ಅನ್ನಭಾಗ್ಯ ಅಕ್ಕಿ ಹಣ ಇನ್ಮೇಲೆ ತಪ್ಪದೆ ಖಾತೆಗೆ ಜಮಾ ಆಗುತ್ತೆ: ಕೆ.ಹೆಚ್.ಮುನಿಯಪ್ಪ
ಎರಡು ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಮಾತ್ರ ಬಾಕಿ ಇದೆ. ವಿಳಂಬಕ್ಕೆ ಸ್ಪಷ್ಟನೆ ನೀಡಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಇನ್ಮೇಲೆ ಪ್ರತಿ ತಿಂಗಳು ಹಣ ಹಾಕಲು ಏರ್ಪಾಡು ಮಾಡಲಾಗುವುದು ಎಂದರು.
ಬೆಂಗಳೂರು, ದೊಡ್ಡಬಳ್ಳಾಪುರ (Bengaluru): ಅನ್ನಭಾಗ್ಯ ಯೋಜನೆಯಲ್ಲಿ (Annabhagya Yojane) ಕೆಲವು ವಿಳಂಬಗಳ ಹಿನ್ನೆಲೆಯಲ್ಲಿ, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ (K.H. Muniyappa) ಸ್ಪಷ್ಟನೆ ನೀಡಿದರು.
ತುಬಗೆರೆ ಗ್ರಾಮದಲ್ಲಿ ನಡೆದ ಪ್ರಸನ್ನ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯದ ರಾಜಗೋಪುರ ಉದ್ಘಾಟನೆ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು..
“ಅಕ್ಕಿ ಹಣ ಕೇವಲ ಎರಡು ತಿಂಗಳ ಬಾಕಿ ಮಾತ್ರ ಇದೆ. ಏನೇ ಇರಲಿ ಇನ್ಮೇಲೆ ಪ್ರತಿ ತಿಂಗಳು ಈ ಹಣವನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೂಡಲೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಸೂಚನೆ!
ಇದರೊಂದಿಗೆ, ಮುನಿಯಪ್ಪ ಅವರು ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ನೀಡಿದರು. “ನಾವು ಯಾವಾಗಲೂ ಸರಿಯಾಗಿ ಕೆಲಸ ಮಾಡುತ್ತೇವೆ, ವಿಪಕ್ಷಗಳು ಟೀಕೆ ಮಾಡಿದರೂ, ನಾವು ನಮ್ಮ ಕಾರ್ಯವನ್ನು ನಿರ್ವಹಿಸೋಣ, ವಿಪಕ್ಷಗಳು ಟೀಕೆ ಮಾಡಿದರೇನೇ ನಾವು ಸರಿಯಾಗಿ ಕೆಲಸ ಮಾಡುವುದು” ಎಂದರು.
ಅನ್ನಭಾಗ್ಯ ಯೋಜನೆ: ಪ್ರತಿ ತಿಂಗಳು ಹಣ ಬಿಡುಗಡೆ ಮಾಡಲು ಸರಿಯಾದ ವ್ಯವಸ್ಥೆ
ಇನ್ನು ಇಷ್ಟು ದಿನ, ಅನ್ನಭಾಗ್ಯ ಹಣ ಬಂದಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದ ಮಹಿಳೆಯರಿಗೆ ಇದರಿಂದ ಸ್ವಲ್ಪ ನಿರಾಳವಾಗಿದೆ, ಸಚಿವರ ಭರವಸೆಯಂತೆ ಇನ್ನು ಮುಂದೆ ಪ್ರತಿ ತಿಂಗಳು ಅನ್ನಭಾಗ್ಯ ಹಣ ಫಲಾನುಭವಿಗಳ ಖಾತೆ ಸೇರಲಿದೆ.
ಅನ್ನಭಾಗ್ಯ ಯೋಜನೆ ಹಿನ್ನೆಲೆ
ಬಡತನ ಮತ್ತು ಹಸಿವನ್ನು ನಿವಾರಿಸುವ ಗುರಿಯೊಂದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು (Karnataka Government) 2013 ರಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು.
ಈ ಯೋಜನೆಯು ಬಿಪಿಎಲ್ ಕುಟುಂಬಗಳಿಗೆ (BPL Card Holders) ತಿಂಗಳಿಗೆ 30 ಕೆಜಿ ಅಕ್ಕಿಯನ್ನು ಕಡಿಮೆ ಬೆಲೆಯಲ್ಲಿ ಒದಗಿಸಿತು ಮತ್ತು ನಂತರ ಅದನ್ನು ಉಚಿತ ವಿತರಣೆಗೆ ವಿಸ್ತರಿಸಲಾಯಿತು. ಬಡ ಕುಟುಂಬಗಳ ಮೇಲೆ ಬೀಳುವ ಆಹಾರದ ಮೇಲಿನ ವೆಚ್ಚದ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಎಲ್ಲಾ ನಾಗರಿಕರು ತಮ್ಮ ಕನಿಷ್ಠ ಮೂಲಭೂತ ಪೋಷಣೆಯನ್ನು ಹೊಂದುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.
ಇದನ್ನೂ ಓದಿ: ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗೆ ಸರ್ಕಾರದ ಬಳಿ ಹಣ ಇಲ್ವಾ? ಏನಿದು ಹೊಸ ವಿಷಯ
ಈ ಯೋಜನೆಯಲ್ಲಿ ಅಕ್ಕಿಯ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆಯು ವರ್ಷಗಳಲ್ಲಿ ಹಲವಾರು ತಿದ್ದುಪಡಿಗಳನ್ನು ಸಹ ಕಾಣಬೇಕಾಯಿತು. ಕಾಲಾಂನಂತರ ಕೊಟ್ಟ ಮಾತಿನಂತೆ ಅಕ್ಕಿ ವಿತರಣೆ ಆಗಿಲ್ಲದ ಕಾರಣ ಅಕ್ಕಿ ಬದಲಿಗೆ ಹಣವನ್ನು ನೀಡಲು ಸರ್ಕಾರ ನಿರ್ಧರಿಸಿತು, ಇಂದಿನ ಸಚಿವರ ಮಾತಿನಂತೆ ಆ ಹಣ ಇನ್ನು ಮುಂದೆ ತಪ್ಪದೆ ಫಲಾನುಭವಿಗಳ ಖಾತೆ (Bank Account) ಸೇರಲಿದೆ.
Annabhagya scheme pending Fund Releasing Soon
Our Whatsapp Channel is Live Now 👇