Technology

ಜಿಯೋ ಹೊಸ ರಿಚಾರ್ಜ್ ಪ್ಲಾನ್, 2 ವರ್ಷಗಳ ಅಮೆಜಾನ್ ಪ್ರೈಮ್ ಉಚಿತ!

Jio Recharge Plan : ಜಿಯೋ ವಿಶೇಷ ಪ್ಲಾನ್, ಕೇವಲ 749 ರೂಪಾಯಿಗೆ ಬರೋಬ್ಬರಿ 2 ವರ್ಷಗಳ ಅಮೆಜಾನ್ ಪ್ರೈಮ್ ಉಚಿತವಾಗಿ ಸಿಗುತ್ತಿದೆ.

  • ಜಿಯೋ ಹೊಸ 749 ರೂ. ಪೋಸ್ಟ್‌ಪೇಯ್ಡ್ ಪ್ಲಾನ್, ಅಮೆಜಾನ್ ಪ್ರೈಮ್ ಲೈಟ್ 2 ವರ್ಷ ಉಚಿತ
  • 100GB ಡೇಟಾ, ಅನಿಯಮಿತ ಕಾಲಿಂಗ್, 3 ಆಪ್ತರಿಗೆ ಫ್ಯಾಮಿಲಿ ಸಿಮ್ ಸೌಲಭ್ಯ
  • OTT ಸಬ್ಸ್ಕ್ರಿಪ್ಷನ್‌ಗಳೊಂದಿಗೆ ರೀಚಾರ್ಜ್ ಲಭ್ಯ

    ಜಿಯೋದಿಂದ ತಗ್ಗಿದ ಬೆಲೆಯಲ್ಲಿ ಅಮೆಜಾನ್ ಪ್ರೈಮ್ ಲಾಭ!

ಜಿಯೋ ಹೊಸ 749 ರೂ. ಪ್ಲಾನ್‌ ಜನಪ್ರಿಯ OTT (ಅಮೆಜಾನ್ ಪ್ರೈಮ್ ಲೈಟ್) ಸೇವೆಯನ್ನು ಸಂಪೂರ್ಣ ಎರಡು ವರ್ಷಗಳವರೆಗೆ ಉಚಿತವಾಗಿ ನೀಡುತ್ತಿದೆ (Jio Recharge Plan). ಇದಲ್ಲದೇ, ಇದು 100GB (High-Speed Data), ಅನಿಯಮಿತ ಉಚಿತ ಕರೆ, ದಿನಕ್ಕೆ 100 SMS ಮತ್ತು 3 ಜನರಿಗೆ (Family SIM) ವಿತರಿಸುವ ಸೌಲಭ್ಯವನ್ನು ಒದಗಿಸುತ್ತದೆ. OTT ಪ್ರಿಯರಿಗೆ ಇದು ಖಂಡಿತ ಸಂತಸದ ಸುದ್ದಿ!

ಹೌದು, ಈ ಪ್ಲಾನ್‌ನಲ್ಲಿ Netflix Basic ಉಚಿತ ಪ್ರವೇಶ ಕೂಡಾ ಲಭ್ಯವಿದ್ದು, ಇಡೀ ಕುಟುಂಬಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಈ ಪ್ಲಾನ್‌ಗೆ ಸಂಬಂಧಿಸಿದಂತೆ, 3ನೇ ಸಿಮ್‌ಗಾಗಿ ಪ್ರತಿ ತಿಂಗಳು ₹150 Extra Charge ಅನ್ವಯವಾಗಲಿದೆ. ಆದರೂ, ಎರಡು ವರ್ಷಗಳ ಅಮೆಜಾನ್ ಪ್ರೈಮ್ ಲಾಭವನ್ನು ನೋಡಿದರೆ ಇದು ಜಿಯೋದ ಅತ್ಯಂತ ಆಕರ್ಷಕ ಆಫರ್ ಎಂದೇ ಹೇಳಬಹುದು.

ಜಿಯೋ ಹೊಸ ರಿಚಾರ್ಜ್ ಪ್ಲಾನ್, 2 ವರ್ಷಗಳ ಅಮೆಜಾನ್ ಪ್ರೈಮ್ ಉಚಿತ!

ಇದನ್ನೂ ಓದಿ: ಜಿಯೋದಿಂದ ಸೂಪರ್ ಬಜೆಟ್ ಪ್ಲ್ಯಾನ್ ಬಿಡುಗಡೆ, 1 ವರ್ಷ ರಿಚಾರ್ಜ್ ಬೇಕಿಲ್ಲ

699 ರೂ. ಎರ್‌ಟೆಲ್ ಪ್ಲಾನ್ – ಜಿಯೋಗೆ ಪೈಪೋಟಿ!

ಜಿಯೋ ಪೈಪೋಟಿಗೆ ಎರ್‌ಟೆಲ್ ತನ್ನ 699 ರೂ. ಪ್ಲಾನ್ ಅನ್ನು ಒದಗಿಸಿದೆ (Airtel Recharge Plan). ಇದರಲ್ಲಿ 105GB Data, ಅನಿಯಮಿತ ಕರೆ, ದಿನಕ್ಕೆ 100 SMS ಸೌಲಭ್ಯವಿದೆ. ಜೊತೆಗೆ, ಇದು 6 ತಿಂಗಳ ಅಮೆಜಾನ್ ಪ್ರೈಮ್ ಲೈಟ್ ಸಬ್ಸ್ಕ್ರಿಪ್ಷನ್, (Airtel Xstream Play Premium) 1 ವರ್ಷದ ಪ್ರೀಮಿಯಂ ಆಕ್ಸೆಸ್, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಆಕ್ಸೆಸ್ ಮುಂತಾದವನ್ನೂ ನೀಡುತ್ತದೆ.

ಎರ್‌ಟೆಲ್ ಮತ್ತು ಜಿಯೋ ಎರಡೂ ಗ್ರಾಹಕರಿಗೆ OTT ಸೇವೆಗಳ ಲಾಭವನ್ನು ಉಚಿತವಾಗಿ ನೀಡುತ್ತಿರುವುದು ಸ್ಪರ್ಧೆ ತೀವ್ರಗೊಂಡಿದೆ. ಆದರೆ, ಎರಡು ವರ್ಷಗಳ ಅಮೆಜಾನ್ ಪ್ರೈಮ್ ಲಾಭವನ್ನು ನೀಡುವ ದೃಷ್ಟಿಯಿಂದ ಜಿಯೋ 749 ಪ್ಲಾನ್ ಹೆಚ್ಚಿನ ಪ್ರಿಜನಯತೆ ಪಡೆಯುವ ಸಾಧ್ಯತೆ ಹೆಚ್ಚು.

Jio 749 Plan, 2 Years Amazon Prime Free

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories