Technology

1 ವರ್ಷ ರಿಚಾರ್ಜ್ ಬೇಕಿಲ್ಲ! ಜಿಯೋದಿಂದ ಲಾಂಗ್ ವ್ಯಾಲಿಡಿಟಿ ಪ್ಲಾನ್ ಬಿಡುಗಡೆ

ಜಿಯೋ ಕಂಪನಿಯಿಂದ ರೂ.3599ಕ್ಕೆ ವರ್ಷಪೂರ್ತಿ ವ್ಯಾಲಿಡಿಟಿಯೊಂದಿಗೆ ಡೇಟಾ, ಅನ್‌ಲಿಮಿಟೆಡ್ ಕಾಲ್‌, 5G ಹಾಗೂ ಎಂಟರ್‌ಟೈನ್‌ಮೆಂಟ್‌ ಲಾಭಗಳು ಸಿಗುತ್ತವೆ. ಮತ್ತೆ ಮತ್ತೆ ರಿಚಾರ್ಜ್‌ ಮಾಡಬೇಕಿಲ್ಲ!

Publisher: Kannada News Today (Digital Media)

  • ವರ್ಷಪೂರ್ತಿ ಸೀಮ್ ಆಕ್ಟಿವ್, ಬಂಪರ್ ಪ್ಲಾನ್
  • ಪ್ರತಿದಿನ 2.5GB ಡೇಟಾ ಮತ್ತು 5G ಲಾಭ
  • JioTV, Hotstar ಹಾಗೂ AI Cloud ಉಚಿತ ಲಾಭ

Jio Recharge Plan: ಮತ್ತೆ ಮತ್ತೆ ಮೋಬೈಲ್‌ ರಿಚಾರ್ಜ್‌ ಮಾಡುವುದು ಬೇಡ ಅನ್ನೋರಿಗೆ ಈ ಪ್ಲಾನ್ ಉಪಯುಕ್ತ, ಪ್ರತಿ ತಿಂಗಳು ಡೇಟಾ ಡೇಟಾ ಖಾಲಿ ಆಗುತ್ತೆ, ಪದೇ ಪದೇ ರಿಚಾರ್ಜ್ ಮಾಡೋದಕ್ಕಿಂತ ಒಂದೇ ಬಾರಿ ವಾರ್ಷಿಕ ರಿಚಾರ್ಜ್ ಪ್ಲಾನ್ ಬೇಕು ಅನ್ನೋರಿಗೆ ಇಲ್ಲಿದೆ ಗುಡ್ ನ್ಯೂಸ್.

ಜಿಯೋ ಕಂಪನಿಯ ವಾರ್ಷಿಕ ಪ್ಲಾನ್ (Yearly Recharge) ನಿಮಗಾಗಿ ಸಿದ್ಧವಾಗಿದೆ. ಒಂದೇ ಬಾರಿಗೆ ರೂ.3599 ರಿಚಾರ್ಜ್ ಮಾಡಿದರೆ, ಮುಂದೆ ವರ್ಷಪೂರ್ತಿ ನೀವು ಫ್ರೀ ಆಗಿ ಎಲ್ಲಾ ಬೆನಿಫಿಟ್ ಪಡೆಯಬಹುದು.

1 ವರ್ಷ ರಿಚಾರ್ಜ್ ಬೇಕಿಲ್ಲ! ಜಿಯೋದಿಂದ ಲಾಂಗ್ ವ್ಯಾಲಿಡಿಟಿ ಪ್ಲಾನ್ ಬಿಡುಗಡೆ

ಇದನ್ನೂ ಓದಿ: ಜಿಯೋ ಸ್ಟಾರ್ಟರ್ ಪ್ಯಾಕ್ ಬಿಡುಗಡೆ, 28 ದಿನ ಧಮಾಕಾ ಆಫರ್! ಡೋಂಟ್ ಮಿಸ್

ಈ ಪ್ಲಾನ್‌ ಅನ್ನು ನೀವು ತೆಗೆದುಕೊಂಡರೆ, ಇಡೀ ವರ್ಷ ನಿಮ್ಮ ಸಿಮ್‌ (SIM) ಆಕ್ಟಿವ್‌ ಆಗಿರುತ್ತದೆ. ಅಂದರೆ ಮತ್ತೆ ಮತ್ತೆ ರಿಚಾರ್ಜ್‌ ಮಾಡಬೇಕಿಲ್ಲ. ಜೊತೆಗೆ ಪ್ರತಿದಿನ 2.5GB ಡೇಟಾ ಸಿಗುತ್ತದೆ ಮತ್ತು ಇದನ್ನು ಲೆಕ್ಕ ಹಾಕಿದರೆ ವರ್ಷದಲ್ಲಿ 912GBಗೂ ಹೆಚ್ಚು ಡೇಟಾ ಲಭ್ಯವಾಗುತ್ತದೆ. ಈ ಪ್ಲಾನ್‌ (annual recharge plan) 5G ಯುಸರ್ಸ್‌ಗಾಗಿ ಇನ್ನೂ ಹೆಚ್ಚು ಲಾಭದಾಯಕ.

ಇದರಲ್ಲಿ ಸಿಗುವ ವಿಶೇಷ ಲಕ್ಷಣಗಳೆಂದರೆ, ಪ್ರತಿದಿನ 100 ಫ್ರೀ ಎಸ್‌ಎಂಎಸ್‌ (SMS)ಗಳು, ಎಲ್ಲ ನೆಟ್ ವರ್ಕ್ ಗಳಿಗೆ (any network) ಅನ್‌ಲಿಮಿಟೆಡ್‌ ಕರೆಗಳ ಸೌಲಭ್ಯ ಮತ್ತು ಡೇಟಾ ಬಳಕೆಯ ನಂತರ 64Kbps ಸ್ಪೀಡ್‌ನಲ್ಲಿ ಡೇಟಾ ಮುಂದುವರಿಯುತ್ತದೆ.

Jio Recharge Plans

ಜಿಯೋ 3599 ರೂಪಾಯಿಯ ಪ್ಲಾನ್‌ನಲ್ಲಿ ಹೆಚ್ಚುವರಿ ಸೌಲಭ್ಯಗಳೂ ಇದೆ. ಇದರಲ್ಲಿ JioTV ಸಂಪೂರ್ಣ ವರ್ಷ ಉಚಿತವಾಗಿ ಲಭ್ಯವಿದೆ. ಜೊತೆಗೆ JioCinema ಮತ್ತು 90 ದಿನಗಳ Disney+ Hotstar ಸಬ್‌ಸ್ಕ್ರಿಪ್‌ಷನ್‌ (subscription) ಕೂಡ ಸಿಗುತ್ತದೆ. ಏಕೆಂದರೆ ಇದು ಕೇವಲ ಕಾನ್ಸೆಪ್ಟ್‌ ಪ್ಲಾನ್‌ ಅಲ್ಲ, ಬದಲಾಗಿ ‘ವಾಲ್ಯೂ ಫಾರ್ ಮನಿ’ ಪ್ಯಾಕ್‌ ಆಗಿದೆ.

ಇದನ್ನೂ ಓದಿ: ಜಿಯೋ ಡಿಜಿಟಲ್ ಬಂಡಲ್ ಆಫರ್, ಬರಿ 10 ರೂಪಾಯಿಗೆ ಪ್ರತಿದಿನ 2.5 ಜಿಬಿ ಡೇಟಾ

ಜಿಯೋ AI ಕ್ಲೌಡ್‌ (AI cloud storage) ಬಳಕೆದಾರರಿಗೆ 50GB ಸ್ಟೋರೆಜ್‌ ನೀಡಲಾಗುತ್ತದೆ, ಇದು ಡಿಜಿಟಲ್‌ ಉಪಯೋಗವನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಈ ಪ್ಲಾನ್‌ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

Jio Annual Plan, One Recharge, Full Year Benefits

English Summary

Our Whatsapp Channel is Live Now 👇

Whatsapp Channel

Related Stories