ಕೇವಲ ₹100 ರೂಪಾಯಿಗೆ ಉಚಿತ OTT, ಜಿಯೋ, ಏರ್‌ಟೆಲ್, ವಿಐ ಭರ್ಜರಿ ಕೊಡುಗೆ
ಜಿಯೋ, ಏರ್‌ಟೆಲ್, ವೋಡಾಫೋನ್ ಐಡಿಯಾ ಬಳಕೆದಾರರಿಗೆ ಕೇವಲ ₹100 ರೂಪಾಯಿ ರಿಚಾರ್ಜ್ ಮೂಲಕ OTT ವೀಕ್ಷಣೆಗೆ ಅವಕಾಶ. ಹೆಚ್ಚುವರಿ ಡೇಟಾ ಜೊತೆಗೆ ಜಿಯೋಹಾಟ್‌ಸ್ಟಾರ್ ಸಬ್ಸ್ಕ್ರಿಪ್ಶನ್ ಉಚಿತವಾಗಿ ಲಭ್ಯ.
Publisher: Kannada News Today (Digital Media)
- ₹100 ರೂಪಾಯಿಗೆ 5GB ಹೆಚ್ಚುವರಿ ಡೇಟಾ + OTT ಸಬ್ಸ್ಕ್ರಿಪ್ಶನ್
- ಜಿಯೋ: 90 ದಿನ, ವೋಡಾಫೋನ್ & ಎಯರ್‌ಟೆಲ್: 30 ದಿನಗಳ ಜಿಯೋಹಾಟ್‌ಸ್ಟಾರ್ ಲಭ್ಯ
- ಯಾವುದೇ ಆಕ್ಟಿವ್ ಪ್ಲಾನ್ ಜೊತೆ ಬಳಸಬಹುದಾದ ಡೇಟಾ-ಓನ್‌ಲಿ ಪ್ಲಾನ್ಸ್
ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ OTT (Over-The-Top) ಪ್ಲಾಟ್‌ಫಾರ್ಮ್‌ಗಳ ಸವಿಯನ್ನು ಬಹಳ ಕಡಿಮೆ ಬೆಲೆಯಲ್ಲಿ ನೀಡುತ್ತಿದ್ದಾರೆ. ಇದೀಗ ₹100 ರೂಪಾಯಿಗೆ ರಿಚಾರ್ಜ್ ಮಾಡಿದರೆ ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್ ಐಡಿಯಾ (Vi) ಬಳಕೆದಾರರು JioHotstar ಸಬ್ಸ್ಕ್ರಿಪ್ಶನ್ ಉಚಿತವಾಗಿ ಪಡೆಯಬಹುದಾಗಿದೆ.
ಜಿಯೋ ಬಳಕೆದಾರರು ₹100 ರೂಪಾಯಿ ರಿಚಾರ್ಜ್ ಮಾಡಿದರೆ 5GB ಹೆಚ್ಚುವರಿ ಡೇಟಾ ಜೊತೆಗೆ 90 ದಿನಗಳವರೆಗೆ JioHotstar (Mobile/TV) ಸಬ್ಸ್ಕ್ರಿಪ್ಶನ್ ಪಡೆಯುತ್ತಾರೆ. ಈ ಪ್ಲಾನ್ ನೇರವಾಗಿ ಜಿಯೋ ಆಪ್ ಅಥವಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಇದನ್ನೂ ಓದಿ: ಐಫೋನ್ ಪ್ರಿಯರಿಗೆ ಬಂಪರ್, ಐಫೋನ್ 16 ಮೇಲೆ ₹11,900 ಬಂಪರ್ ಡಿಸ್ಕೌಂಟ್
ಏರ್‌ಟೆಲ್ ಬಳಕೆದಾರರು ಕೂಡಾ ₹100 ರೂಪಾಯಿ ಪ್ಲಾನ್‌ನಲ್ಲಿ 5GB ಹೆಚ್ಚುವರಿ ಡೇಟಾ ಪಡೆದು, 30 ದಿನಗಳ JioHotstar Mobile ಸಬ್ಸ್ಕ್ರಿಪ್ಶನ್ ಅನ್ನು ಆನಂದಿಸಬಹುದು. ಈ ಪ್ಲಾನ್ ಕೂಡ ಡೇಟಾ-ಓನ್‌ಲಿ ಆಗಿದ್ದು, ವಾಯ್ಸ್ ಅಥವಾ SMS ಲಾಭ ನೀಡುವುದಿಲ್ಲ.
ವಿಐ ಬಳಕೆದಾರರಿಗಾಗಿ ₹101 ರಿಚಾರ್ಜ್ ಪ್ಲಾನ್ ಲಭ್ಯವಿದ್ದು, ಇದರಲ್ಲಿ ಕೂಡಾ 5GB ಡೇಟಾ ಮತ್ತು 3 ತಿಂಗಳುಗಳ JioHotstar Mobile ಸಬ್ಸ್ಕ್ರಿಪ್ಶನ್ ಲಭ್ಯವಿದೆ. ವಿಶೇಷವೆಂದರೆ ಈ ಪ್ಲಾನ್ ಅನ್ನು ಈಗಿರುವ ಯಾವುದೇ ಆಕ್ಟಿವ್ ಪ್ಲಾನ್ ಜೊತೆಗೆ ಬಳಸಬಹುದು, ಅಂದರೆ ಸದ್ಯದ ಪ್ಲಾನ್ ಮುಗಿಯುವವರೆಗೂ ಕಾಯುವ ಅಗತ್ಯವಿಲ್ಲ.
ಇದನ್ನೂ ಓದಿ: ಜಿಯೋದಿಂದ 336 ದಿನಗಳ ವ್ಯಾಲಿಡಿಟಿ ಆಫರ್, ಇನ್ನು ಏರ್‌ಟೆಲ್ ಕತೆ ಮುಗೀತು
ಈ ಎಲ್ಲಾ ಪ್ಲಾನ್ಸ್‌ಗಳು data-only plans ಆಗಿದ್ದು, ವಿಶೇಷವಾಗಿ OTT ಕಂಟೆಂಟ್ ವೀಕ್ಷಿಸಲು ಬಳಸುವವರಿಗೆ ಸೂಕ್ತ. ಸಾಮಾನ್ಯವಾಗಿ ₹149 ಅಥವಾ ₹199 ಪ್ಲಾನ್‌ಗಳಲ್ಲಿ OTT ಸಬ್ಸ್ಕ್ರಿಪ್ಶನ್ ದೊರಕದ ಕಾರಣ, ಈ ಬಜೆಟ್ ಫ್ರೆಂಡ್ಲಿ ಆಯ್ಕೆಗಳು ಹೆಚ್ಚು ಜನಪ್ರಿಯವಾಗುತ್ತಿವೆ.
Jio, Airtel & Vi Users Get Free OTT in ₹100 Recharge