ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ವಾಪಾಸ್ ಕೊಡಲು ಒಂದು ವಾರ ಗಡುವು

ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದವರಿಗೆ ರಾಜ್ಯ ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ. ಕಾರ್ಡ್ ವಾಪಸ್ ಮಾಡದಿದ್ದರೆ ದಂಡ ವಿಧಿಸಲಾಗುವುದು ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ.

  • ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ತಕ್ಷಣ ವಾಪಸ್ ಮಾಡಬೇಕು
  • ಪರಿಶೀಲನೆ ಪ್ರಕ್ರಿಯೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರಂಭ
  • ವಾಪಸ್ ಮಾಡದಿದ್ದರೆ ಕಾನೂನಿನಡಿ ದಂಡ ವಿಧಿಸಲಾಗುವುದು

BPL Ration Card : ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ (BPL Card) ಬಳಕೆ ಕುರಿತಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಾನೂನಿನಲ್ಲಿ ಅವಕಾಶವಿರುವ ದಂಡವನ್ನು ಅನ್ವಯಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಆಹಾರ ಸಚಿವ ಮುನಿಯಪ್ಪ (KH Muniyappa) ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಹತೆ ಇಲ್ಲದೇ ಕಾರ್ಡ್ ಪಡೆದವರಿಗೆ ಒಂದು ವಾರಾವಕಾಶ ನೀಡಲಾಗುತ್ತದೆ.

ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ವಾಪಸ್ ಮಾಡಲು ಮನವಿ ಮಾಡಲಾಗಿದ್ದು, ಇದು ವಿಫಲವಾದರೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪರಿಶೀಲನೆ ಪ್ರಾರಂಭಿಸಲಾಗುತ್ತದೆ. ಪರಿಶೀಲನೆಯ ಬಳಿಕ ಪ್ರಕರಣಗಳು ದೃಢಪಟ್ಟರೆ ದಂಡ ವಿಧಿಸುವ ಬಗ್ಗೆ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಕರೆಕ್ಟ್ ಆಗಿ ಕೊಡೋಕೆ ಅದೇನು ಸಂಬಳನಾ: ಸಚಿವ ಜಾರ್ಜ್

ಬಿಪಿಎಲ್ ಕಾರ್ಡ್ ಮಾನದಂಡಗಳ ಪರಿಷ್ಕರಣೆ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದ್ದು, ಈ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮುನಿಯಪ್ಪ ಹೇಳಿದರು.

KH Muniyappa

ಇದಲ್ಲದೆ, ಅರ್ಹತೆ ಇಲ್ಲದವರಿಂದ ಕಾರ್ಡ್ ಹಿಂಪಡೆಯಲು ಪ್ರಕ್ರಿಯೆಯನ್ನು ಸುಗಮಗೊಳಿಸುವ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ.

ಸಮಾಜದ ನಿಜವಾದ ಬಡವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ತಲುಪಿಸಲು ಈ ಕ್ರಮ ಅತ್ಯಂತ ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು ಕಠಿಣವಾಗಿ ಅನುಸರಿಸಲಿದೆ ಮತ್ತು ಯಾವುದೇ ಅವ್ಯವಹಾರವನ್ನು ಸಹಿಸದು ಎಂದಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಹಣ ಇನ್ಮೇಲೆ ತಪ್ಪದೆ ಖಾತೆಗೆ ಜಮಾ ಆಗುತ್ತೆ: ಕೆ.ಹೆಚ್.ಮುನಿಯಪ್ಪ

ಅರ್ಹತೆ ಇಲ್ಲದೇ ಇದ್ದವರು ಸಾಕಷ್ಟು ಜನ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ, ಇದರಿಂದ ನಿಜವಾಗಿಯೂ ಯಾರಿಗೆ ಸೌಲಭ್ಯ ಸೇರಬೇಕೋ ಅವರಿಗೆ ಸೇರುತ್ತಿಲ್ಲ. ಅಂತವರಿಗೆ ಕಾರ್ಡ್ ವಾಪಸ್ ಕೊಡಲು ಮನವಿ ಮಾಡುತ್ತೇವೆ. ಈ ಸಂಬಂಧ ಇನ್ನೊಂದು ವಾರದಲ್ಲಿ ಜಾಹೀರಾತು ನೀಡಲಾಗುತ್ತದೆ. ಈ ಸೂಚನೆ ನಂತರವೂ ಕಾರ್ಡ್ ವಾಪಸ್ ಕೊಡದೇ ಹೋದರೆ ದಂಡ ವಿಧಿಸುವುದಾಗಿ ಸಚಿವ ಮುನಿಯಪ್ಪ ಎಚ್ಚರಿಕೆ ಕೊಟ್ಟಿದ್ದಾರೆ.

BPL Card Holders Alert, Government Warns of Fines

Related Stories