₹8000 ಕ್ಕಿಂತ ಕಡಿಮೆಗೆ 5G ಫೋನ್ ಬೇಕಾ? ಇಲ್ಲಿವೆ Samsung, Redmi, Lava ಫೋನ್‌ಗಳು
₹8000 ಗಿಂತ ಕಡಿಮೆ ದರದಲ್ಲಿ 5G ಫೋನ್ ಬೇಕೆ? Samsung, Redmi, Lava, Tecno ಮುಂತಾದ ಬ್ರ್ಯಾಂಡ್‌ಗಳ ಫೋನುಗಳ ಪಟ್ಟಿಯು ನಿಮಗಾಗಿ ಇಲ್ಲಿದೆ.

- ಟಾಪ್ ಬ್ರ್ಯಾಂಡ್‌ಗಳ 5G ಫೋನುಗಳು ₹8000 ಕ್ಕಿಂತ ಕಡಿಮೆ ದರದಲ್ಲಿ
- ಕ್ಯಾಮೆರಾ, ಬ್ಯಾಟರಿ, ಡಿಸ್‌ಪ್ಲೇ ಸೇರಿದಂತೆ ಉತ್ತಮ ಫೀಚರ್ಸ್
- Lava, Samsung, Redmi ಮೊದಲಾದ ಉತ್ತಮ ಆಯ್ಕೆ
ಒಂದು ಕಾಲದಲ್ಲಿ 5G ಫೋನ್ ಖರೀದಿಸಲು ₹15,000 ಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗಿತ್ತು. ಆದರೆ ಈಗ ₹8000 ಗಿಂತ ಕಡಿಮೆ ದರದಲ್ಲೂ ಉತ್ತಮ 5G connectivity ಫೋನುಗಳು ಸಿಗುತ್ತಿವೆ!
ಖ್ಯಾತ ಬ್ರ್ಯಾಂಡ್‌ಗಳಾದ Samsung, Redmi, Lava ಮತ್ತು Tecno ಕೂಡಾ ಈ ಸೆಗ್ಮೆಂಟ್‌ಗೆ ಪ್ರವೇಶಿಸಿವೆ.
ಇದನ್ನೂ ಓದಿ: ಹುಷಾರಾಗಿರಿ! ನಿಮ್ಮ ಐಡಿ ಪ್ರೂಫ್ ನಲ್ಲಿ ಎಷ್ಟು ಸಿಮ್‌ಗಳಿವೆ ಮೊದಲು ಚೆಕ್ ಮಾಡಿ
Samsung Galaxy M06 5G:
Samsung ಬಜೆಟ್ ಸೆಗ್ಮೆಂಟ್‌ನಲ್ಲೂ 5G ತರಲು M06 ಮಾರುಕಟ್ಟೆಗೆ ತಂದಿದೆ. 6.7 ಇಂಚಿನ HD+ ಡಿಸ್‌ಪ್ಲೇ, MediaTek Dimensity 6300 ಪ್ರೊಸೆಸರ್, 50MP + 2MP ಡ್ಯುಯಲ್ ರಿಯರ್ ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ ಮತ್ತು 5000mAh ಬ್ಯಾಟರಿ ಇದ್ದು, 25W ಫಾಸ್ಟ್ ಚಾರ್ಜಿಂಗ್ ಸಹ ನೀಡಲಾಗಿದೆ. ಈ ಎಲ್ಲಾ ಫೀಚರ್‌ಗಳಿಗೆ ಬೆಲೆ ₹7,999 ಮಾತ್ರ!
Redmi A4 5G:
6.88 ಇಂಚಿನ 120Hz HD+ ಡಿಸ್‌ಪ್ಲೇ, Snapdragon 4 Gen 2 ಚಿಪ್‌ಸೆಟ್ (processor), 50MP ರಿಯರ್ ಕ್ಯಾಮೆರಾ ಮತ್ತು Hyper OS ಹೊಂದಿರುವ Redmi A4 ಕೂಡ ₹7,999 ಬೆಲೆಯಲ್ಲಿದೆ. ಇದರ ಬ್ಯಾಟರಿ ಸಾಮರ್ಥ್ಯ 5160mAh.
ಇದನ್ನೂ ಓದಿ: ಒಂದ್ಸಲ ರಿಚಾರ್ಜ್ ಮಾಡಿ, 365 ದಿನ ರಿಚಾರ್ಜ್ ಬೇಕಿಲ್ಲ! ಜಿಯೋ ಬಂಪರ್ ಆಫರ್
Lava Storm Lite 5G:
ಇದೊಂದು ಭರ್ಜರಿ ಫೀಚರ್‌ಗಳನ್ನು ಹೊಂದಿರುವ ಭಾರತೀಯ ಬ್ರ್ಯಾಂಡ್, Lava ಹೊಸ ಫೋನ್. 6.75 ಇಂಚಿನ 120Hz HD+ ಡಿಸ್‌ಪ್ಲೇ, Dimensity 6400 ಪ್ರೊಸೆಸರ್, 50MP ರಿಯರ್ ಕ್ಯಾಮೆರಾ ಮತ್ತು 15W ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿ ಇದೆ. ಬೆಲೆ ₹7,999.
Tecno Pop 9 5G:
Tecno ತನ್ನ Pop 9 ಮೂಲಕ ಅತ್ಯಂತ ಆಕರ್ಷಕ 5G ಫೋನ್ ನೀಡುತ್ತಿದೆ. 6.67 ಇಂಚಿನ 120Hz HD+ ಡಿಸ್‌ಪ್ಲೇ, Dimensity 6300 ಚಿಪ್‌ಸೆಟ್, 48MP ರಿಯರ್ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ ಮತ್ತು 5000mAh ಬ್ಯಾಟರಿ (18W charging) ಇದರಲ್ಲಿ ಇದೆ.
ಇದನ್ನೂ ಓದಿ: ಸಿಹಿ ಸುದ್ದಿ, ಜಿಯೋದಿಂದ 5 ಅಗ್ಗದ ಪ್ರಿಪೇಯ್ಡ್ ಪ್ಲಾನ್‌ಗಳು! ಏರ್‌ಟೆಲ್ ಕತೆ ಏನು
Lava Shark 5G:
ಇದೊಂದು ಬಜೆಟ್ ಫೋನ್. 6.7 ಇಂಚಿನ 90Hz HD+ ಡಿಸ್‌ಪ್ಲೇ, Unisoc T765 ಪ್ರೊಸೆಸರ್, 13MP + 5MP ಕ್ಯಾಮೆರಾ ಸೆಟ್, 5000mAh ಬ್ಯಾಟರಿ ಮತ್ತು Android 15 (OS) ಇದರ ವಿಶೇಷತೆ. ಇದೂ ₹7,999 ಕ್ಕೆ ಲಭ್ಯ.
ಈ ಎಲ್ಲಾ ಫೋನುಗಳು ಶಕ್ತಿ, ಗುಣಮಟ್ಟ ಮತ್ತು ದರದಲ್ಲಿ ಸಮತೋಲನ ಹೊಂದಿವೆ. ನಿಮ್ಮ ಬಜೆಟ್ ಅನುಸಾರ ಆಯ್ಕೆ ಮಾಡಿ.
Top 5G Smartphones Under ₹8000 You Can Buy Now




