ಗೂಗಲ್ ನಲ್ಲಿ ಈ ವಿಷಯದ ಬಗ್ಗೆ ಎಂದೂ ಸರ್ಚ್ ಮಾಡಬೇಡಿ! ಜೈಲು ಕಂಬಿ ಎಣಿಸಬೇಕಾದೀತು

Tech Kannada : ನಾವು ಇಂದು ನಮ್ಮ ಬ್ರೈನ್ (brain) ಗೆ ಒಂದಿಷ್ಟು ಕಷ್ಟವನ್ನೇ ಕೊಡುವುದಿಲ್ಲ ನೋಡಿ! ಕೈಯಲ್ಲಿ ಒಂದು ಮೊಬೈಲ್ (Smartphone) ಇದ್ರೆ ಸಾಕು ಗೂಗಲ್ (Google) ಎನ್ನುವ ಅಪ್ಲಿಕೇಶನ್ (application) ಬಳಸಿ ಯಾವುದೇ ಪ್ರಶ್ನೆ ಇದ್ರೂ ಉತ್ತರ ಹುಡುಕಾಡಿ ಬಿಡುತ್ತೇವೆ.

ಯಾವುದೇ ವಿಚಾರದ ಬಗ್ಗೆ ಯೋಚನೆ ಮಾಡುವ ಶಕ್ತಿಯನ್ನೇ ನಾವಿಂದು ಕಳೆದುಕೊಂಡಿದ್ದೇವೆ, ಯಾಕೆಂದರೆ ಪ್ರಶ್ನೆಗೂ ಕೂಡ ಉತ್ತರ ನೀಡಿರುತ್ತದೆ Google.

ಇತ್ತೀಚಿನ ದಿನಗಳಲ್ಲಿ ಗೂಗಲ್ ಬಳಕೆ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಗೂಗಲ್ ನಲ್ಲಿಯೇ ಬೇಕಾಗಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬಹುದು.

ರಿಂಗ್ ಲೈಟ್ ಕ್ಯಾಮೆರಾ ಇರೋ Vivo ಫೋನ್ ಬರ್ತಾಯಿದೆ! ಬೆಲೆ ಗೊತ್ತಾದ್ರೆ ಈಗಲೇ ಬುಕ್ ಮಾಡ್ತೀರಾ

ಗೂಗಲ್ ಹುಡುಕಾಟ: (Google search)

ಗೂಗಲ್ ಹುಡುಕಾಟಕ್ಕೆ ಕೊನೆ ಮೊದಲಿಲ್ಲ, ಇಲ್ಲಿ ಯಾವ ವಿಚಾರದ ಬಗ್ಗೆಯೂ ಮಾಹಿತಿ ಸಿಗುವುದಿಲ್ಲ ಎನ್ನುವಂತಿಲ್ಲ. ಇಡೀ ವಿಶ್ವದ ಬಗ್ಗೆ ನೀವು ಮಾಹಿತಿಯನ್ನು ಗೂಗಲ್ ನಲ್ಲಿ ಪಡೆದುಕೊಳ್ಳಬಹುದು

ಆದರೆ ಹೀಗೆ ನೀವು ಹುಡುಕಾಟ ನಡೆಸುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು, ಕೆಲವು ವಿಚಾರಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುವಂತಿಲ್ಲ, ಮಾಡಿದ್ರೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗಬಹುದು.

ಗೂಗಲ್ ನಲ್ಲಿ ಈ ವಿಷಯ ಹುಡುಕಾಟ ಮಾಡಬೇಡಿ: (don’t search these things in Google)

ಗೂಗಲ್ ಹುಡುಕಾಟವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು, ಉತ್ತಮ ವಿಷಯಗಳನ್ನು ಹುಡುಕಲು ಅಥವಾ ನಿಜವಾಗಿ ಮಾಹಿತಿ ಕೊಡುವಂಥ ವಿಚಾರದ ಬಗ್ಗೆ ಹುಡುಕಾಟ ನಡೆಸಬಹುದು.

ಹಾಗಂತ ನೀವು ಗೂಗಲ್ನಲ್ಲಿ ಯಾವ ವಿಚಾರದ ಬಗ್ಗೆ ಬೇಕಾದರೂ ಸರ್ಚ್ ಮಾಡುವ ಹಾಗಿಲ್ಲ, ಅದಕ್ಕೂ ಮಿತಿಯನ್ನು ಹೇರಲಾಗಿದೆ. ಒಂದು ವೇಳೆ ಈ ಮಿತಿಯನ್ನು ಮೀರಿ ನೀವು ಗೂಗಲ್ನಲ್ಲಿ ಇಂತಹ ವಿಚಾರಗಳ ಬಗ್ಗೆ ಹುಡುಕಾಟ ನಡೆಸಿದರೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ,

ಮಾರಾಟದಲ್ಲಿ ದಾಖಲೆ! ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು Realme 5G ಸ್ಮಾರ್ಟ್‌ಫೋನ್‌ಗಳು ಮಾರಾಟ

ಹಾಗಾದರೆ google ನಲ್ಲಿ ಯಾವ ವಿಚಾರವನ್ನು ನಿಷೇಧಿಸಲಾಗಿದೆ ಗೊತ್ತಾ?

Google search new rulesಮೊದಲನೆಯದಾಗಿ ದೇಶದ್ರೋಹಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಗೂಗಲ್ನಲ್ಲಿ ಹುಡುಕಾಟ ನಡೆಸುವಂತಿಲ್ಲ. ಉದಾಹರಣೆಗೆ “ಸ್ಪೋಟಕ ವಸ್ತು ತಯಾರಿಸುವ ವಿಧಾನ” ಈ ರೀತಿಯಾದಂತಹ ಹುಡುಕಾಟ ಮಾಡುವ ಹಾಗಿಲ್ಲ ಹೀಗೇನಾದರೂ ದೇಶ ದ್ರೋಹಿ ಮಾಹಿತಿ ಸರ್ಚ್ ಮಾಡಿದರೆ ಶಿಕ್ಷೆ ಗ್ಯಾರಂಟಿ.

ಎರಡನೆಯದಾಗಿ ಗೂಗಲ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ (Child video) ಹಾಗೂ ಫೋಟೋಗಳನ್ನು ಸರ್ಚ್ ಮಾಡುವ ಹಾಗಿಲ್ಲ ಹಾಗೇನಾದರೂ ಅಶ್ಲೀಲ ವಿಡಿಯೋಗಳು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಸಂಬಂಧಪಟ್ಟಿದ್ದೆ ಆಗಿದ್ದಲ್ಲಿ ಅದು ಕಾನೂನು ಬಾಹಿರ ಚಟುವಟಿಕೆ ಆಗಿರುತ್ತದೆ ಹಾಗೂ ಇದರಿಂದ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇನ್ನು ಮೂರನೆಯದಾಗಿ ಗೂಗಲ್ ನಲ್ಲಿ ಪೈರಸಿ ಚಿತ್ರಗಳು ವೈರಲ್ ಆಗುತ್ತವೆ. ಗೂಗಲ್ ಪೈರಸಿಯನ್ನು (film piracy) ಇತ್ತೀಚಿಗೆ ನಿಷೇಧ ಮಾಡಲಾಗಿದೆ ಹಾಗಾಗಿ ಪೈರಸಿ ಚಿತ್ರಗಳ (pirated film) ಬಗ್ಗೆ ಗೂಗಲ್ನಲ್ಲಿ ಹುಡುಕಾಟ ಮಾಡಿದರು ಕೂಡ ಇದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹಾಗಾಗಿ ಗೂಗಲ್ ನಲ್ಲಿ ಈ ವಿಚಾರದ ಬಗ್ಗೆಯೂ ಹುಡುಕಾಟ ನಡೆಸಬಾರದು.

ಇದನ್ನು ಹೊರತುಪಡಿಸಿ ಯಾವುದಾದರೂ ವ್ಯಕ್ತಿಯನ್ನು ಕೊಲೆ ಮಾಡುವುದು ಹೇಗೆ, ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂದು ವಿಚಾರಗಳ ಬಗ್ಗೆ ಹುಡುಕಾಟ ನಡೆಸಿದರು ಕೂಡ ನಿಮ್ಮ ಕಂಪ್ಯೂಟರ್ ಐಪಿ ಅಡ್ರೆಸ್ (IP address) ಮೂಲಕ ಕಂಡು ಹಿಡಿದು ನಿಮಗೆ ಶಿಕ್ಷೆ ನೀಡುವ ಎಲ್ಲಾ ಹಕ್ಕು ಸಂಬಂಧ ಪಟ್ಟ ಇಲಾಖೆಗೆ ಇರುತ್ತದೆ. ಹಾಗಾಗಿ ಗೂಗಲ್ ನಲ್ಲಿ ಸಿಕ್ಕ ಸಿಕ್ಕಿದ್ದನ್ನು ಹುಡುಕಾಟ ಮಾಡುವುದಕ್ಕೂ ಮೊದಲು ಒಮ್ಮೆ ವಿಚಾರ ಮಾಡಿ.

Never search for this topic or these things on Google Search

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories