Technology

ವಾಟ್ಸಪ್​​ ಫೀಚರ್! ಇಂಟರ್ನೆಟ್ ಇಲ್ಲದೆ ಫೋಟೋ, ವಿಡಿಯೋ ಶೇರ್​ ಮಾಡಿ

ಇಂಟರ್‌ನೆಟ್ ಇಲ್ಲದೆ ಫೋಟೋ, ವೀಡಿಯೋ ಹಂಚಬಹುದಾ? ಹೌದು, ವಾಟ್ಸಪ್ ಹೊಸ ಫೀಚರ್ ತರಲಿದೆ!

  • ಮೆಟಾ ಒಡೆತನದ ವಾಟ್ಸಪ್ ಹೊಸ ಆಫ್‌ಲೈನ್ ಫೀಚರ್‌ ಕೆಲಸ ಆರಂಭಿಸಿದೆ
  • ಬ್ಲೂಟೂತ್ ಸಹಾಯದಿಂದ ಫೈಲ್ ಶೇರ್ ಮಾಡುವ ಅವಕಾಶ ಲಭ್ಯವಾಗಲಿದೆ
  • ಬಳಕೆದಾರರಿಗೆ ಹೊಸ ಆಯ್ಕೆ – ಬೇಡವಾದರೆ ನಿಷ್ಕ್ರೀಯಗೊಳಿಸಬಹುದು

WhatsApp New Feature: ವಾಟ್ಸಪ್ ಬಳಸುವ ಪ್ರತಿಯೊಬ್ಬರಿಗೂ ಸಿಹಿಸುದ್ದಿ! ಇನ್ನು ಮುಂದೆ ಇಂಟರ್‌ನೆಟ್ ಇಲ್ಲದೆ ಫೋಟೋ ಅಥವಾ ವೀಡಿಯೋ ಶೇರ್ ಮಾಡಬಹುದು! ಮೆಟಾ (Meta) ಒಡೆತನದ ವಾಟ್ಸಪ್ (WhatsApp) ತನ್ನ ಹೊಸ ಆಫ್‌ಲೈನ್ ಶೇರಿಂಗ್ ಫೀಚರ್ ಮೇಲಿನ ಕೆಲಸವನ್ನು ತ್ವರಿತಗೊಳಿಸಿದ್ದು, ಇದು ಬಳಕೆದಾರರಿಗೆ ದೊಡ್ಡ ಅನುಕೂಲ ನೀಡಲಿದೆ.

ಈ ಫೀಚರ್ ಹೇಗೆ ಕೆಲಸ ಮಾಡಲಿದೆ? ವಾಟ್ಸಪ್ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಲೂಟೂತ್ (Bluetooth) ಮೂಲಕ ಫೈಲ್, ಫೋಟೋ ಅಥವಾ ವೀಡಿಯೋಗಳನ್ನು ಹಂಚಿಕೊಳ್ಳುವ ಅವಕಾಶ ನೀಡಲಿದೆ. ಈ ಮೂಲಕ, ನಿಮ್ಮ ಫೋನಿನಲ್ಲಿ ಡೇಟಾ (Data) ಇಲ್ಲದಿದ್ದರೂ ಆಫ್ಲೈನ್‌ನಲ್ಲಿ ಶೇರ್ ಮಾಡಬಹುದಾಗಿದೆ.

ವಾಟ್ಸಪ್​​ ಫೀಚರ್! ಇಂಟರ್ನೆಟ್ ಇಲ್ಲದೆ ಫೋಟೋ, ವಿಡಿಯೋ ಶೇರ್​ ಮಾಡಿ

ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಬಂಪರ್, ಐಪಿಎಲ್ ಕ್ರಿಕೆಟ್‌ ಉಚಿತವಾಗಿ ವೀಕ್ಷಿಸಿ

ಆಫ್‌ಲೈನ್ ಮೋಡ್ ಎಂದರೇನು?

ಆಫ್‌ಲೈನ್ ಮೋಡ್ (Offline Mode) ಅಂದರೆ ಏನು? ಇದು ಬಳಕೆದಾರರಿಗೆ ಎಂತಹ ಅನುಕೂಲ ತರಲಿದೆ? ಸದ್ಯಕ್ಕೆ, ವಾಟ್ಸಪ್ ಬಳಸಿ ಯಾವುದೇ ಫೈಲ್ ಕಳುಹಿಸಲು ಇಂಟರ್‌ನೆಟ್ ಅವಶ್ಯಕ. ಆದರೆ, ಈ ಹೊಸ ಆಯ್ಕೆ ಬಂದ್ರೆ ಮೊಬೈಲ್ ಡೇಟಾ ಇಲ್ಲದಿದ್ದರೂ, ನೀವು ಫೋಟೋ, ವೀಡಿಯೋ ಅಥವಾ ಡಾಕ್ಯುಮೆಂಟ್ (Document) ಶೇರ್ ಮಾಡಬಹುದು.

WhatsApp

ಈ ಫೀಚರ್ ಹೇಗೆ ಸಕ್ರಿಯಗೊಳಿಸಬಹುದು?

ಇದನ್ನು ಬಳಸಲು ಒಂದು ಹೊಸ ವಿಧಾನವಿರಲಿದೆ. ವಾಟ್ಸಪ್ ಬೀಟಾ (Beta) ಆವೃತ್ತಿಯಲ್ಲಿ ಈಗಾಗಲೇ ಈ ಫೀಚರ್ ಮೇಲೆ ಪರೀಕ್ಷೆ ನಡೆಯುತ್ತಿದೆ. ಬ್ಲೂಟೂತ್ ಮೂಲಕ ಸಂಪರ್ಕ ಹೊಂದಿಸಿ, ಫೈಲ್ ಕಳುಹಿಸಲು ಪ್ರಕ್ರಿಯೆ ಸರಳಗೊಳ್ಳಲಿದೆ. ಬೇಕಿದ್ದರೆ ಈ ಆಯ್ಕೆ ನಿಷ್ಕ್ರೀಯಗೊಳಿಸುವ ಅವಕಾಶವೂ ಇರಲಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳು, ಪ್ರೀಮಿಯಂ ಫೋನ್‌ಗಳು ಅಗ್ಗದ ದರಕ್ಕೆ!

ಈ ಹೊಸ ಪರಿಷ್ಕೃತ ಫೀಚರ್ ಕೇವಲ ಕೆಲವು ಬಳಕೆದಾರರಿಗೆ ಸದ್ಯಕ್ಕೆ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗೂ ಇದು ಲಭ್ಯವಾಗುವ ನಿರೀಕ್ಷೆ ಇದೆ.

Whatsapp New Feature Release

ಇದು ಯಾವಾಗ ಲಭ್ಯ?

ಈ ಹೊಸ ಅಪ್‌ಡೇಟ್ ಯಾವಾಗ ಬರಲಿದೆ ಎಂಬುದರ ಬಗ್ಗೆ ವಾಟ್ಸಪ್ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಕೆಲವು ಬಳಕೆದಾರರು ಈಗಾಗಲೇ ಬೀಟಾ ಆವೃತ್ತಿಯಲ್ಲಿ ಇದನ್ನು ಪರೀಕ್ಷಿಸುತ್ತಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ವಾಟ್ಸಪ್ ಆಫ್ಲೈನ್ ಶೇರಿಂಗ್ ಎಲ್ಲರಿಗೂ ಲಭ್ಯವಾಗಬಹುದು.

WhatsApp offline mode, Share photos and videos without internet

English Summary

Our Whatsapp Channel is Live Now 👇

Whatsapp Channel

Related Stories