Jio offer: ಫೋನ್ ಸ್ಟೋರೇಜ್ ಫುಲ್ ಸಮಸ್ಯೆಗೆ ಜಿಯೋ ಸೂಪರ್ ಆಫರ್, 2TB ಉಚಿತ ಕ್ಲೌಡ್ ಸ್ಟೋರೇಜ್!

Jio offer: ಸ್ಮಾರ್ಟ್‌ಫೋನ್‌ನಲ್ಲಿ ಸ್ಟೋರೇಜ್ ಫುಲ್ ಆಗಿ ಫೋಟೋ ವಿಡಿಯೋ ಅಳಿಸಲು ಬೇಸತ್ತ ಬಳಕೆದಾರರಿಗೆ ಜಿಯೋ ಹೊಸ ಆಫರ್, MyJio ಆಪ್ ಮೂಲಕ 2TB ಉಚಿತ ಕ್ಲೌಡ್ ಸ್ಟೋರೇಜ್ ಹಾಗೂ ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಸೌಲಭ್ಯ ಲಭ್ಯವಾಗಿದೆ.

Jio offer: ಇತ್ತೀಚೆಗೆ ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ “ಸ್ಟೋರೇಜ್ ಫುಲ್”. ಕೆಲವು ಫೋಟೋ ತೆಗೆದರೂ ನೋಟಿಫಿಕೇಶನ್ ಬರುತ್ತದೆ. ವಿಡಿಯೋಗಳು ಸೇವ್ ಆಗುವುದಿಲ್ಲ. ಪರಿಣಾಮವಾಗಿ ಫೋನ್ ಸ್ಲೋ ಆಗಿ ಹ್ಯಾಂಗ್ ಆಗುತ್ತದೆ. ಅನೇಕರು ಅವಶ್ಯಕ ಫೈಲ್‌ಗಳನ್ನೇ ಅಳಿಸಿ ಬೇಸರಪಡುವ ಸ್ಥಿತಿ.

ಈ ಸಮಸ್ಯೆಗೆ ಇದೀಗ ಜಿಯೋ (Jio) ಸರಳ ಪರಿಹಾರ ತಂದಿದೆ. ಹೊಸ ರೀಚಾರ್ಜ್ ಪ್ಲಾನ್ ಬಳಸುವ ಕೆಲ ಗ್ರಾಹಕರಿಗೆ MyJio ಆಪ್ ಮೂಲಕ 2TB ಉಚಿತ ಕ್ಲೌಡ್ ಸ್ಟೋರೇಜ್ ನೀಡಲಾಗುತ್ತಿದೆ.

ಜಿಯೋ ಆಯ್ದ ಬಳಕೆದಾರರಿಗೆ Google Gemini Pro ಸಬ್‌ಸ್ಕ್ರಿಪ್ಷನ್ ಉಚಿತವಾಗಿ ನೀಡುತ್ತಿದೆ. ಇದರ ಜೊತೆಗೆ 2TB ಕ್ಲೌಡ್ ಸ್ಟೋರೇಜ್ ಸೌಲಭ್ಯ ಸಿಗುತ್ತದೆ. ಅಂದರೆ ಫೋನ್‌ನಲ್ಲಿ ಜಾಗ ಕಡಿಮೆ ಇದ್ದರೂ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಎಲ್ಲವನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡಬಹುದು.

ಇದರಿಂದ ಮೊಬೈಲ್ ಮಾತ್ರವಲ್ಲ, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ನಲ್ಲೂ ಡೇಟಾ ಸುಲಭವಾಗಿ ಪ್ರವೇಶಿಸಬಹುದು. ಬೇರೆ ಮೆಮೊರಿ ಕಾರ್ಡ್ ಅಥವಾ ಹಾರ್ಡ್‌ಡಿಸ್ಕ್ ಖರೀದಿಸುವ ಅವಶ್ಯಕತೆಯೇ ಇಲ್ಲ.

ಹೇಗೆ ಪಡೆಯಬೇಕು 2TB ಉಚಿತ ಸ್ಟೋರೇಜ್?

ಈ ಸೌಲಭ್ಯ ಪಡೆಯುವುದು ಬಹಳ ಸುಲಭ:

  1. ಮೊದಲು MyJio ಆಪ್ ತೆರೆಯಿರಿ.
  2. ಆಫರ್ ಅಥವಾ Benefits ವಿಭಾಗಕ್ಕೆ ಹೋಗಿ.
  3. Gemini Pro/Cloud Storage ಆಫರ್ ಕ್ಲಿಕ್ ಮಾಡಿ.
  4. Google ಪುಟದಲ್ಲಿ ಸಬ್‌ಸ್ಕ್ರಿಪ್ಷನ್ ಆಕ್ಟಿವೇಟ್ ಮಾಡಿ.
  5. ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ 2TB ಕ್ಲೌಡ್ ಸ್ಟೋರೇಜ್ ಸಕ್ರಿಯವಾಗುತ್ತದೆ.

ಆಮೇಲೆ ಫೋನ್‌ನಲ್ಲಿರುವ ಎಲ್ಲಾ ಫೈಲ್‌ಗಳನ್ನು ಕ್ಲೌಡ್‌ಗೆ ಬ್ಯಾಕಪ್ ಮಾಡಿ, ಸ್ಟೋರೇಜ್ ಫ್ರೀ ಮಾಡಬಹುದು.

ಫೋಟೋ ಡಿಲೀಟ್ ಮಾಡುವ ಕಷ್ಟ ಇಲ್ಲ. ಫೋನ್ ವೇಗವಾಗಿ ಕೆಲಸ ಮಾಡುತ್ತದೆ. ಮುಖ್ಯ ಡೇಟಾ ಸುರಕ್ಷಿತವಾಗಿರುತ್ತದೆ. ಉಚಿತವಾಗಿ ಇಷ್ಟು ದೊಡ್ಡ ಸ್ಟೋರೇಜ್ ಸಿಗುವುದು ಅಪರೂಪದ ಅವಕಾಶ ಎಂದು ತಂತ್ರಜ್ಞಾನ ತಜ್ಞರು ಹೇಳುತ್ತಿದ್ದಾರೆ.

Related Stories