ಕಳೆದು ಹೋದ ಮೊಬೈಲ್ ಪತ್ತೆಗೆ ಪೊಲೀಸ್ ಇಲಾಖೆ ಮಾಡಿದೆ ಮಾಸ್ಟರ್ ಪ್ಲಾನ್! ಅಷ್ಟಕ್ಕೂ ಏನದು ಗೊತ್ತಾ?

ಮೊಬೈಲ್ ಕಳೆದುಕೊಂಡ ಪ್ರತಿಯೊಬ್ಬರು ಆತಂಕ ಪಟ್ಟುಕೊಳ್ಳುವುದು ಸಹಜ. ಮೊಬೈಲ್ ಕಳೆದು ಹೋದರೆ ಕೆಲವರು ಪೊಲೀಸರಿಗೆ ದೂರು ಕೊಡಬಹುದು ಅಥವಾ ಇನ್ನು ಕೆಲವರು ಕದ್ದು ಹೋಗಿರುವ ಫೋನ್ ನಮ್ಮದಲ್ಲ ಎಂದು ಮರೆತು ಸುಮ್ಮನಾಗಬಹುದು.

ನಮ್ಮ ಅಂಗೈನಲ್ಲಿ ಹಿಡಿದುಕೊಳ್ಳಬಹುದಾದ ಒಂದು ಪುಟ್ಟ ಮೊಬೈಲ್ (mobile) ಇಡೀ ಪ್ರಪಂಚವನ್ನೇ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುತ್ತದೆ. ಮೊಬೈಲ್ ನಲ್ಲಿ ನಾವು ನಮಗೆ ಬೇಕಾಗಿರುವ ದೈನಂದಿನ ಪ್ರತಿಯೊಂದು ಕೆಲಸವನ್ನು ಹಣಕಾಸಿನ ವ್ಯವಹಾರವನ್ನು ಕೂಡ ಮಾಡಿಕೊಳ್ಳಬಹುದು.

ಮಾತನಾಡಲು ಅಥವಾ ವಿಡಿಯೋ ಕರೆ ಮಾಡಲು ಮಾತ್ರವಲ್ಲದೆ ಹಣಕಾಸಿನ ವಿನಿಮಯ (Money Transfer) ಇ-ಮೇಲ್ (E-mail) ಅಗತ್ಯವಿರುವ ಅಪ್ಲಿಕೇಶನ್ (Apps) ಗಳು ಹೀಗೆ ಹಲವು ವಿಷಯಗಳಿಗೆ ಒಂದು ಮೊಬೈಲ್ ಇದ್ದರೆ ಸಾಕು, ನಮ್ಮ ದಿನನಿತ್ಯದ ಜೀವನವೇ ಸರಾಗವಾಗಿ ಬಿಡುತ್ತದೆ.

ಒಂದು ಕೈಯಲ್ಲಿ ಹಿಡಿದುಕೊಂಡ ಮಗುವನ್ನು ಒಂದು ವೇಳೆ ಮರೆತುಬಿಟ್ಟರು ಇನ್ನೊಂದು ಕೈಯಲ್ಲಿರುವ ಮೊಬೈಲ್ ಅನ್ನು ಜನ ಮರೆಯುವುದಿಲ್ಲ ಅಂತಹ ಪರಿಸ್ಥಿತಿ ಇದ್ದಾಗ, ಕೆಲವೊಮ್ಮೆ ಮೊಬೈಲ್ ಕಳ್ಳತನವಾಗುತ್ತದೆ. ನಮ್ಮ ಕೈಯಲ್ಲಿ ಇರುವ ಮೊಬೈಲ್ ಅನ್ನು ನಮ್ಮ ಕಣ್ಣೆದುರೇ ಕಸಿದುಕೊಂಡಿ ಓಡಿ ಹೋಗುವ ಖದೀಮರು ಇರುತ್ತಾರೆ.

ಕಳೆದು ಹೋದ ಮೊಬೈಲ್ ಪತ್ತೆಗೆ ಪೊಲೀಸ್ ಇಲಾಖೆ ಮಾಡಿದೆ ಮಾಸ್ಟರ್ ಪ್ಲಾನ್! ಅಷ್ಟಕ್ಕೂ ಏನದು ಗೊತ್ತಾ? - Kannada News

ಹೀಗೆ ನಾವು ಇಷ್ಟಪಡುವ ಮೊಬೈಲ್ ಕೈತಪ್ಪಿ ಹೋದರೆ ಆಗುವ ಆತಂಕ ಅಷ್ಟಿಷ್ಟಲ್ಲ, ಯಾಕೆಂದರೆ ಮೊಬೈಲ್ (Smartphone) ಒಂದು ಸೇವಿಂಗ್ ಪೆಟ್ಟಿಗೆ ಇದ್ದ ಹಾಗೆ, ನಮ್ಮ ಖಾಸಗಿ ಫೋಟೋಗಳು ವಿಡಿಯೋ (Photos and Videos) ಪಾಸ್ವರ್ಡ್ ಬ್ಯಾಂಕ್ ಅಕೌಂಟ್ (bank Account) ಮಾಹಿತಿ ಹೀಗೆ ಸಾಕಷ್ಟು ವಿಚಾರಗಳು ಒಂದು ಪುಟ್ಟ ಮೊಬೈಲ್ ನಲ್ಲಿ ಸೇವ್ ಮಾಡಿ ಇಡಲು ಸಾಧ್ಯ.

ಮೊಬೈಲ್ ಕಳೆದುಕೊಂಡ ಪ್ರತಿಯೊಬ್ಬರು ಆತಂಕ ಪಟ್ಟುಕೊಳ್ಳುವುದು ಸಹಜ. ಮೊಬೈಲ್ ಕಳೆದು ಹೋದರೆ ಕೆಲವರು ಪೊಲೀಸರಿಗೆ ದೂರು ಕೊಡಬಹುದು ಅಥವಾ ಇನ್ನು ಕೆಲವರು ಕದ್ದು ಹೋಗಿರುವ ಫೋನ್ ನಮ್ಮದಲ್ಲ ಎಂದು ಮರೆತು ಸುಮ್ಮನಾಗಬಹುದು.

ಮೊಬೈಲ್ ಕಳೆದು ಹೋದರೆ ತಕ್ಷಣ ಈ ಕೆಲಸ ಮಾಡಿ

Find a Lost or Stolen Mobile Phoneಪೋಲಿಸ್ (Police) ಇಲಾಖೆ ಮೊಬೈಲ್ ಕಳೆದು ಹೋದರೆ ತಕ್ಷಣ ಏನು ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದೆ, ನೀವು ಅದೇ ಪ್ರಕಾರ ಮಾಡಿದರೆ ಖಂಡಿತವಾಗಿಯೂ ನೀವು ಕಳೆದುಕೊಂಡಿರುವ ಫೋನು ಮತ್ತೆ ಸಿಗುವ ಸಾಧ್ಯತೆ ಕೂಡ ಹೆಚ್ಚಾಗಿದೆ.

ಮೊದಲನೆಯದಾಗಿ ಮೊಬೈಲ್ ಕಳೆದು ಹೋದರೆ ಕೆ ಎಸ್ ಪಿ ಈ ಲಾಸ್ಟ್ (KSP e-lost) ಎನ್ನುವ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಡೌನ್ಲೋಡ್ (Download) ಮಾಡಿಕೊಂಡು ನಿಮ್ಮ ಮೊಬೈಲ್ ವಿವರಗಳನ್ನು ಅದರಲ್ಲಿ ಹಾಕಬೇಕು ಇದಾದ ತಕ್ಷಣ ನಿಮ್ಮ ಮೊಬೈಲ್ ನಲ್ಲಿ ಇರುವ ಡಾಟಾ ಕಳ್ಳರ ಕೈ ಸೇರದಂತೆ ಆಗುತ್ತದೆ.

ಬಳಿಕ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿ ಎಫ್ಐಆರ್ ಪ್ರತಿಯನ್ನು ಪಡೆದುಕೊಳ್ಳಬೇಕು. ಸಿಮ್ ಕಾರ್ಡ್ ಖರೀದಿ ಮಾಡಿರುವವರ ಬಳಿ ಡುಪ್ಲಿಕೇಟ್ ಸಿಮ್ ಕಾರ್ಡ್ ಪಡೆದುಕೊಳ್ಳಬೇಕು.

ಇದಾದ ಬಳಿಕ www.ceir.gov.in ವೆಬ್ಸೈಟ್ಗೆ (Website) ಭೇಟಿ ನೀಡಿ ಅಲ್ಲಿ ನೀವು ಕಳೆದುಕೊಂಡಿರುವ ಮೊಬೈಲ್ನ ಬ್ರಾಂಡ್ ನಂಬರ್ ಮೊಬೈಲ್ ನ ಐಎಂಇಐ ನಂಬರ್, ಕಳೆದುಕೊಂಡಿರುವ ಜಾಗ ಮೊದಲದ ಮಾಹಿತಿಗಳನ್ನು ಕೋಡಬೇಕು

ನಂತರ ನಿಮಗೆ ಒಂದು ರಿಜಿಸ್ಟರ್ ನಂಬರ್ ಕೂಡ ಕೊಡಲಾಗಿರುತ್ತದೆ. ಇಲ್ಲಿ ರಿಜಿಸ್ಟರ್ ಮಾಡಿದರೆ 24 ಗಂಟೆಯ ಒಳಗೆ ನಿಮ್ಮ ಫೋನ್ ಬ್ಲಾಕ್ ಆಗುತ್ತದೆ. ಒಂದು ವೇಳೆ ಪೊಲೀಸರು ನಿಮ್ಮ ಮೊಬೈಲ್ ಹುಡುಕಿ ಕೊಟ್ಟರೆ ಇದೇ ರಿಜಿಸ್ಟರ್ ಐ ಡಿ ಹಾಗೂ ಐಎಂಇಐ (IMEI No.) ಸಂಖ್ಯೆಯನ್ನು ಹಾಕಿ ಮೊಬೈಲ್ ಅನ್ ಬ್ಲಾಕ್ (unblock) ಮಾಡಿಕೊಳ್ಳಬಹುದು.

ಇನ್ನು ನೀವು ಬ್ಯಾಂಕ್ ನ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಇಟ್ಟಿದ್ದರೆ ಕೂಡಲೇ ನಿಮ್ಮ ಖಾತೆ ಹೊಂದಿರುವ ಬ್ಯಾಂಕಿನಲ್ಲಿ ನಿಮ್ಮ ಅಕೌಂಟ್ ಕೂಡ ಬ್ಲಾಕ್ ಮಾಡಿಸಿಕೊಳ್ಳಿ

ಹೀಗೆ ಮಾಡುವುದರಿಂದ ನಿಮ್ಮ ಖಾತೆಯಿಂದ ಯಾರು ಸುಲಭವಾಗಿ ಹಣ ಲಪಟಾಯಿಸಲು ಸಾಧ್ಯವಿಲ್ಲ. ಈ ರೀತಿ ಕಳೆದು ಹೋಗಿರುವ ಫೋನ್ (Phone Lost) ಭದ್ರವಾಗಿ ಇರುವಂತೆ ಹಾಗೂ ಫೋನ್ನಲ್ಲಿರುವ ಡಾಟಾ ಬೇರೆಯವರ ಕೈ ಸೇರದಂತೆ ಎಚ್ಚರಿಕೆ ವಹಿಸಬಹುದು.

The police department has made a master plan to find the lost mobile phone

Follow us On

FaceBook Google News

The police department has made a master plan to find the lost mobile phone