1.65 ಲಕ್ಷ ಹೊಸ BPL ಕಾರ್ಡ್‌ಗಳು ಮಂಜೂರು! ನೀವೂ ಕೂಡ ಅಪ್ಲೈ ಮಾಡಿದ್ರಾ
ಫೆಬ್ರವರಿಯಿಂದ ನೀಡಬೇಕಿದ್ದ ಅಕ್ಕಿ (Rice) ವಿತರಣೆ ಮಾರ್ಚ್‌ನಲ್ಲಿ ಪ್ರಾರಂಭ! 2.95 ಲಕ್ಷ BPL ಕಾರ್ಡ್‌ಗಳು ಪರಿಶೀಲನೆಗೊಂಡಿದ್ದು, 1.65 ಲಕ್ಷ ಹೊಸ BPL ಕಾರ್ಡ್‌ಗಳ ಮಂಜೂರು.
- ಬಡವರಿಗೆ 10 ಕೆಜಿ ಅಕ್ಕಿ ವಿತರಣೆ ನಿರ್ಧಾರ!
- ಹಣದ ಬದಲು ಅಕ್ಕಿ ನೀಡಲು ಸರ್ಕಾರದ ನಿರ್ಧಾರ.
- 1.65 ಲಕ್ಷ ಹೊಸ BPL ಕಾರ್ಡ್‌ಗಳು ಮಂಜೂರು
BPL Ration Card: ಫೆಬ್ರವರಿಯಲ್ಲಿ ವಿತರಿಸಬೇಕಿದ್ದ ಅಕ್ಕಿ ಪೂರೈಕೆ ಮಾರ್ಚ್‌ನಿಂದ ಪ್ರಾರಂಭವಾಗಲಿದೆ. BPL (Below Poverty Line) ಕಾರ್ಡ್‌ಧಾರಿಗಳಿಗೆ ಹಣ ಜಮೆ ಮಾಡುವ ಪ್ರಕ್ರಿಯೆ ನಿಲ್ಲಿಸಿ, ನೇರವಾಗಿ ಅಕ್ಕಿ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಈ ಮೂಲಕ ಬಡವರ ಆಹಾರ ಸುರಕ್ಷತೆ ಕಾಪಾಡಲು ಸರ್ಕಾರ ಕ್ರಮ ಕೈಗೊಂಡಿದೆ.
2.95 ಲಕ್ಷ BPL ಕಾರ್ಡ್‌ಗಳ ಪರಿಶೀಲನೆ
ಸರ್ಕಾರದಿಂದ 2.95 ಲಕ್ಷ BPL Ration Card ಪರಿಶೀಲನೆ ನಡೆಸಲಾಗಿದ್ದು, 1.65 ಲಕ್ಷ ಹೊಸ BPL ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ. ಉಳಿದ ಕಾರ್ಡ್‌ಗಳನ್ನು APL (Above Poverty Line) ಗೆ ಪರಿವರ್ತಿಸಲಾಗಿದೆ. ಆರ್ಥಿಕವಾಗಿ ಸ್ಥಿರವಾಗಿರುವ BPL ಕಾರ್ಡ್‌ಗಳ ಪತ್ತೆ ಹಚ್ಚಿ ಸರಿಯಾದವರಿಗೇ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ: ಅನ್ನಭಾಗ್ಯ ಹಣ ಬಂತಾ ಇಲ್ವಾ! ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿಕೊಳ್ಳಿ
ಈ ಹಿಂದೆಯೇ ಆಹಾರ ಸಚಿವರು ತಿಳಿಸಿರುವಂತೆ ಪಂಚಾಯಿತಿ ಮುಖಾಂತರ ಕಾರ್ಡ್ ಗಳ ಪರಿಶೀಲನೆ ನಡೆಯಲಿದ್ದು, ಅನರ್ಹರ ಕಾರ್ಡುಗಳು ಕೂಡಲೇ ಕ್ಯಾನ್ಸಲ್ ಆಗಲಿವೆ. ಜೊತೆಗೆ ದಂಡ ವಿಧಿಸುವ ಚಿಂತನೆ ಕೂಡ ನಡೆಸಲಾಗಿದೆ.
ಇನ್ನು ಈ ಬಗ್ಗೆ ಸ್ವತಃ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ನವರು ಯಾವುದೇ ಕಾರಣಕ್ಕೂ ಬಡವರ ಕಾರ್ಡ್ ರದ್ದು ಮಾಡುವುದಿಲ್ಲ, ಸಾಧ್ಯವಾದರೆ ಅವರಿಗೆ ಇನ್ನಷ್ಟು ಸೌಲಭ್ಯ ಕೊಡಲು ಸರ್ಕಾರ ಸಿದ್ಧವಾಗಿದೆ, ಆದರೆ ಅನರ್ಹರ ಕಾರ್ಡುಗಳು ರದ್ದಾಗಲಿವೆ ಎಂದಿದ್ದಾರೆ.
ಇನ್ನು ನೀವೂ ಕೂಡ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದರೆ ಕೂಡಲೇ ನಿಮ್ಮ ಅರ್ಜಿ ಸ್ಥಿತಿ ಒಮ್ಮೆ ಚೆಕ್ ಮಾಡಿಕೊಳ್ಳಿ.
ಇದನ್ನೂ ಓದಿ: ಬಿಪಿಎಲ್ ಕಾರ್ಡುದಾರರಿಗೆ ಭರ್ಜರಿ ಸುದ್ದಿ, ಬಡವರಿಗೆ ಹೆಚ್ಚಿನ ಸೌಲಭ್ಯಗಳು!
DKಶಿ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ!
ಬಿಜೆಪಿಗೆ DK ಶಿವಕುಮಾರ್ ಹೋಗುತ್ತಾರೆ ಎಂಬ ವದಂತಿಗಳನ್ನು ಆಹಾರ ಸಚಿವ K.H. ಮುನಿಯಪ್ಪ ತಳ್ಳಿ ಹಾಕಿದ್ದಾರೆ. “DKಶಿ ಕಾಂಗ್ರೆಸ್ ಕಟ್ಟಿದವರು, ಅವರು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ!” ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಬಣ್ಣದ ರಾಜಕಾರಣ ಅನಗತ್ಯ!
DK ಶಿವಕುಮಾರ್ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಸಾಮಾನ್ಯವಾದ ಸಂಗತಿ. ಇದಕ್ಕೆ ಅರ್ಥಹೀನ ರಾಜಕೀಯ ಬೆರೆಸುವುದು ಸೂಕ್ತವಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಮುಂದಿನ ಸಿಎಂ ಎಂದೂ ಅವರು ತಿಳಿಸಿದ್ದಾರೆ.
1.65 lakh new BPL cards have been approved
Our Whatsapp Channel is Live Now 👇