುವುದಕ್ಕೆ ಸಿಮ್ ಕಾರ್ಡ್ (Sim card) ಕೂಡ ಒಂದು ಪ್ರಮುಖ ಸಾಧನವಾಗುತ್ತಿದೆ, ಹೀಗಾಗಿ ಇದೆಲ್ಲದಕ್ಕೂ ಕಡಿವಾಣ ಹಾಕಲು ಸರ್ಕಾರ ಹೊಸದೊಂದು ಚಿಂತನೆ ನಡೆಸಿದೆ.
ಮಿಡ್‌ರೇಂಜ್ ಬೆಲೆಗೆ 5G ಸ್ಮಾರ್ಟ್‌ಫೋನ್ ಬಿಡುಗಡೆ! 21GB RAM ಮತ್ತು 108MP ಕ್ಯಾಮೆರಾ ಸೆಟಪ್
ಆನ್ ಲೈನ್ ವಂಚನೆ; (Online Fraud)
ಇಂದು ಬಹುತೇಕ ಯಾವುದೇ ಹಣಕಾಸು ವ್ಯವಹಾರ ಮಾಡುವುದಿದ್ದರೂ ಅದನ್ನು ಆನ್ ಲೈನ್ ಮೂಲಕವೇ ಮಾಡುತ್ತೇವೆ. ಇನ್ನು ಆನ್ಲೈನ್ ನಲ್ಲಿ ಕರೆ (Call) ಮಾಡುವುದು ಮೆಸೇಜ್ (SMS) ಕಳುಹಿಸುವುದು ಎಲ್ಲಾ ಪ್ರಕ್ರಿಯೆಗಳು ಕೂಡ ನಡೆಯುತ್ತೆ..
ಆದರೆ ಇದರಿಂದಲೇ ಸಾಕಷ್ಟು ವಂಚನೆ ಕೂಡ ದಾಖಲಾಗಿದೆ. ಇತ್ತೀಚಿಗೆ ಸ್ಪಾಮ್ ಕರೆಗಳು (spam Calls) ಕೂಡ ಹೆಚ್ಚುತ್ತಿದ್ದು ಗೊತ್ತಿಲ್ಲದೇ ಇರುವ ನಂಬರ್ ಗಳಿಂದ ಕರೆ ಮಾಡಿ ಕ್ರೈಂ (Crime) ಮಾಡುವವರ ಸಂಖ್ಯೆ ಹೆಚ್ಚಿದೆ.
ಇದೇ ಕಾರಣಕ್ಕೆ ಈ ಎಲ್ಲಾ ಸಮಸ್ಯೆಗಳು ಇನ್ನು ಮುಂದೆ ಜನರಿಗೂ ತೊಂದರೆ ಮಾಡಬಾರದು ಎನ್ನುವ ಕಾರಣಕ್ಕೆ ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಹೊಸ ನಿಯಮ ಜಾರಿಗೆ ತಂದಿರುವುದಾಗಿ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ತಿಳಿಸಿದ್ದಾರೆ.
ಮಿಡ್‌ರೇಂಜ್, ಪ್ರೀಮಿಯಂ ಸ್ಮಾರ್ಟ್‌ಫೋನ್! ರಿಂಗ್ ಲೈಟ್ ಕ್ಯಾಮೆರಾದೊಂದಿಗೆ 5G ಫೋನ್ ಖರೀದಿಸಿ
ಹೊಸ ಸಿಮ್ ಖರೀದಿಗೆ ಹೊಸ ನಿಯಮ
ನಮ್ಮ ದೇಶದಲ್ಲಿ ಒಬ್ಬರಿಗೆ 9 ಸಿಮ್ ಖರೀದಿ ಮಾಡಲು ಅವಕಾಶವಿತ್ತು. ಆದರೆ ಈಗ ಇದರ ಸಂಖ್ಯೆಯನ್ನು ಆರಕ್ಕೆ ಇಳಿಸಲಾಗಿದೆ. ಇದರ ಜೊತೆಗೆ ಸರ್ಕಾರ ಜಾರಿಗೆ ತಂದಿರುವ ಹೊಸ ಕಟ್ಟುನಿಟ್ಟಿನ ನಿಯಮದ ಪ್ರಕಾರ ಒಂದೇ ಸಮಯದಲ್ಲಿ ಒಬ್ಬ ವ್ಯಕ್ತಿ ಬಹು ಸಿಮ್ (Multiple Sim Purchase) ಖರೀದಿ ಮಾಡುವ ಹಾಗಿಲ್ಲ.
ಇದನ್ನು ಡಿಜಿಟಲ್ ವಂಚನೆಗೆ ಬಳಸಿಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಸಿಮ್ ಕಾರ್ಡ್ ಮಾರಾಟ ಮಾಡುವ ಡಿಲರ್ ಗಳು ಕೂಡ ಪೊಲೀಸ್ ಪರಿಶೀಲನೆಗೆ ಒಳಪಡಬೇಕು. ಎನ್ನುವ ನಿಯಮ ಜಾರಿಗೆ ಬಂದಿದೆ.
ಸಿಮ್ ಡೀಲರ್ ಪರವಾನಿಗೆ ರದ್ದು
ಸಿಮ್ ಮಾರಾಟ ಮಾಡುವವರು ಇನ್ನು ಮುಂದೆ ಹೆಚ್ಚು ಜಾಗರೂಕರಾಗಿ ಇರಬೇಕು. ಸಿಮ್ ಡೀಲರ್ ಗಳು ಹಾಗೂ ಮಾರಾಟ ಮಾಡುವವರು ಗ್ರಾಹಕರ ಕೆವೈಸಿ (KYC) ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು. ದೇಶದಿಂದ ಈಗಾಗಲೇ 52 ಲಕ್ಷ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ವಂಚನೆ ಮಾಡುತ್ತಿದ್ದ 66,000 ವಾಟ್ಸ್ ಆಪ್ ಖಾತೆಗಳನ್ನು ಹಾಗೂ 67 ಸಿಮ್ ಕಾರ್ಡ್ ಡೀಲರ್ಗಳನ್ನು ಗುರುತಿಸಿದ್ದು ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಜೈಲು ಶಿಕ್ಷೆ 10 ಲಕ್ಷದವರೆಗೆ ದಂಡ
ಇನ್ನು ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಸಿಮ್ ಕಾರ್ಡ್ ನಲ್ಲಿ ಯಾವುದೇ ವಂಚನೆ ಕಂಡು ಬಂದರೆ, ಈ ಹೊಸ ನಿಯಮವನ್ನು ಉಲ್ಲಂಘಿಸಿದರೆ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದು.
ಇನ್ನು ಮುಂದೆ ಹೊಸ ಸಿಮ್ ಖರೀದಿ ಮಾಡುವವರು ಬಯೋಮೆಟ್ರಿಕ್ (Biometric) ಪರಿಶೀಲನೆ ಮಾಡಿಸಿಕೊಳ್ಳಬೇಕಾಗುತ್ತದೆ. ಸರಿಯಾದ ದಾಖಲೆಗಳನ್ನು ಕೊಟ್ಟು ಸಿಮ್ ಖರೀದಿ ಮಾಡಬೇಕು. ನಿಮ್ಮ ಸಿಮ್ ಕಾರ್ಡ್ ಬಳಸಿ ಬೇರೆಯವರು ವಂಚನೆ ಮಾಡುತ್ತಿರುವುದು ನಿಮಗೆ ತಿಳಿದುಬಂದರೆ ಅದನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಸಚಿವರು ತಿಳಿಸಿದ್ದಾರೆ.
Ashwini Vaishnav About New Rules on Sim Card Purchase and Cyber Crime
ಸಿಮ್ ಡೀಲರ್ ಪರವಾನಿಗೆ ರದ್ದು



