ವಾರ ಭವಿಷ್ಯ: ಗ್ರಹಬಲದಿಂದ ವೃದ್ಧಿ ಯೋಗ, ಈ ರಾಶಿಗಳಿಗೆ ಬಯಸಿದ ಯಶಸ್ಸು
Weekly Horoscope : ಈ ವಾರ ಭವಿಷ್ಯ (Vara Bhavishya) ಈ ರಾಶಿಗಳಿಗೆ ಸ್ವಲ್ಪ ಪ್ರಯತ್ನ ಮಾಡಿದರೆ ಯಾವುದೇ ಪ್ರಯತ್ನ ಯಶಸ್ವಿಯಾಗುತ್ತದೆ ಎಂಬ ಸೂಚನೆ ನೀಡುತ್ತಿದೆ.
ವಾರ ಭವಿಷ್ಯ (ಮಾರ್ಚ್ 9 ರಿಂದ 15 ಮಾರ್ಚ್ 2025)
ಮೇಷ ರಾಶಿ (Aries) : ಈ ವಾರ ನಿಮಗೆ ಸೌಭಾಗ್ಯಕರ ಮತ್ತು ಸಕಾರಾತ್ಮಕ ಬೆಳವಣಿಗೆಗಳ ಸಮಯ. ಉದ್ಯೋಗದಲ್ಲಿ ನಿಮ್ಮ ಕೌಶಲ್ಯ ಮೆರೆದರೆ ಮುಂದುವರಿದ ಅವಕಾಶಗಳು ಲಭಿಸುತ್ತವೆ. ವ್ಯಾಪಾರಿಗಳಿಗೆ ಲಾಭದಾಯಕ ಡೀಲ್‌ಗಳು ದೊರಕುವ ಸಾಧ್ಯತೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಕುಟುಂಬದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗುತ್ತದೆ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ.
ವೃಷಭ ರಾಶಿ (Taurus) : ಉದ್ಯೋಗದಲ್ಲಿ ಈ ವಾರ ಉತ್ತಮ ಮುನ್ನಡೆ ಸಾಧ್ಯ. ಸಹೋದ್ಯೋಗಿಗಳ ಬೆಂಬಲ ನಿಮ್ಮೊಂದಿಗೆ ಇರುತ್ತದೆ. ಆರ್ಥಿಕವಾಗಿ ಲಾಭದಾಯಕ ಕಾಲ, ಹಳೆಯ ಸಾಲಗಳ ಹೊರೆಯು ಕಡಿಮೆಯಾಗುವ ಸಂಭವ. ಕುಟುಂಬದಲ್ಲಿ ಸಂತಸದ ಕ್ಷಣಗಳು ಹೆಚ್ಚು. ಯಾತ್ರೆ ಅಥವಾ ವಿದೇಶ ಪ್ರಯಾಣದ ಅವಕಾಶ ದೊರಕಬಹುದು. ಆರೋಗ್ಯದ ವಿಚಾರದಲ್ಲಿ ಜಾಗರೂಕತೆ ಅವಶ್ಯಕ.
ಮಿಥುನ ರಾಶಿ (Gemini) : ನಿಮ್ಮ ಕಠಿಣ ಪರಿಶ್ರಮ ಈ ವಾರ ಫಲ ನೀಡಲಿದೆ. ಉದ್ಯೋಗದಲ್ಲಿ ಮುನ್ನಡೆ ಕಂಡುಬರುವ ಸಾಧ್ಯತೆ. ವ್ಯಾಪಾರಿಗಳಿಗೆ ಹೊಸ ತಂತ್ರಗಳು ಫಲ ನೀಡಬಹುದು. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಕುಟುಂಬದಲ್ಲಿ ಹೊಸ ಅತಿಥಿ ಬರಬಹುದು. ಸ್ನೇಹಿತರ ಸಹಾಯದಿಂದ ಮಹತ್ವದ ಕಾರ್ಯ ಪೂರ್ತಿಯಾಗಲಿದೆ. ಆರೋಗ್ಯದ ವಿಚಾರದಲ್ಲಿ ಕಾಳಜಿಯ ಅವಶ್ಯಕತೆ.
ಕಟಕ ರಾಶಿ (Cancer) : ನಿಮ್ಮ ಯೋಚನೆಗಳು ಸ್ಪಷ್ಟವಾಗಿದ್ದು, ಮುಂದುವರಿದ ಯೋಜನೆಗಳಿಗೆ ಇದು ಸರಿಯಾದ ಸಮಯ. ಉದ್ಯೋಗದಲ್ಲಿ ನಿಮ್ಮ ಮಾತಿಗೆ ಮಹತ್ವ ಸಿಗುತ್ತದೆ. ಆರ್ಥಿಕವಾಗಿ ಕೆಲವು ಅನಿರೀಕ್ಷಿತ ಖರ್ಚುಗಳೆದುರಿಸಬೇಕಾಗಬಹುದು. ಕುಟುಂಬದಲ್ಲಿ ಉತ್ತಮ ವಾತಾವರಣ ಕಾಣಬಹುದು. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು.
ಸಿಂಹ ರಾಶಿ (Leo) : ಈ ವಾರ ಸಮಸ್ಯೆಗಳ ನಡುವೆಯೂ ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು ನಿಶ್ಚಿತ. ಉದ್ಯೋಗದಲ್ಲಿ ಒತ್ತಡ ಹೆಚ್ಚಾದರೂ, ಅದನ್ನು ಸಮರ್ಥವಾಗಿ ನಿರ್ವಹಿಸುವಿರಿ. ಹಣಕಾಸಿನಲ್ಲಿ ಏರುಪೇರುಗಳಾಗಬಹುದು, ಆದ್ದರಿಂದ ಶಾಂತಿ ಸಹನೆ ಅವಶ್ಯಕ. ಕುಟುಂಬದಲ್ಲಿ ಕೆಲವು ಗೊಂದಲಗಳ ನಿವಾರಣೆಯಾಗಲಿವೆ. ಆರೋಗ್ಯದಲ್ಲಿ ಮಧ್ಯಮ ಸ್ಥಿತಿ. ಯೋಗ ಧ್ಯಾನ ಮಾಡುವುದು ರೂಡಿಸಿಕೊಳ್ಳಿ.
ಕನ್ಯಾ ರಾಶಿ (Virgo) : ನಿಮ್ಮ ಪರಿಶ್ರಮ ಈ ವಾರ ಯಶಸ್ಸಿನ ಮೆಟ್ಟಿಲಾಗಲಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಮಹತ್ವದ ಅವಕಾಶಗಳು ದೊರಕಬಹುದು. ಆರ್ಥಿಕವಾಗಿ ಬಲವಾದ ಸ್ಥಿತಿ. ಕುಟುಂಬದಲ್ಲಿ ಹಳೆಯ ಸಮಸ್ಯೆಯ ವಿಷಯಗಳಿಗೆ ಪರಿಹಾರ ಕಂಡುಕೊಳ್ಳಬಹುದು. ದೂರ ಪ್ರಯಾಣದ ಸಾಧ್ಯತೆ ಇದೆ. ಆರೋಗ್ಯದಲ್ಲಿ ಹಳೆಯ ಸಮಸ್ಯೆಗಳ ಪರಿಹಾರವಾಗುವ ಸೂಚನೆ.
ತುಲಾ ರಾಶಿ (Libra) : ಈ ವಾರ ನಿಮ್ಮ ಪಾಲಿಗೆ ಸಂತಸದ ಸುದ್ದಿಗಳು, ಹೊಸ ಅವಕಾಶಗಳು ಲಭ್ಯವಿರಲಿವೆ. ಉದ್ಯೋಗದಲ್ಲಿ ನೀವು ನಿರೀಕ್ಷಿಸಿದ ಹುದ್ದೆ ಅಥವಾ ಬಡ್ತಿ ಸಿಗಬಹುದು. ಆರ್ಥಿಕವಾಗಿ ಸ್ಥಿರತೆ. ಕುಟುಂಬದಲ್ಲಿ ಶಾಂತಿ, ಸಮಾಧಾನ ಕಾಣಬಹದುದು. ವಿದ್ಯಾರ್ಥಿಗಳಿಗೆ ಪ್ರಗತಿಯು ಹತ್ತಿರವಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಚಿಂತೆಯ ಅವಶ್ಯಕತೆ ಇಲ್ಲ.
ವೃಶ್ಚಿಕ ರಾಶಿ (Scorpio) : ನಿಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚು ಇರಬಹುದು, ಆದರೆ ನಿಮ್ಮ ನಿರ್ಧಾರಗಳ ಮೇಲೆ ಭರವಸೆ ಇಡಿ. ಆರ್ಥಿಕವಾಗಿ ಲಾಭವಿರುವ ಸಮಯ ಇದಾಗುತ್ತದೆ. ಕುಟುಂಬದಲ್ಲಿ ವಿವಾಹ ಕಾರ್ಯಗಳು ಅಥವಾ ಸಂತಸದ ಘಟನೆ ಸಂಭವಿಸಬಹುದು. ಆರೋಗ್ಯ ಉತ್ತಮವಾಗಿರುತ್ತದೆ.
ಧನು ರಾಶಿ (Sagittarius) : ಉದ್ಯೋಗದಲ್ಲಿ ಪ್ರಭಾವ ಹೆಚ್ಚಳ, ಉತ್ತಮ ಬೆಳವಣಿಗೆ ಸಾಧ್ಯತೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭ ಇರುತ್ತದೆ. ಉದ್ಯೋಗ ಇಲ್ಲದವರಿಗೆ ಹೊಸ ಅವಕಾಶಗಳು ಲಭಿಸಬಹುದು. ಆಸ್ತಿ-ಪಾಸ್ತಿ ಸಂಬಂಧಿತ ಕೆಲಸಗಳಿಗೆ ಈ ವಾರ ಅನುಕೂಲಕರವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಆದರೆ ಹೊರಗಿನ ಆಹಾರ ಸೇವಿಸಬೇಡಿ.
ಮಕರ ರಾಶಿ (Capricorn) : ಪ್ರಮುಖ ನಿರ್ಧಾರಗಳಲ್ಲಿ ತಾಳ್ಮೆ ಇರಲಿ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ಆರ್ಥಿಕ ಸ್ಥಿತಿಯಲ್ಲಿ ಏರುಪೇರುಗಳಾಗಬಹುದು. ಕುಟುಂಬದಲ್ಲಿ ಹಿರಿಯರ ಸಲಹೆಯನ್ನು ಪ್ರಾಮುಖ್ಯತೆಯಿಂದ ಪರಿಗಣಿಸಿ. ಆರೋಗ್ಯದಲ್ಲಿ ನಿಯಮಿತವಾದ ಕಾಳಜಿಯಿರಲಿ. ವಾರದ ಕೊನೆಯಲ್ಲಿ ಆರ್ಥಿಕ ಲಾಭದ ಸೂಚನೆಗಳಿಗೆ. ನಿಮ್ಮ ಕಾರ್ಯಗಳು ವೇಗ ಪಡೆಯುತ್ತವೆ.
ಕುಂಭ ರಾಶಿ (Aquarius) : ಈ ವಾರ ಸಕಾರಾತ್ಮಕ ಬೆಳವಣಿಗೆಗಳ ಕಾಲ. ವೃತ್ತಿ, ವ್ಯಾಪಾರದಲ್ಲಿ ನಿಮ್ಮ ಕಾರ್ಯತತ್ಪರತೆ ಫಲ ಕೊಡಲಿದೆ. ಹಣಕಾಸಿನಲ್ಲಿ ಲಾಭ, ಹೊಸ ಆಸ್ತಿ ಖರೀದಿಯ ಸಾಧ್ಯತೆ ಕೂಡ ಇದೆ. ಕುಟುಂಬದಲ್ಲಿ ಹೊಸ ಒಡನಾಟ, ಬಂಧು-ಬಳಗದೊಂದಿಗೆ ಉತ್ತಮ ಸಂಬಂಧ ಕಾಣಬಹುದು. ಆರೋಗ್ಯದಲ್ಲಿ ಹಳೆಯ ಸಮಸ್ಯೆಗಳು ನಿವಾರಣೆಯಾಗಲಿವೆ. ವಾರದ ಕೊನೆಯಲ್ಲಿ ಪ್ರವಾಸ ಯೋಜನೆ ಮಾಡಬಹುದು.
ಮೀನ ರಾಶಿ (Pisces) : ಈ ವಾರ ಆಕಸ್ಮಿಕ ಧನ ಲಾಭದ ಅವಕಾಶಗಳು ಎದುರಾಗುತ್ತವೆ. ವ್ಯಾಪಾರದಲ್ಲಿ ಉತ್ತಮ ಲಾಭ ಕಾಣಬಹುದು. ಆಸ್ತಿ ಖರೀದಿ ಅಥವಾ ಹಳೆಯ ಆಸ್ತಿಯ ಮೌಲ್ಯ ಹೆಚ್ಚುವ ನಿರೀಕ್ಷೆ. ಕುಟುಂಬದಲ್ಲಿ ನೆಮ್ಮದಿಯ ಬೆಳವಣಿಗೆ ಕಾಣಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಬಹಳಷ್ಟು ಸುಧಾರಿಸುತ್ತದೆ. ಆದಾಯಕ್ಕೆ ಕೊರತೆ ಇಲ್ಲ. ಗುರು ಮತ್ತು ಶುಕ್ರನ ಬಲದಿಂದಾಗಿ ಸಮಯವು ತುಂಬಾ ಅನುಕೂಲಕರವಾಗಿದೆ.
- ನಿಮ್ಮ ಸಮಸ್ಯೆ ಏನೇ ಆಗಿರಲಿ, ಎಷ್ಟೇ ಗಂಭೀರದ್ದಾಗಿರಲಿ, ಕೇವಲ ಎರಡು ದಿನಗಳಲ್ಲಿ ಶಾಶ್ವತ ಪರಿಹಾರ.
- ಅನೇಕರ ಬಳಿ ಜ್ಯೋತಿಷ್ಯ ಕೇಳಿ ಪರಿಹಾರ ಕಾಣದಿದ್ದರೆ, ಇಲ್ಲಿ ನಿಮಗೆ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ.
ದೂರವಾಣಿ : 9535156490
Weekly Horoscope For 9 March To 15 March 2025
Our Whatsapp Channel is Live Now 👇