ಬೇಕಾಬಿಟ್ಟಿ ಸಿಮ್ ಕಾರ್ಡ್ ಮಾರಾಟ ಮಾಡೋಂಗಿಲ್ಲ, ನಿಯಮ ಬದಲಾವಣೆ! ಪಾಲಿಸದಿದ್ದರೆ 10 ಲಕ್ಷ ದಂಡ

SIM Card Rules : ಫೋರ್ಜರಿ ತಡೆಗಟ್ಟಲು ಸರ್ಕಾರವು ಸಿಮ್ ಕಾರ್ಡ್‌ಗಳನ್ನು (Sim Cards) ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಅವರು ವಂಚನೆ ಚಟುವಟಿಕೆಗಳನ್ನು ತಡೆಯಲು ಸಿಮ್ ಕಾರ್ಡ್ ಡೀಲರ್‌ಗಳ (SIM Card Dealers) ಪೊಲೀಸ್ ಪರಿಶೀಲನೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ (Govt) ಎಂದು ಹೇಳಿದ್ದಾರೆ. ಇದಲ್ಲದೆ ಸರ್ಕಾರ 67000 ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

ಮೇ 2023 ರಿಂದ ಸಿಮ್ ಕಾರ್ಡ್ ಡೀಲರ್‌ಗಳ ವಿರುದ್ಧ 300 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ವಂಚನೆ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 66,000 ಖಾತೆಗಳನ್ನು WhatsApp ಸ್ವಯಂಚಾಲಿತವಾಗಿ ನಿರ್ಬಂಧಿಸಿದೆ

ಕೇವಲ 20 ಸಾವಿರಕ್ಕೆ iPhone ಮೀರಿಸುವ Vivo 5G ಫೋನ್ ಬಿಡುಗಡೆ! ಕ್ಯಾಮೆರಾ ಮತ್ತು ಬ್ಯಾಟರಿ ಕೂಡ ಅದ್ಭುತ

ನಿಯಮ ಉಲ್ಲಂಘಿಸಿದರೆ 10 ಲಕ್ಷ ದಂಡ

“ಈಗ ನಾವು ವಂಚನೆ ತಡೆಯಲು ಸಿಮ್ ಡೀಲರ್‌ಗಳ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದ್ದೇವೆ. ನಿಯಮಗಳನ್ನು ಉಲ್ಲಂಘಿಸುವ ಡೀಲರ್‌ಗಳಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು” ಎಂದು ವೈಷ್ಣವ್ ಅವರು ಹೇಳಿದರು. 10 ಲಕ್ಷ ಸಿಮ್ ಡೀಲರ್ ಗಳಿದ್ದು, ಪೊಲೀಸ್ ಪರಿಶೀಲನೆಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು ಎಂದರು.

ಹೆಚ್ಚು ಹೆಚ್ಚು ಸಿಮ್ ಕಾರ್ಡ್ ನೀಡುವುದನ್ನು DoT ಸ್ಥಗಿತಗೊಳಿಸಿದೆ ಮತ್ತು ಬದಲಿಗೆ ವ್ಯಾಪಾರ ಸಂಪರ್ಕಗಳ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುವುದು ಎಂದು ಸಚಿವರು ಹೇಳಿದರು. ಇದಲ್ಲದೇ ವ್ಯವಹಾರದ ಕೆವೈಸಿ, ಸಿಮ್ ತೆಗೆದುಕೊಳ್ಳುವವರ ಕೆವೈಸಿ ಕೂಡ ಮಾಡಲಾಗುವುದು ಎಂದು ವೈಷ್ಣವ್ ಹೇಳಿದ್ದಾರೆ.

Sim Card Rules

ಬಿಡುಗಡೆಯಾದ 5 ನಿಮಿಷಕ್ಕೆ 2 ಲಕ್ಷ ರೆಡ್ಮಿ ಫೋನ್‌ಗಳು ಮಾರಾಟ! ಈ ಕಡಿಮೆ ಬೆಲೆಯ ಹೊಸ ಫೋನ್ ಖರೀದಿಗೆ ಮುಗಿಬಿದ್ದ ಜನ

67,000 ವಿತರಕರು ಕಪ್ಪುಪಟ್ಟಿಗೆ

ಸರ್ಕಾರ 52 ಲಕ್ಷ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದೆ ಎಂದು ಸಚಿವರು ಹೇಳಿದರು. 67,000 ಡೀಲರ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ್ದರೆ, ಮೇ 2023 ರಿಂದ ಸಿಮ್ ಕಾರ್ಡ್ ಡೀಲರ್‌ಗಳ ವಿರುದ್ಧ 300 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ವಂಚನೆ ಚಟುವಟಿಕೆಗಳಲ್ಲಿ ತೊಡಗಿರುವ ಸುಮಾರು 66,000 ಖಾತೆಗಳನ್ನು WhatsApp ಸ್ವಯಂಚಾಲಿತವಾಗಿ ನಿರ್ಬಂಧಿಸಿದೆ ಎಂದು ಸಚಿವರು ಹೇಳಿದರು.

Government Mandates Police Verification Of Sim Card Dealers

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories