RRR ಸಿನಿಮಾದ 10 ದಿನಗಳ Worldwide Collections ಎಷ್ಟು ಗೊತ್ತಾ

Arrow

ಟಾಲಿವುಡ್‌ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಮೂವಿ RRR ಮಾರ್ಚ್ 25 ರಂದು ವಿಶ್ವದಾದ್ಯಂತ ಬಿಡುಗಡೆಯೊಂದಿಗೆ ಬಾಕ್ಸ್ ಆಫೀಸ್ ಅನ್ನು ಅಲ್ಲಾಡಿಸುತ್ತಿದೆ, 10 ದಿನಗಳ ಕಲೆಕ್ಷನ್ ಎಷ್ಟು ಎಂದು ನೋಡಿ.

ದಿನದಿಂದ ದಿನಕ್ಕೆ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿರುವ ಸಿನಿಮಾ RRR, ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುವ ಮೂಲಕ ಎರಡನೇ ವಾರಕ್ಕೆ ಕಾಲಿಟ್ಟಿದೆ.

ಸಿನಿಮಾ ರಿಲೀಸ್ ಆಗಿ 10 ದಿನ ಕಳೆದಿದೆ, ಕಲೆಕ್ಷನ್ ಗಳ ಸುರಿಮಳೆಯಾಗುತ್ತಿದೆ, ಹೌದು ಗಳಿಕೆಯಲ್ಲಿ ಚಿತ್ರವು ವಿಶ್ವಾದ್ಯಂತ 900 ಕೋಟಿ ರೂ. ದಾಟಿದೆ.

ದಕ್ಷಿಣದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಚಿತ್ರ ಸಾಕಷ್ಟು ಕ್ರೇಜ್ ಗಳಿಸಿದೆ. ಸಿನಿಮಾದಲ್ಲಿ ಯಂಗ್ ಟೈಗರ್ NTR ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯಿಸಿದ್ದಾರೆ.

RRR ಸಿನಿಮಾ 10 ದಿನಗಳ ಅಂತ್ಯದ ವೇಳೆಗೆ, ಈ ಹಿಂದೆ ಸಿನಿಮಾಗಳು ಗಳಿಸಿದ್ದ ದಾಖಲೆಗಳನ್ನು ಮುರಿದಿದೆ, RRR ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆ ಮಾಡಿದೆ.

ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ RRR ಚಿತ್ರವನ್ನು ನೋಡಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್‌ಗಳತ್ತ ಮುಗಿಬಿದ್ದಿದ್ದಾರೆ ಎಂದರೆ ಚಿತ್ರದ ಕ್ರೇಜ್ ಹೇಗಿದೆ ನೋಡಿ.

Click To Read More STORIES