Bengaluru NewsKarnataka News

ಇನ್ಮುಂದೆ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಕ್ಯಾನ್ಸಲ್, ರಾಜ್ಯ ಸರ್ಕಾರ ತೀರ್ಮಾನ!

ಅನ್ನಭಾಗ್ಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್. ಈಗಿನಿಂದ ಹಣದ ಬದಲಿಗೆ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲು ತೀರ್ಮಾನಿಸಲಾಗಿದೆ.

  • ಫೆಬ್ರವರಿಯಿಂದ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ
  • ಹಣ ಬದಲಿಗೆ ನೇರವಾಗಿ ಅಕ್ಕಿ ವಿತರಣೆಗೆ ಸರ್ಕಾರದ ತೀರ್ಮಾನ
  • ಅಕ್ಕಿ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆಯಿಂದ ಹೊಸ ಕ್ರಮ ಜಾರಿಗೆ

Rice Instead of Cash : ಇದು ಅನ್ನಭಾಗ್ಯ ಯೋಜನೆ (Anna Bhagya Scheme) ಫಲಾನುಭವಿಗಳಿಗೆ ಬಿಗ್ ಅಪ್ಡೇಟ್. ರಾಜ್ಯ ಸರ್ಕಾರವು ಇದೀಗ ಹಣದ ಬದಲಿಗೆ ನೇರವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ಕ್ರಮ ಫೆಬ್ರವರಿ ತಿಂಗಳಿನಿಂದಲೇ ಜಾರಿಗೆ ಬರಲಿದ್ದು, ಒಂದೆಡೆ ಈ ತೀರ್ಮಾನ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ ದಾರರಿಗೆ ಉಪಯುಕ್ತವಾಗಲಿದೆ.

ಇದಕ್ಕೂ ಮುನ್ನ ಒಂದು ವರ್ಷ ಕಾಲ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿಯ ಜೊತೆಗೆ ಹಣ ವರ್ಗಾವಣೆಯನ್ನೂ ಮಾಡಲಾಗುತ್ತಿತ್ತು. ಆದರೆ, ಕಳೆದ ಕೆಲವು ತಿಂಗಳಿಂದ ಹಣ ವರ್ಗಾವಣೆ ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗುತ್ತಿತ್ತು. ಇದರಿಂದ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದರು.

ಇನ್ಮುಂದೆ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಕ್ಯಾನ್ಸಲ್, ರಾಜ್ಯ ಸರ್ಕಾರ ತೀರ್ಮಾನ!

ಇದನ್ನೂ ಓದಿ: ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ವಾಪಾಸ್ ಕೊಡಲು ಒಂದು ವಾರ ಗಡುವು

ಈ ಬಗ್ಗೆ ಆಹಾರ ಸಚಿವ KH ಮುನಿಯಪ್ಪ ಮಾತನಾಡುತ್ತಾ, ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಲು ಒಪ್ಪಿಗೆ ದೊರಕಿರುವುದರಿಂದ ಇದೀಗ ನೇರ ಅಕ್ಕಿ ವಿತರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ನವೆಂಬರ್ ವರೆಗೂ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗಿದ್ದು, ಜನವರಿಯಿಂದ ಫೆಬ್ರವರಿ ತನಕ ಹಣವನ್ನು ನೀಡಲಾಗುತ್ತದೆ. ನಂತರ ಫೆಬ್ರವರಿಯಿಂದ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

KH Muniyappa

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಕರೆಕ್ಟ್ ಆಗಿ ಕೊಡೋಕೆ ಅದೇನು ಸಂಬಳನಾ: ಸಚಿವ ಜಾರ್ಜ್

ಹಣ ಮತ್ತು ಅಕ್ಕಿ ಎರಡೂ ಸಮಯಕ್ಕೆ ಸಿಗದೇ ಫಲಾನುಭವಿಗಳು ತೊಂದರೆ ಅನುಭವಿಸುತ್ತಿರುವುದು ಸರ್ಕಾರ ಮನಗಂಡಿದ್ದು, ಇದನ್ನು ಪರಿಹರಿಸಲು ಹೆಚ್ಚುವರಿ ಐದು ಕೆಜಿ ಅಕ್ಕಿಯನ್ನೇ ನೀಡಲು ಚಿಂತನೆ ನಡೆಸಲಾಗಿದೆ. ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಬಹುದಾದ ಅನುಮತಿಗೆ ರಾಜ್ಯ ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಿದೆ.

ಅನ್ನಭಾಗ್ಯ ಯೋಜನೆ

ಈ ಮೂಲಕ ಅನ್ನಭಾಗ್ಯ ಅಕ್ಕಿ ಹಣ ಕ್ಯಾನ್ಸಲ್ ಆಗಿ, ಅದರ ಬದಲಿಗೆ ಅಕ್ಕಿಯನ್ನೇ ನೀಡಲಾಗುತ್ತದೆ. ಕೇಂದ್ರದ ಐದು ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವೂ ಸಹ ಐದು ಕೆಜಿ ಅಕ್ಕಿಯನ್ನು ನೀಡಲಿದೆ, ಒಟ್ಟಾರೆ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ.

10 Kg Rice Instead of Cash in Anna Bhagya Scheme

English Summary

Related Stories