ಈ ಫೋನ್ ಗಳಲ್ಲಿ ಇನ್ಮುಂದೆ ವಾಟ್ಸಪ್ ಕೆಲಸ ಮಾಡಲ್ಲ! ಪಟ್ಟಿಯಲ್ಲಿ ನಿಮ್ಮ ಫೋನ್ ಇದಿಯಾ?

ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಕೂಡ ಚಾಟಿಂಗ್ ಅಪ್ಲಿಕೇಶನ್ (chatting application) ಅಂತ ಬಂದ್ರೆ ಹೆಚ್ಚಾಗಿ ಜನ ಬಳಕೆ ಮಾಡೋದೇ ವಾಟ್ಸಾಪ್ (WhatsApp) ! ಸ್ಮಾರ್ಟ್ ಫೋನ್ (smartphone) ಕೈಯಲ್ಲಿ ಇದ್ರೆ ವಾಟ್ಸಪ್ ಅಪ್ಲಿಕೇಶನ್ ಇದ್ದೇ ಇರುತ್ತೆ

ಇತ್ತೀಚಿನ ದಿನಗಳಲ್ಲಿ ಕೇವಲ ಚಾಟಿಂಗ್ ಮಾತ್ರವಲ್ಲದೆ ಹಣಕಾಸಿನ ವ್ಯವಹಾರವನ್ನು ಕೂಡ ವಾಟ್ಸಾಪ್ನಲ್ಲಿ ಮಾಡಬಹುದಾಗಿದ್ದರಿಂದ ವಾಟ್ಸಪ್ ಇತ್ತೀಚಿಗೆ ಇನ್ನಷ್ಟು ಫೇಮಸ್ ಆಗಿದೆ.

ಮೆಟಾ (Meta) ಮಾಲೀಕತ್ವದ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಗಳು (features) ಬಿಡುಗಡೆ ಆಗುತ್ತಲೇ ಇರುತ್ತವೆ, ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಫೀಚರ್ಗಳನ್ನು ಇತ್ತೀಚಿನ ದಿನಗಳಲ್ಲಿ ಮೆಟಾ ಪರಿಚಯಿಸಿದೆ.

ಇದೀಗ ವಾಟ್ಸಪ್ ಬಳಕೆದಾರರಿಗೆ ಹೊಸ ಅಪ್ಡೇಟ್ (update) ಒಂದನ್ನು ನೀಡಿದೆ, ಆಂಡ್ರಾಯ್ಡ್ ನ ಕೆಲವು ಫೋನ್ಗಳಲ್ಲಿ ಇನ್ಮುಂದೆ ವಾಟ್ಸಪ್ ವರ್ಕ್ ಆಗುವುದಿಲ್ಲ ಹಾಗಾದ್ರೆ ಯಾವ ಫೋನ್ ನಲ್ಲಿ ವಾಟ್ಸಪ್ ವರ್ಕ್ ಆಗುವುದಿಲ್ಲ ಅದಕ್ಕಾಗಿ ಬೇರೆ ಯಾವ ಅಪ್ಲಿಕೇಶನ್ ಆಯ್ದುಕೊಳ್ಳಬೇಕು ನೋಡೋಣ!

ಈ ಫೋನ್ ಗಳಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೆಲಸ ಮಾಡಲ್ಲ!

ವಾಟ್ಸಪ್ ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ (operating system- OS) 5.0 ಅಥವಾ ಅದಕ್ಕಿಂತ ಕಡಿಮೆ ಇದ್ರೆ ಅಂತಹ ಫೋನ್ ಗಳಲ್ಲಿ ಅಕ್ಟೋಬರ್ 24 ರಿಂದ ವಾಟ್ಸಪ್ ಕೆಲಸ ಮಾಡುವುದಿಲ್ಲ. ಅಂತಹ ಫೋನ್ಗಳು ಯಾವವು ಅಂದ್ರೆ ಇಲ್ಲಿವೆ ಹೆಸರುಗಳು:

Samsung galaxy S2
iPhone 5
iPhone 5C
Grand flex ZTE
Grand X quad v987 ZTE
Huawei ascend d, d1
HTC one
Sony Xperia z
LG optimise g Pro
Sony Xperia S2
Motorola Xoom
Samsung galaxy tab 10.1
HTC desire HD
Sony Ericsson Xperia arc3, etc..

ಫೋನ್ನಲ್ಲಿ ಪರಿಶೀಲಿಸಿ ಆಪರೇಟಿಂಗ್ ಸಿಸ್ಟಮ್: (Check OS in Your Phone)

WhatsAppನೀವು ನಿಮ್ಮ ಫೋನ್ ನಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಯಾವುದು ಎಂಬುದನ್ನು ಪರಿಶೀಲಿಸಿಕೊಳ್ಳಿ ಈ ರೀತಿ ಮಾಡಿದ್ರೆ ನಿಮ್ಮ ಸಿಸ್ಟಮ್ ಯಾವುದು ಎಂಬುದು ನಿಮಗೆ ತಿಳಿಯುತ್ತದೆ. 5.1ಕ್ಕಿಂತ ಹಳೆಯ ಸಾಧನವಾಗಿದ್ರೆ ನಿಮ್ಮ ಫೋನ್ ನಲ್ಲಿಯೂ ವಾಟ್ಸಪ್ ವರ್ಕ್ ಆಗುವುದಿಲ್ಲ ಎಂದು ತಿಳಿಯಬಹುದು.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ತಿಳಿಯಲು ಹೀಗೆ ಮಾಡಿ!

ಮೊದಲಿಗೆ ನಿಮ್ಮ ಮೊಬೈಲ್ ಫೋನ್ ನಲ್ಲಿ ಸೆಟ್ಟಿಂಗ್ಸ್ (settings) ಓಪನ್ ಮಾಡಿ ಅದರಲ್ಲಿ ಅಬೌಟ್ ಫೋನ್ (about phone) ಎನ್ನುವ ಆಯ್ಕೆ ಇರುತ್ತದೆ. ನಂತರ ಸಾಫ್ಟ್ವೇರ್ ಇನ್ಫಾರ್ಮಶನ್ (software information) ಎನ್ನುವ ಆಯ್ಕೆ ಕಾಣಿಸುತ್ತಿದೆ.

ನೀವು ಇಲ್ಲಿ ಅಪ್ಗ್ರೇಡ್ ಕೂಡ ಮಾಡಿಕೊಳ್ಳಬಹುದು. ಒಂದು ವೇಳೆ ಅಪ್ಗ್ರೇಡ್ ಆಗದೆ ಇದ್ದರೆ ವಾಟ್ಸಪ್ ಸೇರಿದಂತೆ ಇನ್ನೂ ಬೇರೆ ಆಪರೇಟಿಂಗ್ ಸಿಸ್ಟಮ್ ಗಳು ಕೂಡ ನಿಮ್ಮ ಫೋನ್ ನಲ್ಲಿ ವರ್ಕ್ ಆಗದೆ ಇರಬಹುದು. ಹಾಗಾಗಿ ಕೂಡಲೇ ಚೆಕ್ ಮಾಡಿಕೊಳ್ಳಿ.

WhatsApp no ​​longer works on these Smartphones

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories