ಜಸ್ಟ್ 20 ರೂಪಾಯಿ ಖರ್ಚು ಮಾಡಿದರೆ ನಾಲ್ಕು ತಿಂಗಳ ವ್ಯಾಲಿಡಿಟಿ ರಿಚಾರ್ಜ್
Recharge Plan : ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ (TRAI) ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೈಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ ವ್ಯಾಲಿಡಿಟಿ ರಿಚಾರ್ಜ್ಗೆ ಸಂಬಂಧ ಪಟ್ಟ ಹಾಗೆ ಹೊಸ ನಿಯಮ ಜಾರಿಗೆ ತರಲಾಗಿದ್ದು, ಕೇವಲ 20 ರೂಪಾಯಿಗಳಲ್ಲಿ ನಾಲ್ಕು ತಿಂಗಳ ರಿಚಾರ್ಜ್ ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಸಿಮ್ ಕಾರ್ಡ್ ಅನ್ನು ಕಾಲಕಾಲಕ್ಕೆ ರಿಚಾರ್ಜ್ ಮಾಡಿಸಿಕೊಳ್ಳಬೇಕು. ಒಂದು ವೇಳೆ ವ್ಯಾಲಿಡಿಟಿ ರಿಚಾರ್ಜ್ ಮಾಡಿಸಿಕೊಳ್ಳದೆ ಇದ್ದಲ್ಲಿ ನಿಮ್ಮ ಸಿಮ್ ಕಾರ್ಡ್ ಡಿ ಆಕ್ಟಿವೇಟ್ ಆಗುತ್ತೆ. ಈ ಹಿಂದೆ ಮೊಬೈಲ್ ಫೋನಿನಲ್ಲಿ ಸಿಮ್ ಬಳಕೆ ಮಾಡಲು ಒಂದು ಸ್ಲಾಟ್ ಕೊಡಲಾಗುತ್ತಿತ್ತು.
ನಂತರದ ದಿನಗಳಲ್ಲಿ ಮೊಬೈಲ್ ನಲ್ಲಿ ಎರಡು ಸಿಮ್ ಕಾರ್ಡ್ ಅನ್ನು ಬಳಕೆ ಮಾಡುವ ಪರಿಪಾಠ ಆರಂಭವಾಯಿತು. ಆದರೆ ಎರಡು ಸಿಮ್ ಅನ್ನು ಗ್ರಾಹಕರಿಗೆ ಬಳಕೆ ಮಾಡಿಕೊಳ್ಳಲು ರಿಚಾರ್ಜ್ ಬಿಸಿ ತಟ್ಟಿತ್ತು. ಹೌದು ಗ್ರಾಹಕರು ಎರಡು ಸಿಮ್ ಕಾರ್ಡ್ ಅನ್ನು ಬಳಕೆ ಮಾಡಲು ಆರಂಭಿಸಿದ ಮೇಲೆ ಟೆಲಿಕಾಂ ಕಂಪನಿಗಳು ರಿಚಾರ್ಜ್ ಪ್ಲಾನ್ ಬೆಲೆಯನ್ನು ಜಾಸ್ತಿ ಮಾಡಿದವು.
ಇದರಿಂದಾಗಿ ಎರಡೆರಡು ಸಿಮ್ ಮೆಂಟೇನ್ ಮಾಡುವುದು ಗ್ರಾಹಕರಿಗೆ ಕಷ್ಟವಾಯಿತು. ಇದರಿಂದಾಗಿ ಸಾಕಷ್ಟು ಗ್ರಾಹಕರು ಒಂದು ಸಿಮ್ ಕಾರ್ಡ್ ಅನ್ನು ಮಾತ್ರ ರಿಚಾರ್ಜ್ ಮಾಡಿ, ಇನ್ನೊಂದನ್ನು ರಿಚಾರ್ಜ್ ಮಾಡದೆ ಅದರ ಬಳಕೆಯನ್ನು ನಿಲ್ಲಿಸಿದರು. ಇದರಿಂದಾಗಿ ಟೆಲಿಕಾಂ ಕಂಪನಿಗೆ ಭಾರಿ ದೊಡ್ಡ ನಷ್ಟವಾಯಿತು. ನಂತರದ ದಿನಗಳಲ್ಲಿ ರಿಚಾರ್ಜ್ ಪ್ಲಾನ್ ದರ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿದೆ.
ವ್ಯಾಲಿಡಿಟಿ ರಿಚಾರ್ಜ್!
ಇನ್ನು ನೀವು ಒಂದಕ್ಕಿಂತ ಹೆಚ್ಚು ಸಿಮ್ ಹೊಂದಿದ್ದರೆ ಇನ್ನೊಂದು ಸಿಮ್ ಅನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳಲು ಬಯಸಿದರೆ, ಅತಿ ಕಡಿಮೆ ದರದ ರಿಚಾರ್ಜ್ ಮಾಡಿಸಿಕೊಂಡು ಸಿಮ್ ನಿಷ್ಕ್ರಿಯೆಗೊಳ್ಳದಂತೆ ನೋಡಿಕೊಳ್ಳಬಹುದು. ಜಿಯೋ ಅಥವಾ VI ಗ್ರಾಹಕರು ರಿಚಾರ್ಜ್ ಪ್ಲಾನ್ ಮುಗಿದ 90 ದಿನಗಳ ವರೆಗೆ ಸಿಮ್ ಕಾರ್ಡ್ ಅನ್ನು ಬಳಕೆ ಮಾಡಬಹುದು.
ಏರ್ಟೆಲ್ ಗ್ರಾಹಕರು ಎರಡು ತಿಂಗಳ ನಂತರ ರಿಚಾರ್ಜ್ ಮಾಡದೆ ಇದ್ರೆ ಸಿಮ್ ಕಾರ್ಡ್ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಈಗ TRAI ನಿಯಮದ ಪ್ರಕಾರ ಕೇವಲ 20 ರೂಪಾಯಿಗೆ ನಾಲ್ಕು ತಿಂಗಳ ವ್ಯಾಲಿಡಿಟಿ ಪಡೆದುಕೊಳ್ಳಬಹುದು.
ನಿಮ್ಮ ಸಿಮ್ ಕಾರ್ಡ್ ನಲ್ಲಿ 20 ರೂಪಾಯಿಗಳ ಪ್ರಿಪೇಯ್ಡ್ ಬ್ಯಾಲೆನ್ಸ್ ಇದ್ದರೆ ಮೂರು ತಿಂಗಳ ನಂತರ ಮತ್ತೆ 30 ದಿನಗಳ ವರೆಗೆ ವ್ಯಾಲಿಡಿಟಿಯನ್ನು ಪಡೆದುಕೊಳ್ಳುತ್ತೀರಿ. ಒಟ್ಟಾರೆಯಾಗಿ ನಾಲ್ಕು ತಿಂಗಳುಗಳ ವ್ಯಾಲಿಡಿಟಿ ಸಿಗುತ್ತದೆ.
ಬಳಿಕ ಮತ್ತೆ ರಿಚಾರ್ಜ್ ಮಾಡಿಕೊಂಡು ಸಿಮ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ನಾಲ್ಕು ತಿಂಗಳ ನಂತರ ಸಿಮ್ ಡಿ- ಆಕ್ಟಿವೇಟ್ ಮಾಡಲು ಮತ್ತೆ ಹದಿನೈದು ದಿನಗಳ ಕಾಲಾವಕಾಶ ನೀಡಲಾಗುತ್ತದೆ. 15 ದಿನಗಳ ಬಳಿಕವೂ ನೀವು ವ್ಯಾಲಿಡಿಟಿ ರಿಚಾರ್ಜ್ ಮಾಡದೆ ಇದ್ದಲ್ಲಿ ಸಿಮ್ ನಿಷ್ಕ್ರಿಯೆಗೊಳ್ಳುತ್ತದೆ ಮತ್ತು ಆ ಸಿಮ್ ನಂಬರ್ ಅನ್ನು ಬೇರೆಯವರಿಗೆ ವರ್ಗಾಯಿಸಲಾಗುತ್ತದೆ.
Spend just Rs 20 and get a four-month validity recharge