ಜಿಯೋ, ಏರ್‌ಟೆಲ್, ವಿಐ ಜಿದ್ದಾಜಿದ್ದಿ! ಗ್ರಾಹಕರಿಗಂತೂ ಬಂಪರ್ ಪ್ಲಾನ್‌ಗಳು
Recharge Plans : ಜಿಯೋ, ಏರ್‌ಟೆಲ್, ವೋಡಾಫೋನ್ ಐಡಿಯಾ ಉಚಿತ JioHotstar Subscription ಪ್ಲಾನ್‌ಗಳು! ದರ 100 ರೂಪಾಯಿಯಿಂದ ಪ್ರಾರಂಭ
- 100 ರೂಪಾಯಿಯಿಂದ ಪ್ರಾರಂಭವಾಗುವ JioHotstar ಫ್ರೀ ಪ್ಲಾನ್‌ಗಳು
- Jio, Airtel, Vi ಗ್ರಾಹಕರಿಗೆ 3 ತಿಂಗಳ ಫ್ರೀ ಸಬ್‌ಸ್ಕ್ರಿಪ್ಶನ್
- 15GB ಡೇಟಾ ಸಹಿತ ಕೇವಲ 200 ರೂಪಾಯಿಯೊಳಗಿನ ವಿಶೇಷ ಪ್ಲಾನ್‌ಗಳು
ಜಿಯೋ (Jio), ಏರ್‌ಟೆಲ್ (Airtel), ವೋಡಾಫೋನ್ ಐಡಿಯಾ (Vi) ಇದೀಗ ತಮ್ಮ ಗ್ರಾಹಕರಿಗೆ ಅಗ್ಗದ ದರದಲ್ಲಿ JioHotstar ಉಚಿತವಾಗಿ ನೀಡುವ ವಿಶೇಷ ಪ್ಲಾನ್‌ಗಳನ್ನು (Recharge Plans) ಪರಿಚಯಿಸಿವೆ.
100 ರಿಂದ 200 ರೂಪಾಯಿ ಒಳಗಿರುವ ಈ ಪ್ಲಾನ್‌ಗಳಲ್ಲಿ (Prepaid Plans) ನೀವು ಡೇಟಾದ ಜೊತೆಗೆ ಮೂರು ತಿಂಗಳ ಫ್ರೀ ಸಬ್‌ಸ್ಕ್ರಿಪ್ಶನ್ ಪಡೆಯಬಹುದು.
ಇದನ್ನೂ ಓದಿ: ಜಿಯೋ ಆಫರ್! ಬರೀ ₹100 ರೂಪಾಯಿಗೆ 5ಜಿಬಿ ಡೇಟಾ, 3 ತಿಂಗಳ ವ್ಯಾಲಿಡಿಟಿ
Jio, Airtel, Vi ಗ್ರಾಹಕರಿಗೆ ಬಂಪರ್ ಆಫರ್!
ಸಿನಿಮಾ, ಕ್ರಿಕೆಟ್, ವೆಬ್‌ಸೀರಿಸ್ ಮತ್ತು ಟಿವಿ ಶೋಗಳನ್ನು JioHotstar ನಲ್ಲಿ ಉಚಿತವಾಗಿ ನೋಡಲು ಯಾವ ಪ್ಲಾನ್ ಆಯ್ಕೆ ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್ ಐಡಿಯಾ ಈಗ ತಗ್ಗಿದ ಬೆಲೆಯ ಪ್ಲಾನ್‌ಗಳೊಂದಿಗೆ ಮೂರು ತಿಂಗಳ Hotstar Mobile Subscription ಉಚಿತವಾಗಿ ನೀಡುತ್ತಿದೆ.
ಖುಷಿಯ ಸಂಗತಿ ಏನೆಂದರೆ, ಈ ಪ್ಲಾನ್‌ಗಳು ಕೇವಲ 100 ರೂಪಾಯಿಯಿಂದ ಪ್ರಾರಂಭವಾಗುತ್ತವೆ ಮತ್ತು 15GB ಡೇಟಾ ಕೂಡಾ ಲಭ್ಯವಿದೆ!
Jio 100 ರೂ. ಪ್ಲಾನ್ – ಕಡಿಮೆ ಖರ್ಚಿನಲ್ಲಿ ಬಿಗ್ ಆಫರ್!
ಜಿಯೋ ತನ್ನ ಬಳಕೆದಾರರಿಗೆ 100 ರೂ. ಗೆ ಹೊಸ ಪ್ಲಾನ್ ಅನ್ನು ಪರಿಚಯಿಸಿದ್ದು, ಇದರಲ್ಲಿ 5GB ಡೇಟಾ ಮತ್ತು 90 ದಿನಗಳ JioHotstar ಫ್ರೀ ಸಬ್‌ಸ್ಕ್ರಿಪ್ಶನ್ ಸಿಗಲಿದೆ. ಈ ಸಬ್‌ಸ್ಕ್ರಿಪ್ಶನ್ ಅನ್ನು ನೀವು ಮೊಬೈಲ್ ಹಾಗೂ ಟಿವಿ ಎರಡರಲ್ಲೂ ಬಳಸಬಹುದು. ಕಡಿಮೆ ಬೆಲೆಗೆ ಉತ್ತಮ ಪ್ಲಾನ್ ಹುಡುಕುತ್ತಿರುವವರಿಗೆ ಇದು ಸೂಕ್ತ ಆಯ್ಕೆ!
ಇದನ್ನೂ ಓದಿ: ಜಿಯೋ 336 ದಿನಗಳ ಬಂಪರ್ ಪ್ಲಾನ್ ಬಿಡುಗಡೆ! ಕಡಿಮೆ ಬೆಲೆ, ಭಾರೀ ಬೆನಿಫಿಟ್
Vi 151 ರೂ. ಪ್ಲಾನ್ – ಹೆಚ್ಚು ಡೇಟಾ, ಉಚಿತ Hotstar!
ವೋಡಾಫೋನ್ ಐಡಿಯಾ (Vi) ಕೂಡಾ 151 ರೂಪಾಯಿ ಪ್ಲಾನ್ ಅನ್ನು ನೀಡುತ್ತಿದ್ದು, 4GB ಡೇಟಾ ಜೊತೆಗೆ 30 ದಿನಗಳ ವ್ಯಾಲಿಡಿಟಿ ಮತ್ತು 3 ತಿಂಗಳ Hotstar Mobile Subscription ಉಚಿತವಾಗಿ ಸಿಗಲಿದೆ. ಹೆಚ್ಚುವರಿ ಡೇಟಾ ಬೇಕಾದವರಿಗೆ ಇದು ಒಳ್ಳೆಯ ಆಯ್ಕೆ!
Airtel 160 ರೂ. ಪ್ಲಾನ್ – ಶಾಟ್ ಟರ್ಮ್ ಬೆಸ್ಟ್ ಡೀಲ್!
ಏರ್‌ಟೆಲ್ ಗ್ರಾಹಕರಿಗೆ 160 ರೂ. ಪ್ಲಾನ್ ನಲ್ಲಿ 7 ದಿನಗಳ ವ್ಯಾಲಿಡಿಟಿ, 5GB ಡೇಟಾ, ಜೊತೆಗೆ 3 ತಿಂಗಳ Hotstar Mobile Subscription ಉಚಿತವಾಗಿ ದೊರಕಲಿದೆ. ಕಡಿಮೆ ಅವಧಿಗೆ ಹೆಚ್ಚಿನ ಪ್ರಯೋಜನ ಪಡೆಯಲು ಈ ಪ್ಲಾನ್ ಸೂಕ್ತ!
Vi 169 ರೂ. ಪ್ಲಾನ್ – ಹೆಚ್ಚು ಡೇಟಾ ಬೇಕಾದವರಿಗೆ!
Vi ಗ್ರಾಹಕರಿಗೆ 169 ರೂ. ಪ್ಲಾನ್ ನಲ್ಲಿ 8GB ಡೇಟಾ ಲಭ್ಯವಿದ್ದು, 30 ದಿನಗಳ ವ್ಯಾಲಿಡಿಟಿ ಯೊಂದಿಗೆ JioHotstar Mobile Subscription ಉಚಿತವಾಗಿ ನೀಡಲಾಗುತ್ತದೆ. ನಿಯಮಿತವಾಗಿ ಹೆಚ್ಚಿನ ಡೇಟಾ ಬಳಸುವವರು ಈ ಪ್ಲಾನ್ ಪ್ರಯೋಜನ ಪಡೆಯಬಹುದು.
Jio 195 ರೂ. ಪ್ಲಾನ್ – ಹೈ ಡೇಟಾ ಬೆಸ್ಟ್ ಆಫರ್!
ಜಿಯೋ ತನ್ನ ಬಳಕೆದಾರರಿಗೆ 195 ರೂ. ಪ್ಲಾನ್ ನಲ್ಲಿ 15GB ಡೇಟಾ, 90 ದಿನಗಳ Hotstar Mobile Subscription ಉಚಿತವಾಗಿ ನೀಡುತ್ತಿದೆ. ಈ ಪ್ಲಾನ್ ಮೊಬೈಲ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ಹೆಚ್ಚು ಡೇಟಾ ಮತ್ತು ಉಚಿತ Hotstar Subscription ಬೇಕಾದವರಿಗೆ ಇದು ಸೂಕ್ತ ಆಯ್ಕೆ.
ನಿಮ್ಮ ಮನರಂಜನೆಗೆ ಬಿಗ್ ಆಫರ್ ಬೇಕೇ? ಹಾಗಿದ್ದರೆ, ಈ 100-200 ರೂಪಾಯಿಯೊಳಗಿನ Jio, Airtel, Vi ಪ್ಲಾನ್‌ಗಳು ನಿಮಗೆ ಸರಿಹೊಂದಬಹುದು. ನಿಮ್ಮ ಬಳಕೆಗೆ ಸೂಕ್ತವಾದ ಪ್ಲಾನ್ ಆಯ್ಕೆ ಮಾಡಿ, ಉಚಿತ JioHotstar Subscription ನ ಎಂಜಾಯ್ ಮಾಡಿ.
Best Free JioHotstar Plans Under 200 Rupees
Our Whatsapp Channel is Live Now 👇