ಜಿಯೋ ಹೊಸ ₹100 ಪ್ಲಾನ್ ಬಿಡುಗಡೆ, ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಉಚಿತ
ಟೆಲಿಕಾಂ ಜೈಂಟ್ ಜಿಯೋ ತನ್ನ ಬಳಕೆದಾರರಿಗಾಗಿ ಕೇವಲ ₹100ರ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್‌ನಲ್ಲಿ ಡೇಟಾ ಜೊತೆಗೆ (Hotstar) ಸಬ್‌ಸ್ಕ್ರಿಪ್ಶನ್ ಕೂಡ ಉಚಿತವಾಗಿ ಲಭಿಸುತ್ತದೆ.
Publisher: Kannada News Today (Digital Media)
- ₹100ಕ್ಕೆ 90 ದಿನಗಳ ವ್ಯಾಲಿಡಿಟಿ
- ಜಿಯೋ (Hotstar) ಸಬ್‌ಸ್ಕ್ರಿಪ್ಶನ್ ಉಚಿತ
- 5 ಜಿಬಿ ಡೇಟಾ, ಅನ್‌ಲಿಮಿಟೆಡ್ ಸವಲತ್ತು
Jio Recharge Plan: ಜಿಯೋ ಈ ಬಾರಿ ಪಕ್ಕಾ ಸರ್ಪ್ರೈಸ್ ನೀಡಿದೆ. ₹100 ರೂಪಾಯಿಗೆ ಹೊಸ ಪ್ಲಾನ್ ಲಾಂಚ್ ಮಾಡಿದೆ. ಆದರೆ ಈ ಯೋಜನೆಯಲ್ಲಿ ಡೇಟಾ ಸೌಲಭ್ಯ ಅಲ್ಲ, ಆದರೆ ಇದರಲ್ಲಿ ಸಿಗೋ (Hotstar subscription) ಅನ್ನೋದು ವಿಶೇಷ.
ಈ ಪ್ಲಾನ್‌ನಲ್ಲಿ ಒಟ್ಟು 5 ಜಿಬಿ ಡೇಟಾ ಸಿಗತ್ತೆ, ಜೊತೆಗೆ ವಿಶೇಷ ಅಂದರೆ 90 ದಿನಗಳ ವ್ಯಾಲಿಡಿಟಿ ಸಿಗತ್ತೆ. ಅಂದಮೇಲೆ ಡೇಟಾ ಎಷ್ಟು ಬೇಕೋ ಅಷ್ಟೇ ಬಳಸಿ, ಬೆನಿಫಿಟ್ ಎಂಜಾಯ್ ಮಾಡಿ.
ಇದು ಜಿಯೋ ಇತ್ತೀಚೆಗೆ ಮಾಡಿರೋ ಚೌಕಾಸಿ ಪ್ಲಾನ್. ಈಗಾಗಲೇ 46 ಕೋಟಿ ಬಳಕೆದಾರರನ್ನು ಹೊಂದಿರುವ ಜಿಯೋ, ಹೊಸ ಹೊಸ ಯೋಜನೆಯನ್ನು ತರುವಲ್ಲಿ ತೀವ್ರ ಪ್ರಯತ್ನದಲ್ಲಿದೆ. ಇಡೀ ಭಾರತದಲ್ಲಿ ಜನರ ಮೊಬೈಲ್ ಬಿಲ್ ಕಡಿಮೆಯಾಗಲು ಕಾರಣವೇ ಜಿಯೋ ಅನ್ನಬಹುದು.
ಹೆಚ್ಚು ಜನ ಈಗ ₹899 ಪ್ಲಾನ್ ತೆಗೆದುಕೊಳ್ಳ್ತಿರೋದು ನಿಜ. ಅದರಲ್ಲಿ 90 ದಿನಗಳ ವ್ಯಾಲಿಡಿಟಿ, ದಿನಕ್ಕೆ 2 ಜಿಬಿ ಡೇಟಾ, ಅನ್‌ಲಿಮಿಟೆಡ್ ಕರೆಗಳು, ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಸಿಗುತ್ತೆ. ಆದರೆ ಸಣ್ಣ ಹಾಗೂ ಕಡಿಮೆ ಬಜೆಟ್ ಬಳಕೆದಾರರಿಗೆ ₹100 ಪ್ಲಾನ್ ಸೂಕ್ತ.
ಈ ಹೊಸ ₹100 ಪ್ಲಾನ್‌ನ್ನು ಸ್ಪೆಷಲ್ ಮಾಡಲು (Jio Hotstar) ಸಬ್‌ಸ್ಕ್ರಿಪ್ಶನ್ ಕೊಡೋದು ಗಟ್ಟಿಯಾದ ಪ್ಲಸ್‌ಪಾಯಿಂಟ್. OTT ಆಸಕ್ತರಿಗಾಗಿ ಇದು ಒಳ್ಳೆ ಚಾನ್ಸ್.
Jio 100 Plan Offers Free Hotstar