Technology

ನಿಮಗೆ ಮೊಬೈಲ್ ಬ್ಯಾಕ್ ಕವರ್ ಪೌಚ್ ನಲ್ಲಿ ಹಣ ಇಡೋ ಅಭ್ಯಾಸ ಇದ್ಯಾ? ಹಾಗಿದ್ರೆ ಇನ್ಮೇಲೆ ಹುಷಾರಾಗಿರಿ

ನಮ್ಮಲ್ಲಿರುವ ಬಹುತೇಕ ಎಲ್ಲಾ ಜನರ ಬಳಿ ಸ್ಮಾರ್ಟ್ಫೋನ್ (Smartphone) ಇದ್ದೆ ಇರುತ್ತದೆ. ಅವರವರು ಅವರ ಆರ್ಥಿಕ ಪರಿಸ್ಥಿತಿಯ ಅನುಸಾರ ಸ್ಮಾರ್ಟ್ ಫೋನ್ ಖರೀದಿ ಮಾಡಿರುತ್ತಾರೆ. ಒಂದು ಸ್ಮಾರ್ಟ್ ಫೋನ್ ಖರೀದಿ ಮಾಡಿದರೆ, ಅದಕ್ಕೆ ಪೌಚ್ ಬ್ಯಾಕ್ ಕವರ್ (Mobile Back Cover) ಇದೆಲ್ಲವನ್ನು ಹಾಕುತ್ತೇವೆ..

ಆದರೆ ಕೆಲವರಿಗೆ ಪೌಚ್ ಹಿಂದೆ ಬ್ಯಾಕ್ ಕವರ್ ಹಿಂದೆ ಹಣ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಅಂಥವರಿಗಾಗಿ ಇಂದಿನ ವಿಶೇಷ ಮಾಹಿತಿ. ಲೇಖನವನ್ನು ತಪ್ಪದೇ ಓದಿ..

Do you have the habit of keeping money in your mobile pouch

ಈಗೆಲ್ಲಾ ಹಣಕಾಸಿನ ವಹಿವಾಟುಗಳಿಗೆ ಸ್ಮಾರ್ಟ್ ಫೋನ್ (Smartphone) ಮೂಲಕ ಯುಪಿಐ ಆಪ್ ಗಳನ್ನೇ ಬಳಸಿ ಹಣಕಾಸಿನ ವರ್ಗಾವಣೆ ಮಾಡುತ್ತೇವೆ. ಇದೆಲ್ಲಾ ಏನೇ ಇದ್ದರೂ ಕೆಲವೊಮ್ಮೆ ಕ್ಯಾಶ್ ಬೇಕಾಗುತ್ತದೆ. ತಕ್ಷಣಕ್ಕೆ ಹಣ ಪಡೆಯುವುದಕ್ಕೆ, ನಿಮ್ಮ ಬಳಿ ಎಟಿಎಂ ಕಾರ್ಡ್ (ATM Card) ಅಥವಾ ಕ್ರೆಡಿಟ್ ಕಾರ್ಡ್ (Credit Card) ಇರಬೇಕು.

ಆದರೆ ಕೆಲವರಿಗೆ ತಮ್ಮ ಫೋನ್ ಪೌಚ್ ನಲ್ಲಿ ಹಣ ಇಟ್ಟುಕೊಳ್ಳುವ ಅಭ್ಯಾಸ ಇರುತ್ತದೆ. ಈ ಒಂದು ಅಭ್ಯಾಸ ಅಪಾಯಕಾರಿ ಎಂದು ಈಗ ತಿಳಿದುಬಂದಿದ್ದು, ಇದರ ಬಗ್ಗೆ ಇಂದು ಸಂಪೂರ್ಣ ಮಾಹಿತಿಯನ್ನು ನಿಮಗಾಗಿ ತಿಳಿಸಿಕೊಡುತ್ತೇವೆ ನೋಡಿ..

ಈ ಕೆಲಸವನ್ನು ತಕ್ಷಣವೇ ನಿಲ್ಲಿಸಿ:

ಕೆಲವೊಬ್ಬರ ಅಭ್ಯಾಸ ಅಪಾಯಕ್ಕೆ ಕಾರಣ ಆಗುತ್ತದೆ ಎಂದು ಹೇಳಿದರೆ ತಪ್ಪಲ್ಲ. ಹೌದು, ಕೆಲವೊಬ್ಬರು ಹಣದ ನೋಟ್ ಗಳು, ಬಿಲ್, ಚಿಲ್ಲರೆ ನೋಟ್, ಟಿಕೆಟ್, ಚಿಕ್ಕದಾದ ಕೀಗಳು ಇದೆಲ್ಲವನ್ನು ಕೂಡ ಮೊಬೈಲ್ ಪೌಚ್ ಗೆ ಹಾಕುತ್ತಾರೆ.

ಆದರೆ ಅದು ಕೆಟ್ಟದ್ದು, ನಾ ಮೊಬೈಲ್ ಫೋನ್ ಗಳು ಆಗಾಗ ಹೀಟ್ ಆಗುವ ಕಾರಣ, ಒಂದು ವೇಳೆ ಹೀಟ್ ಜಾಸ್ತಿ ಆದಾಗ ಅದರ ಜೊತೆಗೆ ಕಾಗದ, ಪ್ಲಾಸ್ಟಿಕ್ ಅಥವಾ ಇನ್ನೇನಾದರೂ ಇದ್ದರೆ, ಬೆಂಕಿ ಉತ್ಪತ್ತಿ ಆಗುವ ಸಂಭವ ಇರುತ್ತದೆ. ಇದರಿಂದ ನಿಮ್ಮ ಮೊಬೈಲ್ ಫೋನ್ ಬ್ಲಾಸ್ಟ್ ಆಗಬಹುದು.

ಬಹಳಷ್ಟು ಸಾರಿ ನಾವು ಅತಿಯಾಗಿ ಫೋನ್ ಬಳಸುತ್ತೇವೆ, ಫೋನ್ ಚಾರ್ಜ್ ಆಗುತ್ತಿದ್ದರು ಬಳಕೆ ಮಾಡುತ್ತೇವೆ. ಬ್ಯಾಟರಿ (Mobile Battery) ಪೂರ್ತಿ ಕಡಿಮೆ ಆಗಿ, ಡೆಡ್ ಆಗುವ ಸ್ಥಿತಿಗೆ ಬಂದಾಗ ಚಾರ್ಜ್ ಗೆ ಹಾಕುತ್ತೇವೆ. ಈ ರೀತಿ ಮಾಡಿದಾಗ ಫೋನ್ ಚಾರ್ಜ್ ಆಗುವ ವೇಳೆ ಹೀಟ್ ಆಗುತ್ತದೆ.

ಅಂಥ ಸಮಯದಲ್ಲಿ ಫೋನ್ ಕೆಳಗೆ ಪೇಪರ್ ಅಥವಾ ಬ್ಲಾಸ್ಟ್ ಆಗಬಹುದಾದ ಯಾವುದೇ ಪೇಪರ್, ಪ್ಲಾಸ್ಟಿಕ್ ವಸ್ತುಗಳು ಇದ್ದರೆ, ನಿಮ್ಮ ಫೋನ್ ಸ್ಫೋಟವಾಗಬಹುದು. ಹಾಗಾಗಿ ಇಂಥ ವಸ್ತುಗಳನ್ನು ಫೋನ್ ಹತ್ತಿರ ಇಡಬೇಡಿ.

Money in Mobile Coverಈ ರೀತಿ ಮಾಡಬೇಡಿ:

*ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವಾಗ, ಫೋನ್ ಬಳಕೆ ಮಾಡುವುದಕ್ಕೆ ಹೋಗಬೇಡಿ.

*ಫೋನ್ ಯೂಸ್ ಮಾಡುವಾಗ ಹೀಟ್ ಆದರೆ ಕೆಲ ನಿಮಿಷಗಳ ಕಾಲ ಫೋನ್ ಸ್ವಿಚ್ ಆಫ್ ಮಾಡಿ ಅಥವಾ ಫ್ಲೈಟ್ ಮೋಡ್ ಗೆ ಹಾಕಿ, ಅಥವಾ 10 ನಿಮಿಷ ಡೇಟಾ ಆಫ್ ಮಾಡಿ ಬಿಡಿ

*ಫೋನ್ ಹಿಂದೆ ಬಸ್ ಪಾಸ್, ಎಟಿಎಂ ಕಾರ್ಡ್, ಹಣ ಹಾಗೂ ಇನ್ಯಾವುದೇ ವಸ್ತುವನ್ನು ಇಡಬೇಡಿ, ಅದು ಅಪಾಯ ತರಬಹುದು.

*ಬಳಸದೇ ಇರುವ ಆಪ್ ಗಳನ್ನು Uninstall ಮಾಡಿ, ಇದರಿಂದ ಸಿಸ್ಟಮ್ ಹೀಟ್ ಆಗುವುದನ್ನು ತಪ್ಪಿಸಬಹುದು.

*ಫೋನ್ ಗೆ ಟೈಟ್ ಆಗಿರುವ ಬ್ಯಾಕ್ ಕವರ್ ಗಳನ್ನ ಹಾಕಬೇಡಿ.

*ಕಂಪನಿ ಇಂದ ಕೊಡುವ ಪೌಚ್ ಬಳಸುವುದೇ ಒಳ್ಳೆಯದು.

Do you have the habit of keeping money in your mobile pouch

Related Stories