ರಿಚಾರ್ಜ್ ಮಾಡದೆ ಹೋದ್ರೆ ಸಿಮ್ ಕಾರ್ಡ್ ಎಷ್ಟು ದಿನ ಇರುತ್ತೆ? ಯಾವಾಗ ಡಿ ಆಕ್ಟಿವೇಟ್ ಆಗುತ್ತೆ!
Sim Card : ಮೊಬೈಲ್ ಫೋನ್ ಎದ್ಮೇಲೆ ಅದಕ್ಕೊಂದು ಸಿಮ್ ಕಾರ್ಡ್ ಇರಲೇಬೇಕು. ನಾವು ಯಾರ ಜೊತೆಗಾದರೂ ಸಂಪರ್ಕ ಸಾಧಿಸಬೇಕು ಅಂದ್ರೆ ಈಗ ಮೊಬೈಲ್ ಫೋನ್ ಅತ್ಯಗತ್ಯ.
ಒಂದು ಸಿಮ್ ಕಾರ್ಡ್ ಹಾಕಿಕೊಂಡು ಯಾರಿಗೆ ಬೇಕಾದರೂ ಕರೆ ಮಾಡಿ ಮಾತನಾಡಬಹುದು ಅಥವಾ ಸಂದೇಶ ಕಳುಹಿಸಬಹುದು ಆದರೆ ಇಂತಹ ಸಿಮ್ ಕಾರ್ಡ್ ಅನ್ನು ಒಂದು ವೇಳೆ ನೀವು ವ್ಯಾಲಿಡಿಟಿ ರಿಚಾರ್ಜ್ ಮಾಡದೆ ಇದ್ರೆ ಎಷ್ಟು ದಿನಗಳವರೆಗೆ ಆಕ್ಟಿವ್ (Sim Active) ಆಗಿ ಇಟ್ಟುಕೊಳ್ಳಬಹುದು ಗೊತ್ತಾ?
ಪ್ರತಿಯೊಬ್ಬರು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ಟೆಲಿಕಾಂ ಕಂಪನಿಯ ಸಿಮ್ ಕಾರ್ಡ್ ಅನ್ನು ಬಳಸುತ್ತಾರೆ. ಕೆಲವರು ಜಿಯೋ ಸಿಮ್ ಕಾರ್ಡ್ ಬಳಸುತ್ತಿದ್ದರೆ ಇನ್ನೂ ಕೆಲವರು ಏರ್ಟೆಲ್, ಬಿಎಸ್ಎನ್ಎಲ್, VI ಹೀಗೆ ಬೇರೆ ಬೇರೆ ನೆಟ್ವರ್ಕ್ ಗಳನ್ನು ಬಳಸುತ್ತಾರೆ
ಇನ್ನು ನೀವು ಸಿಮ್ ಕಾರ್ಡ್ ಬಳಸುತ್ತಿದ್ದು ಅದನ್ನು ರಿಚಾರ್ಜ್ (Recharge Plan) ಮಾಡದೆ ಇದ್ದರೆ ಎಷ್ಟು ಕಾಲದವರೆಗೆ ಸಿಮ್ ಕಾರ್ಡ್ ಆಕ್ಟಿವೇಟ್ ಆಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
ಜಸ್ಟ್ 20 ರೂಪಾಯಿ ಖರ್ಚು ಮಾಡಿದರೆ ನಾಲ್ಕು ತಿಂಗಳ ವ್ಯಾಲಿಡಿಟಿ ರಿಚಾರ್ಜ್
ಹೊಸ ಸಿಮ್ ಕಾರ್ಡ್ ನಿಯಮ!
TRAI ಹೊಸ ಸಿಮ್ ಕಾರ್ಡ್ ನಿಯಮವನ್ನು ಪರಿಚಯಿಸಿದೆ. ಈಗ ಮೊದಲಿನಂತೆ ಸುಲಭವಾಗಿ ಸಿಮ್ ಕಾರ್ಡ್ ಖರೀದಿ ಮಾಡಲು ಸಾಧ್ಯವಿಲ್ಲ. ಸಿಮ್ ಕಾರ್ಡ್ ಅನ್ನು ಖರೀದಿ ಮಾಡಬೇಕು ಅಂದ್ರೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಇನ್ನು ಸಿಮ್ ಕಾರ್ಡ್ ನೋಡಿ ರಿಚಾರ್ಜ್ ಮಾಡದೆ ಎಷ್ಟೋ ದಿನದವರೆಗೆ ಆಕ್ಟಿವ್ ಆಗಿ ಇಟ್ಟುಕೊಳ್ಳಬಹುದು ಎಂಬುದನ್ನು ನೋಡೋಣ.
* ನೀವು ಜಿಯೋ ಗ್ರಾಹಕರಾಗಿದ್ರೆ 90 ದಿನಗಳ ವರೆಗೆ ರಿಚಾರ್ಜ್ ಮಾಡದೆ ಸಿಮ್ ಕಾರ್ಡ್ ಬಳಸಿಕೊಳ್ಳಬಹುದು. 90 ದಿನಗಳ ನಂತರ ಅಂದರೆ ಮೂರು ತಿಂಗಳ ನಂತರ ರಿಯಾಕ್ಟಿವೇಟ್ ಪ್ಲಾನ್ ರಿಚಾರ್ಜ್ ಮಾಡಿಕೊಂಡು ಮತ್ತೆ ಸಿಮ್ ಕಾರ್ಡ್ ಬಳಕೆ ಮಾಡಬಹುದು.
* ಏರ್ಟೆಲ್ ಗ್ರಾಹಕರಾಗಿದ್ದರೆ ಅರವತ್ತು ದಿನಗಳ ವರೆಗೆ ಅಂದರೆ ಎರಡು ತಿಂಗಳವರೆಗೆ ರಿಚಾರ್ಜ್ ಮಾಡದೆ ಸಿಮ್ ಕಾರ್ಡ್ ಬಳಕೆ ಮಾಡಬಹುದು. ಆದರೆ ಎರಡು ತಿಂಗಳ ವರೆಗೂ ನೀವು ರಿಚಾರ್ಜ್ ಮಾಡದೆ ಇದ್ದಲ್ಲಿ ಸಿಮ್ ಡಿ ಆಕ್ಟಿವೇಟ್ ಆಗುತ್ತೆ. ನಂತರ 45 ರೂಪಾಯಿಗಳ ರಿಚಾರ್ಜ್ ಮಾಡಿಸಿ ವ್ಯಾಲಿಡಿಟಿ ಪಡೆದುಕೊಳ್ಳಬಹುದು.
* VI ಗ್ರಾಹಕರು ಕೂಡ ರಿಚಾರ್ಜ್ ಮಾಡದೆ 90 ದಿನಗಳ ವರೆಗೆ ಸಿಮ್ ಕಾರ್ಡ್ ಬಳಸಿಕೊಳ್ಳಬಹುದು. ನಂತರ 49 ರೂಪಾಯಿಗಳ ರಿಚಾರ್ಜ್ ಮಾಡಿಸಿ ಪುನಃ ಆಕ್ಟಿವೇಟ್ ಮಾಡಿಸಿಕೊಳ್ಳಬಹುದು.
* ಬಿಎಸ್ಎನ್ಎಲ್ ಗ್ರಾಹಕರು ದೀರ್ಘಕಾಲದ ವರೆಗೆ ಸಿಮ್ ಕಾರ್ಡ್ ಬಳಕೆ ಮಾಡಲು ಸಾಧ್ಯವಿದೆ. ರಿಚಾರ್ಜ್ ಮಾಡಿದೆ 180 ದಿನಗಳ ವರೆಗೆ ಸಿಮ್ ಕಾರ್ಡ್ ಆಕ್ಟಿವೇಟ್ ಆಗಿರುತ್ತದೆ. 180 ದಿನಗಳ ನಂತರ ರಿಚಾರ್ಜ್ ಮಾಡಿಸಿಕೊಂಡರೆ ಮತ್ತೆ ಸಿಮ್ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು.
How long does a SIM card last if it is not recharged