ಈ ಒಂದು ಕೆಲಸ ಮಾಡದಿದ್ರೆ ನಿಮ್ಮ ಜಿಮೇಲ್ ಅಕೌಂಟ್ ಡಿಲೀಟ್! ಡೇಟಾ ಉಳಿಸಿಕೊಳ್ಳಲು ಇಂದೇ ಈ ಕೆಲಸ ಮಾಡಿ

ಈಗ ಇಮೇಲ್ ಐಡಿ (email id) ಎನ್ನುವುದು ಬಹಳ ಮುಖ್ಯ. ಯಾವುದೇ ಕೆಲಸಕ್ಕೆ ಅಥವಾ ನಮ್ಮ ಪರ್ಸನಲ್ ಡೇಟಾ ಸೇವ್ ಮಾಡಿಕೊಳ್ಳುವುದಕ್ಕೆ ಇಮೇಲ್ ಐಡಿ ಬಹಳ ಮುಖ್ಯವಾಗುತ್ತದೆ. ಅದರಲ್ಲು ಜಿಮೇಲ್ ಅಕೌಂಟ್ (Gmail Account) ಈಗ ಎಲ್ಲರೂ ಹೆಚ್ಚಾಗಿ ಬಳಸುತ್ತಿರುವ ಮೇಲ್ ಪ್ಲಾಟ್ ಫಾರ್ಮ್ ಆಗಿದೆ. ಇದು ಪ್ರಖ್ಯಾತ ಟೆಕ್ ಸಂಸ್ಥೆ ಗೂಗಲ್ ಇಂದ ತಯಾರಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ..

ಈಗ ಪ್ರತಿಯೊಬ್ಬರ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ನ ಮೇಲ್ ಐಡಿ ಜಿಮೇಲ್ ಐಡಿಯನ್ನು (Gmail id) ಬಳಸುತ್ತೇವೆ. ಜಿಮೇಲ್ ಐಡಿಗೆ ಎಲ್ಲವೂ ಲಿಂಕ್ ಆಗಿರುತ್ತದೆ. ಆದರೆ ಗೂಗಲ್ ಈಗ ತಮ್ಮ ಬಳಕೆದಾರರಿಗೆ ಒಂದು ಖಡಕ್ ಸಂದೇಶ ನೀಡಿದೆ. ಹಲವು ಗೂಗಲ್ ಅಕೌಂಟ್ ಗಳನ್ನು ಡಿಲೀಟ್ ಮಾಡಬಹುದು ಎಂದು ಗೂಗಲ್ ಮಾಹಿತಿ ನೀಡಿದೆ..

ಆಕ್ಟಿವ್ ಆಗಿರದ ಅಕೌಂಟ್ ನ ಡೇಟಾವನ್ನು (Account Data) ತೆಗೆದುಹಾಕಬೇಕು ಎಂದು ಗೂಗಲ್ ನಿರ್ಧಾರ ಮಾಡಿದೆ. ಕೆಲ ಸಮಯದ ಹಿಂದೆ ಗೂಗಲ್ ಒಂದು ವಾರ್ನಿಂಗ್ ನೀಡಿತ್ತು, ನಿಮ್ಮ ಬಳಿ ಇರುವ ಎಲ್ಲಾ ಡೇಟಾವನ್ನು ಸೇವ್ ಮಾಡಿ ಇಟ್ಟುಕೊಳ್ಳಿ, ಗೂಗಲ್ ನಿಮ್ಮ ಖಾತೆಗಳನ್ನು ಡಿಲೀಟ್ (Google account delete) ಮಾಡಬಹುದು ಎಂದು ತಿಳಿಸಿತ್ತು. ಈಗ ಗೂಗಲ್ ಇಂದ ಮತ್ತೊಂದು ಸಾರಿ ವಾರ್ನಿಂಗ್ ಬಂದಿದೆ.

ಈಗ ಗೂಗಲ್ ಹೇಳಿರುವುದು ಏನೆಂದರೆ, ಎಲ್ಲಾ ಗೂಗಲ್ ಬಳಕೆದಾರರು ಕೂಡ ತಮ್ಮ ಹಳೆಯ ಜಿಮೇಲ್ ಅಕೌಂಟ್ ಗಳಿಗೆ ಲಾಗಿನ್ ಮಾಡಿ, ಎಲ್ಲವನ್ನು ಚೆಕ್ ಮಾಡಬೇಕು ಎಂದು ಮಾಹಿತಿ ನೀಡಿದೆ. ಎರಡು ವರ್ಷಗಳ ಹಿಂದೆ ನಿಷ್ಕ್ರಿಯವಾಗಿರುವ ಗೂಗಲ್ ಅಕೌಂಟ್ ನ ಡೇಟಾವನ್ನು ಡಿಲೀಟ್ ಮಾಡುವುದಾಗಿ ಹೇಳಿದ್ದ ಗೂಗಲ್ ಈಗ ಆ ಜಿಮೇಲ್ ಅಕೌಂಟ್ ಅನ್ನೇ ಡಿಲೀಟ್ ಮಾಡುವುದಾಗಿ ಹೇಳಿದೆ..

ಇತ್ತೀಚೆಗೆ ಬ್ಲಾಗ್ ಪೋಸ್ಟ್ ಮಾಡಿರುವ ಗೂಗಲ್ ಸಂಸ್ಥೆ, ಎರಡು ವರ್ಷಗಳಿಂದ ಬಳಸಿರದ ಗೂಗಲ್ ಅಕೌಂಟ್ ಮತ್ತು ಅದರ ಪೂರ್ತಿ ಡೇಟಾವನ್ನು ಡಿಲೀಟ್ ಮಾಡುವುದಾಗಿ ತಿಳಿಸಿದೆ. ಗೂಗಲ್ ಅಕೌಂಟ್ ಗೆ ಲಿಂಕ್ ಆಗಿರುವ ಗೂಗಲ್ ಡ್ರೈವ್, ಗೂಗಲ್ ವರ್ಕ್ ಸ್ಪೇಸ್, ಜಿಮೇಲ್, ಗೂಗಲ್ ಡಾಕ್ಸ್, ಯೂಟ್ಯೂಬ್, ಗೂಗಲ್ ಕ್ಯಾಲೆಂಡರ್.

ಗೂಗಲ್ ಫೋಟೋಸ್ ಈ ಎಲ್ಲದರಲ್ಲೂ ಇರುವ ನಿಮ್ಮ ಜಿಮೇಲ್ ಡೇಟಾವನ್ನು ಸಂಪೂರ್ಣವಾಗಿ ಡಿಲೀಟ್ ಮಾಡುವುದಾಗಿ ತಿಳಿಸಿದೆ. ಪ್ರಸ್ತುತ ಈ ರೀತಿ ಮಾಡುವ ಮೊದಲು ಗೂಗಲ್ ಸ್ವಲ್ಪ ಸಮಯ ನೀಡಿದೆ. ಈ ವರ್ಷ ಡಿಸೆಂಬರ್ ಬಳಿಕ ಜಿಮೇಲ್ ಅಕೌಂಟ್ ಗಳನ್ನು ಡಿಲೀಟ್ ಮಾಡಲಿದೆ, ಹಾಗಾಗಿ ಜಿಮೇಲ್ ಐಡಿ ಆಕ್ಟಿವ್ ಇಲ್ಲದ ಬಳಕೆದಾರರು ತಮ್ಮ ಜಿಮೇಲ್ ಐಡಿಯನ್ನು ಉಳಿಸಿಕೊಳ್ಳಬೇಕು ಎಂದರೆ, ಇನ್ನು ಸಮಯವಿದೆ.

Gmail account might get deleted if you don't do this

ನೀವು ನಿಮ್ಮ ಗೂಗಲ್ ಅಕೌಂಟ್ ಅನ್ನು ಬಳಸಿ, ನಿಮ್ಮ ಜಿಮೇಲ್ ಐಡಿಯನ್ನು ಉಳಿಸಿಕೊಳ್ಳಬಹುದು. ಆದರೆ ಒಂದು ಸಾರಿ ನಿಮ್ಮ ಜಿಮೇಲ್ ಅಕೌಂಟ್ ಡಿಲೀಟ್ ಆದರೆ ಮತ್ತೆ ಅದನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಗೂಗಲ್ ಇಷ್ಟು ಖಡಕ್ ಆಗಿ ಸಂದೇಶ ಕೊಟ್ಟಿರುವಾಗ, ಹಳೆಯ ಜಿಮೇಲ್ ಐಡಿಗಳನ್ನು ಉಳಿಸಿಕೊಳ್ಳಬೇಕು ಎಂದು ಖಾತೆದಾರರು ಬಯಸಿದರೆ.

ಈಗ ತಮ್ಮ ಹಳೆಯ ಜಿಮೇಲ್ ಐಡಿಯನ್ನು ಆಕ್ಟಿವ್ ಆಗಿಟ್ಟುಕೊಂಡು, ಜಿಮೇಲ್ ಐಡಿಯನ್ನು ಚೆಕ್ ಮಾಡಿ, ಅವುಗಳಲ್ಲಿ ಕೆಲವು ಕೆಲಸ ಮಾಡುವುದು ಮಾಡುತ್ತಾ ಇದ್ದರೆ ನಿಮ್ಮ ಗೂಗಲ್ ಅಕೌಂಟ್ ಡಿಲೀಟ್ ಆಗುವುದಿಲ್ಲ.

Gmail account might get deleted if you don’t do this

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories