ಗೂಗಲ್ ಕ್ರೋಮ್ ಬ್ರೌಸರ್ ಬಳಕೆದಾರರಿಗೆ ಬಿಗ್ ಅಲರ್ಟ್! ಸರ್ಕಾರದಿಂದ ಎಚ್ಚರಿಕೆ
Google Chrome : ವಿಂಡೋಸ್ ಮತ್ತು ಮ್ಯಾಕ್ ಬಳಕೆದಾರರಿಗೆ ಗೂಗಲ್ ಕ್ರೋಮ್‌ನಲ್ಲಿ ಭದ್ರತಾ ಅಪಾಯದ ಎಚ್ಚರಿಕೆ ನೀಡಿದ ಭಾರತೀಯ ಸರ್ಕಾರ. ಕೂಡಲೇ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡುವುದು ಅಗತ್ಯ.

- ಹ್ಯಾಕರ್‌ಗಳಿಂದ ದೂರ ಉಳಿಯಲು ಕ್ರೋಮ್ ಅಪ್‌ಡೇಟ್ ಮಾಡುವುದು ಅತ್ಯವಶ್ಯಕ
- ಪಾಸ್‌ವರ್ಡ್ ಆಟೋ-ಸೇವ್ ಮಾಡುವುದು ಅಪಾಯಕಾರಿ
- ಗೂಗಲ್ ಕ್ರೋಮ್ ಬ್ರೌಸರ್ ಬಳಕೆದಾರರಿಗೆ ಎಚ್ಚರಿಕೆ
Update Google Chrome : ಹ್ಯಾಕರ್‌ಗಳು ವೆಬ್ ಬ್ರೌಸರ್‌ನಿಂದ (Browser) ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದುಕೊಳ್ಳುವ ಸಾಧ್ಯತೆ ಹೆಚ್ಚು ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಬ್ಯಾಂಕ್ ಖಾತೆಗಳ ಪಾಸ್‌ವರ್ಡ್‌ಗಳನ್ನು (Bank Account Passwords) ಆಟೋ-ಸೇವ್ ಮಾಡಿದರೆ ಹಣ ಕಳ್ಳತನವಾಗುವ ಅಪಾಯವಿದೆ.
ಬ್ರೌಸ್ ಮಾಡುವಾಗ ಯಾವುದೇ ಅನುಮತಿಗಳನ್ನು ನೀಡುವ ಮೊದಲು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ. ಜೊತೆಗೆ ವಿಶ್ವಾಸವಿಲ್ಲದ ವೆಬ್ ತಾಣಗಳಿಗೂ ಇಂದಿಗೂ ಭೇಟಿ ನೀಡಬೇಡಿ. ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವ ಜಾಲ ನಿಮಗೆ ಭಾರೀ ಸಂಕಷ್ಟ ತಂದೊಡ್ಡಬಹುದು.
ಇದನ್ನೂ ಓದಿ: ಏರ್ಟೆಲ್, ಜಿಯೋ ಕತೆ ಮುಗೀತು! BSNL ನಿಂದ ಅತ್ಯಂತ ಅಗ್ಗದ ಯೋಜನೆ ಬಿಡುಗಡೆ
ಸ್ಕಿಯಾ, ವಿ8 ಸೈಟ್‌ಗಳನ್ನು ಬಳಸುವವರು ಹೆಚ್ಚಿನ ಜಾಗ್ರತೆಯೊಂದಿಗೆ ಕ್ರೋಮ್ ಬಳಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಜೊತೆಗೆ, ಎಕ್ಸ್‌ಟೆನ್ಷನ್ APIಗಳನ್ನು ಇನ್‌ಸ್ಟಾಲ್ ಮಾಡುವುದು ತಡೆಯಲು ಸೂಚಿಸಿದ್ದಾರೆ. ರಿಮೋಟ್ ದಾಳಿ ಸಂಭವಿಸುವ ಅಪಾಯವೂ ಇದ್ದು, ವೈಯಕ್ತಿಕ ಡೇಟಾ ಕಳವು ಮಾಡಲು ಹ್ಯಾಕರ್‌ಗಳು ಕಾರ್ಯಪ್ರವೃತ್ತರಾಗಿದ್ದಾರೆ.
ವಿಂಡೋಸ್ ಮತ್ತು ಮ್ಯಾಕ್‌ನಲ್ಲಿ ಗೂಗಲ್ ಕ್ರೋಮ್‌ನ 133.0.6943.53/54 ಆವೃತ್ತಿಗೆ ಮುಂಚಿನ ಆವೃತ್ತಿಗಳನ್ನು ಬಳಸುತ್ತಿರುವವರು ಅಪಾಯದಲ್ಲಿದ್ದಾರೆ. ಲಿನಕ್ಸ್ ಬಳಕೆದಾರರು 133.0.6943.53 ಆವೃತ್ತಿಗೆ ಮುಂಚಿನ ಕ್ರೋಮ್ ಆವೃತ್ತಿಗಳನ್ನು ಬಳಸುತ್ತಿದ್ದರೆ ಭದ್ರತಾ ಬೆದರಿಕೆ ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ಇದೆ ಫಸ್ಟ್ ಟೈಮ್ ಕಡಿಮೆ ಬೆಲೆಗೆ ಐಫೋನ್ ಬಿಡುಗಡೆ! ಭಾರತದಲ್ಲಿ ಬೆಲೆ ಎಷ್ಟು?
ಭದ್ರತೆಯನ್ನು ಕಾಪಾಡಿಕೊಳ್ಳಲು ಕ್ರೋಮ್ ಬಳಕೆದಾರರು ಲೇಟೆಸ್ಟ್ ಅಪ್‌ಡೇಟ್‌ಗಳನ್ನು ಪರಿಶೀಲಿಸಬೇಕು. ಇದಕ್ಕಾಗಿ ಕ್ರೋಮ್‌ನ ತ್ರಿಕೋನ ಬಿಂದುಗಳನ್ನು ಕ್ಲಿಕ್ ಮಾಡಿ, ಮೆನು ಮೂಲಕ “Update” ಆಯ್ಕೆ ಮಾಡಿ ಸಾಫ್ಟ್‌ವೇರ್‌ನ ಹೊಸ ಆವೃತ್ತಿಗೆ ನವೀಕರಿಸಬೇಕು (Update Google Chrome) ಎಂದು ಸಲಹೆ ನೀಡಲಾಗಿದೆ.
Google Chrome Users Alerted of Major Security Threat




