ಏರ್‌ಟೆಲ್, ಜಿಯೋ ರೀಚಾರ್ಜ್ ಪ್ಲಾನ್‌ಗಳು ಭಾರೀ ಏರಿಕೆ, BSNL ನೆಟ್‌ವರ್ಕ್‌ಗೆ ಪೋರ್ಟ್ ಆಗೋದು ಹೇಗೆ?

ಈಗ ನಮ್ಮ ದೇಶದಲ್ಲಿ ಟೆಲಿಕಾಂ ಕಂಪೆನಿಗಳ ನಡುವೆ ಭಾರಿ ಪೈಪೋಟಿ ಶುರುವಾಗಿದೆ. ಏರ್ಟೆಲ್ (Airtel), ಜಿಯೋ (Jio), ವೊಡಾಫೋನ್ (Vodafone) ಈ ಮೂರು ಭಾರತದ ಅಗ್ರ ಟೆಲಿಕಾಂ ಕಂಪನಿಗಳು. ಆದರೆ ಮೂರರ ಪೈಕಿ ಜಿಯೋ ಮತ್ತು ಏರ್ಟೆಲ್ ಈ ಎರಡು ಕೂಡ ಇತ್ತೀಚಿಗೆ ಎಲ್ಲಾ ಗ್ರಾಹಕರಿಗೆ ಬಿಗ್ ಶಾಕ್ ನೀಡಿವೆ.

ರೀಚಾರ್ಜ್ ಪ್ಲಾನ್ ಗಳಲ್ಲಿ ಭಾರಿ ಏರಿಕೆ (Recharge Plans) ಮಾಡಿವೆ, ಒಂದು ರೀಚಾರ್ಜ್ ಮೇಲೆ 100 ರೂಪಾಯಿಗಿಂತ ಹೆಚ್ಚು ಬೆಲೆ ಏರಿಕೆ ಆಗಿರುವುದು ಜನರಿಗೆ ಒಂದು ರೀತಿ ಹೊರೆ ಆದ ಹಾಗೆ ಆಗಿದೆ.

ಈ ವೇಳೆ ಹೆಚ್ಚಿನ ಜನರು ಬಿ.ಎಸ್.ಎನ್.ಎಲ್ ಕಡೆಗೆ ವಾಲುತ್ತಿದ್ದಾರೆ. ಹೌದು, BSNL ಸರ್ಕಾರಕ್ಕೆ ಸೇರಿದ ಟೆಲಿಕಾಂ ಕಂಪನಿ ಆಗಿದೆ. ಜೊತೆಗೆ ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ಒಳ್ಳೆಯ ಆಫರ್ ಗಳನ್ನು ನೀಡುವಂಥ ರೀಚಾರ್ಜ್ ಪ್ಲಾನ್ ಗಳು (Prepaid Recharge Plans) ಕೂಡ ಲಭ್ಯವಿದೆ.

ಜೊತೆಗೆ ಇತ್ತೀಚೆಗೆ BSNL ಇಂದ 4G ನೆಟ್ವರ್ಕ್ ಲಾಂಚ್ ಆಗಿದ್ದು, ಶೀಘ್ರದಲ್ಲೇ 5G ಕೂಡ ಲಾಂಚ್ ಮಾಡುವುದಾಗಿ, ಇತ್ತೀಚೆಗೆ ತಿಳಿಸಲಾಗಿದೆ. ಹಾಗಾಗಿ ಹೆಚ್ಚಿನ ಜನರು ಬಿ.ಎಸ್.ಎನ್.ಎಲ್ ಗೆ ನೆಟ್ವರ್ಕ್ ಬದಲಾಯಿಸಿಕೊಳ್ಳಲು ಬಯಸಿದ್ದಾರೆ.

ಒಂದಷ್ಟು ಜನರು ಈಗಾಗಲೇ ಹೊಸ ಬಿ.ಎಸ್.ಎನ್.ಎಲ್ ಸಿಮ್ ಖರೀದಿ ಮಾಡಿದ್ದಾರೆ, ಇನ್ನಷ್ಟು ಜನರು ಈಗಿರುವ ನಂಬರ್ ಅನ್ನೇ ಬಿ.ಎಸ್.ನ್.ಎನ್.ಎಲ್ ಗೆ ಬದಲಾಯಿಸಿಕೊಳ್ಳಲು ಟ್ರೈ ಮಾಡುತ್ತಿದ್ದಾರೆ.

ಈ ಬದಲಾವಣೆಗೆ ಮತ್ತೊಂದು ಪ್ರಮುಖ ಕಾರಣ ಟಾಟಾ ಸಂಸ್ಥೆಯ ಒಡೆಯರಾದ ರತನ್ ಟಾಟಾ ಅವರು ಬಿ.ಎಸ್.ಎನ್. ಎಲ್ ಜೊತೆಗೆ ಕೈಜೋಡಿಸಿರುವುದು. ಹೌದು, ಟಾಟಾ ಸಂಸ್ಥೆ ಬಿ.ಎಸ್.ಎನ್.ಎಲ್ ಜೊತೆಗೆ ಇರುವ ಕಾರಣ ಹೆಚ್ಚಿನ ಜನರು BSNL ಗೆ ಬರುತ್ತಿದ್ದಾರೆ. ಹಾಗೆಯೇ ಬಿ.ಎಸ್.ಎನ್.ಎಲ್ ಪ್ಲಾನ್ ಗಳು ಸಹ ಅಷ್ಟೇ ಬಜೆಟ್ ಫ್ರೆಂಡ್ಲಿ ಆಗಿದೆ.

30 ದಿನಗಳಿಂದ ಹಿಡಿದು 1 ವರ್ಷದವರೆಗಿನ ರೀಚಾರ್ಜ್ ಪ್ಲಾನ್ ಗಳು, ಬಹಳ ಕಡಿಮೆ ಬೆಲೆಗೆ ಸಿಗುತ್ತಿದೆ. ಹಾಗಾಗಿ ಜನರೆಲ್ಲರೂ ಈಗ ಬಿ.ಎಸ್.ಎನ್. ಎಲ್ ನೆಟ್ವರ್ಕ್ ಗೆ ಪೋರ್ಟ್ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಒಂದು ವೇಳೆ ನೀವು ಕೂಡ ಈಗ ಬಳಕೆ ಮಾಡುತ್ತಿರುವ ನಂಬರ್ ಅನ್ನು BSNL ಗೆ ಪೋರ್ಟ್ ಮಾಡಿಸಿಕೊಳ್ಳಬೇಕು ಎಂದರೆ, ಮನೆಯಲ್ಲೇ ಕೂತು ಸುಲಭವಾಗಿ ಪೋರ್ಟ್ ಮಾಡಿಸಿಕೊಳ್ಳಬಹುದು. ಅದು ಹೇಗೆ ಎಂದು ತಿಳಿಯೋಣ..

BSNL Networkಮನೆಯಲ್ಲಿ ಕೂತು ಬಿ.ಎಸ್.ಎನ್.ಎಲ್ ಗೆ ಪೋರ್ಟ್ ಮಾಡಿ:

*1900 ಈ ನಂಬರ್ ಗೆ ನೀವು ಪೋರ್ಟ್ ಮಾಡಬೇಕಾದ ಸಿಮ್ ಇಂದ PORT (ನಿಮ್ಮ ಫೋನ್ ನಂಬರ್) ಅನ್ನು SMS ಮಾಡಬೇಕು.

*ನಂತರ ನಿಮ್ಮ ಮೊಬೈಲ್ ಗೆ ಯುನಿಕ್ ಪೋರ್ಟಿಂಗ್ ಕೋಡ್ ಬರುತ್ತದೆ, ಅದನ್ನು ತೆಗೆದುಕೊಂಡು ನಿಮಗೆ ಹತ್ತಿರ ಇರುವ BSNL ಸರ್ವಿಸ್ ಸೆಂಟರ್ ಗೆ ಭೇಟಿ ನೀಡಿ.

*ಕೋಡ್ ಜೊತೆಗೆ ಸಿಮ್ ಪೋರ್ಟ್ ಮಾಡುವುದಕ್ಕೆ ಆಧಾರ್ ಕಾರ್ಡ್ ಡೀಟೇಲ್ಸ್ ಕೊಡಬೇಕು, ಹಾಗೆಯೇ kyc ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ.. ಬಳಿಕ ನಿಮಗೆ ಹೊಸ ಸಿಮ್ ಕೊಡುತ್ತಾರೆ, ಹೊಸ ಬಿ.ಎಸ್.ಎನ್. ಎಲ್ ಸಿಮ್ ಅನ್ನು ಫ್ರೀಯಾಗಿ ಕೊಡಬಹುದು ಅಥವಾ ಸ್ವಲ್ಪ ಹಣ ಪಡೆದುಕೊಳ್ಳಬಹುದು.

*ಬಳಿಕ ಯಾವ ದಿನ ನಿಮ್ಮ ಸಿಮ್ ಪೋರ್ಟ್ ಆಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ. ಆ ದಿನದವರೆಗೂ ಹಳೆಯ ನೆಟ್ವರ್ಕ್ ಬಳಸಬಹುದು, ಬಳಿಕ BSNL ಗೆ ಬದಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಗೆ 7 ದಿನಗಳ ಸಮಯ ತಗೆದುಕೊಳ್ಳುತ್ತದೆ.

How to port to BSNL network

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories