Technology

ಜಿಯೋ ಪ್ಲಾನ್‌ನಲ್ಲಿ ಬರಿ ₹100 ರೂಪಾಯಿಗೆ ಹಾಟ್‌ಸ್ಟಾರ್, ಓಟಿಟಿಗಳು ಫ್ರೀ ಫ್ರೀ ಫ್ರೀ!

ಜಿಯೋ ತನ್ನ ಮೂರು ಪ್ರಿಪೇಡ್ ಪ್ಯಾಕ್‌ಗಳೊಂದಿಗೆ ಬಳಕೆದಾರರಿಗೆ JioHotstar (OTT subscription) ಅನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ₹100 ರಿಂದ ಆರಂಭವಾಗುವ ಈ ಪ್ಯಾಕ್‌ಗಳು ಕ್ರಿಕೆಟ್ ಮತ್ತು ಎಂಟರ್‌ಟೈನ್‌ಮೆಂಟ್‌ಗೆ ಸೂಕ್ತ!

Publisher: Kannada News Today (Digital Media)

  • ₹100ರಿಂದ ಆರಂಭವಾಗುವ ಹಾಟ್‌ಸ್ಟಾರ್ ಫ್ರೀ ಪ್ಲಾನ್‌ಗಳು
  • 5GB, 2GB ದೈನಂದಿನ ಡೇಟಾ ಪ್ಯಾಕ್‌ಗಳು ಲಭ್ಯ
  • ಕರೆ, ಎಸ್‌ಎಂಎಸ್‌ ಜೊತೆ JioTV ಮತ್ತು JioCloud ಆಕ್ಸೆಸ್ ಕೂಡ

ಫ್ರೀ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್ ಬಯಸುತ್ತಿದ್ದೀರಾ? ಜಿಯೋ ನೀಡುತ್ತಿದೆ ಸರ್ಪ್ರೈಸ್ ಪ್ಯಾಕ್! ಒಟ್ಟಾರೆ ಮನರಂಜನೆಗೆ ಹೆಚ್ಚು ಹಣ ಖರ್ಚು ಮಾಡದೆ, Jio ಬಳಕೆದಾರರು ಇದೀಗ ₹100 ರಿಂದ ಪ್ರಾರಂಭವಾಗುವ ಪ್ರೀಪೇಡ್ ಪ್ಯಾಕ್‌ಗಳ (Prepaid Recharge Plans) ಮೂಲಕ (OTT platforms) ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್ ಪಡೆಯಬಹುದಾಗಿದೆ.

ಮೂರು ವಿಭಿನ್ನ ಪ್ಲಾನ್‌ಗಳನ್ನು ಜಿಯೋ ಪ್ರಸ್ತುತ ಪಡಿಸಿದ್ದು, ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ನೀವು ಆನ್‌ಲೈನ್ ಕ್ರಿಕೆಟ್ ಅಥವಾ ಇತರ ಫೇವರಿಟ್ ಶೋಗಳನ್ನು ಯಾವುದೇ ಹೆಚ್ಚುವರಿ ಖರ್ಚಿಲ್ಲದೆ ನೋಡಿ ಖುಷಿ ಪಡಬಹುದು.

ಜಿಯೋ ಪ್ಲಾನ್‌ನಲ್ಲಿ ಬರಿ ₹100 ರೂಪಾಯಿಗೆ ಹಾಟ್‌ಸ್ಟಾರ್, ಓಟಿಟಿಗಳು ಫ್ರೀ ಫ್ರೀ ಫ್ರೀ!

ಇದನ್ನೂ ಓದಿ: ಜಿಯೋ, ಏರ್‌ಟೆಲ್‌ ಜಿದ್ದಾ-ಜಿದ್ದಿ, ಬರಿ 11 ರೂಪಾಯಿಗೆ ರಿಚಾರ್ಜ್‌ ಪ್ಲಾನ್ ಬಿಡುಗಡೆ

₹100 ಪ್ಯಾಕ್: 5GB ಡೇಟಾ ಜೊತೆಗೆ ಹಾಟ್‌ಸ್ಟಾರ್ ಉಚಿತ

ಈ ಪ್ಲಾನ್‌ನಲ್ಲಿ ಕರೆ ಅಥವಾ ಎಸ್‌ಎಂಎಸ್ ಸೌಲಭ್ಯವಿಲ್ಲ. ಕೇವಲ ಡೇಟಾ ಪ್ಯಾಕ್ ಆಗಿದ್ದು, 90 ದಿನಗಳ ಮಾನ್ಯತೆ ಜೊತೆಗೆ 5GB ಹೆಚ್ಚುವರಿ ಡೇಟಾ ಮತ್ತು JioHotstar (mobile only) ಸಬ್‌ಸ್ಕ್ರಿಪ್ಷನ್ ನೀಡಲಾಗುತ್ತದೆ.

₹195 ಪ್ಯಾಕ್: ಕ್ರಿಕೆಟ್ ಪ್ರಿಯರಿಗೆ ಪರ್ಫೆಕ್ಟ್ ಆಯ್ಕೆ

ಈ ಪ್ಯಾಕ್‌ನಲ್ಲಿಯೂ ಕರೆ ಅಥವಾ SMS ಸೌಲಭ್ಯವಿಲ್ಲ. ಆದರೆ 15GB ಡೇಟಾ ಲಭ್ಯವಿದ್ದು, ಇದು ಕೂಡ 90 ದಿನಗಳ ಪ್ಯಾಕ್. ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್ ಜೊತೆಗೆ ಇದು ಕ್ರಿಕೆಟ್ ಫ್ಯಾನ್ಸ್‌ಗಾಗಿ ಸಿದ್ಧಪಡಿಸಿದ ವಿಶೇಷ ಡೇಟಾ ಪ್ಯಾಕ್ ಆಗಿದೆ.

Jio Recharge Plans

₹949 ಪ್ಯಾಕ್: ಕಾಲ್, SMS, OTT ಎಲ್ಲವೂ ಒಂದೇ ಪ್ಯಾಕ್‌ನಲ್ಲಿ

ಈ ಪ್ಯಾಕ್ 84 ದಿನಗಳ ಮಾನ್ಯತೆ ನೀಡುತ್ತದೆ. ಪ್ರತಿದಿನ 2GB ಡೇಟಾ, ಎಲ್ಲಾ ನೆಟ್ವರ್ಕ್‌ಗಳಿಗೆ ಅನಿಯಮಿತ ಕರೆಗಳು, 100 SMS ಪ್ರತಿದಿನ ಜೊತೆಗೆ JioTV, JioCloud ಆಕ್ಸೆಸ್ ಇರುತ್ತದೆ. ಜೊತೆಗೆ, JioHotstar (mobile/tv) ಸಬ್‌ಸ್ಕ್ರಿಪ್ಷನ್ ಕೂಡ ಲಭ್ಯವಿದೆ. ಜಿಯೋ 5G ಹೊಂದಿರುವ ಬಳಕೆದಾರರಿಗೆ ಅನಿಯಮಿತ 5G ಡೇಟಾ ಸಹ ಲಭಿಸುತ್ತದೆ.

ಈ ಪ್ಯಾಕ್‌ಗಳು ಯಾರಿಗೆ ಉಪಯುಕ್ತ?

ಮತ್ತಷ್ಟು ಹಣ ಖರ್ಚು ಮಾಡದೇ OTT ವೀಕ್ಷಿಸಲು ಬಯಸುವವರಿಗೆ, ವಿಶೇಷವಾಗಿ ಕ್ರಿಕೆಟ್, ಸಿನಿಮಾ ಮತ್ತು ವೆಬ್‌ಸೀರಿಸ್ ಪ್ರಿಯರಿಗೆ ಈ ಪ್ಯಾಕ್‌ಗಳು ಹೆಚ್ಚು ಅನುಕೂಲಕರವಾಗಿವೆ. ನೇರವಾಗಿ OTTಗೆ ಚಂದಾ ಕಟ್ಟದೆ ಜಿಯೋ ಪ್ಯಾಕ್‌ಗಳಿಂದಲೇ ಎಲ್ಲವೂ ಉಪಯೋಗಿಸಬಹುದಾಗಿದೆ.

Free JioHotstar Subscription Starts at Just ₹100

English Summary

Our Whatsapp Channel is Live Now 👇

Whatsapp Channel

Related Stories