Ration Card: ರೇಷನ್ ಕಾರ್ಡ್ ವಿತರಣೆ ವಿಚಾರದಲ್ಲಿ ಸರ್ಕಾರದಿಂದ ಜನರಿಗೆ ಮತ್ತೊಂದು ಗುಡ್ ನ್ಯೂಸ್
ರೇಷನ್ ಕಾರ್ಡ್ ಇಲ್ಲದೇ ಇರುವಂತಹ ಸಾಕಷ್ಟು ಬಡ ಕುಟುಂಬಗಳು ಕೂಡ ಇವೆ. ಅದರಲ್ಲೂ ವಿಶೇಷವಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜನರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ
- ಹೊಸ ರೇಷನ್ ಕಾರ್ಡ್ ವಿತರಣೆ ಪ್ರಾರಂಭ.
- ಸೋಮವಾರಪೇಟೆಯ ತಾಲೂಕಿನ ಹಾಡಿಗಳಲ್ಲಿ ರೇಷನ್ ಕಾರ್ಡ್ ವಿತರಣೆ ಆರಂಭ.
- ಮೇರಾ ರೇಷನ್ 2.0 ಅಪ್ಲಿಕೇಶನ್ ಪರಿಚಯ.
ಬೆಂಗಳೂರು (Bengaluru): ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವಂತಹ ಪಡಿತರ ಸಾಮಾನುಗಳ ವಿಚಾರದಲ್ಲಿ ಮಾತ್ರವಲ್ಲದೆ ಸರ್ಕಾರದ ಯಾವುದೇ ರೀತಿಯ ಯೋಜನೆಗಳನ್ನು ಪಡೆದುಕೊಳ್ಳುವುದಕ್ಕೆ ರೇಷನ್ ಕಾರ್ಡ್ (Ration Card) ಅತ್ಯಂತ ಪ್ರಮುಖವಾಗಿ ಬೇಕಾಗಿರುತ್ತದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.
ಸಿಕ್ಕಿರುವಂತಹ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ರೇಷನ್ ಕಾರ್ಡ್ ಇಲ್ಲದೇ ಇರುವಂತಹ ಸಾಕಷ್ಟು ಬಡ ಕುಟುಂಬಗಳು ಕೂಡ ಇವೆ. ಅದರಲ್ಲೂ ವಿಶೇಷವಾಗಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜನರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ರೇಷನ್ ಕಾರ್ಡ್ ಪಡೆಯದೇ ಇರುವಂತಹ ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡುವ ಮೂಲಕ ಅಲ್ಲಿನ ಬಡ ಜನರಿಗೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಒಂದು ಮಾತ್ರವಾದ ಹೆಜ್ಜೆಯನ್ನು ಆಹಾರ ಇಲಾಖೆ ಇಟ್ಟಿದೆ ಎಂದು ಹೇಳಬಹುದು.
ಬಾಣವರ, ಮಾಲಂಗಿ, ಸಂಗಯ್ಯನಪುರ, ಯಲಕನೂರು ಹಾಗೂ ಆಡಿ ನಾಡೂರು ಗಳಂತಹ ಹಾಡಿಗಳಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವಂತಹ 102 ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡುವಂತಹ ಕೆಲಸವನ್ನು ಈ ಯೋಜನೆ ಅಡಿಯಲ್ಲಿ ಮಾಡಲಾಗಿದೆ.
ಇನ್ಮುಂದೆ ಫ್ರೀ ಬಸ್ ಪ್ರಯಾಣಕ್ಕೆ ಬೇಕು ಸ್ಮಾರ್ಟ್ ಕಾರ್ಡ್, ಶಕ್ತಿ ಯೋಜನೆ ಅಡಿ ಹೊಸ ನಿಯಮ
ಈ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಇನ್ನಷ್ಟು ಮುಂದುವರಿಸುವಂತಹ ಕೆಲಸವನ್ನು ಕೂಡ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ನೀಡಲಾಗಿದೆ.
ಈಗಾಗಲೇ ನಕಲಿ ಕಾರ್ಡುಗಳನ್ನ ವಾಪಸ್ ಪಡೆದುಕೊಳ್ಳುವುದು ಹಾಗೂ ಅನರ್ಹರಾಗಿದ್ರೂ ಕೂಡ ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಂಡಿರುವಂತಹವರಿಂದ ಅವರ ಕಾರ್ಡುಗಳನ್ನು ವಾಪಸ್ ಪಡೆದುಕೊಳ್ಳುವಂತಹ ಪ್ರಕ್ರಿಯೆ ಕೂಡ ಇದರ ಜೊತೆಗೆ ನಡೆಯುತ್ತಿದೆ.
ಇದರ ಜೊತೆಗೆ ಅರ್ಹ ಆಗಿದ್ರೂ ಕೂಡ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಿ ಮತ್ತೆ ಅವರುಗಳಿಗೆ ಆ ಕಾಡುಗಳನ್ನ ವಾಪಸ್ ನೀಡುವಂತಹ ಹೇಳಿಕೆ ಕೂಡ ಸರ್ಕಾರದಿಂದ ಬಂದಿದೆ. ಈ ರೀತಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವಂತ ಕೆಲಸವನ್ನು ಸರ್ಕಾರ ಘೋಷಣೆ ಮಾಡಿ ಕಾರ್ಯಪ್ರವೃತ್ತರಾದಾಗ ಜನಸಾಮಾನ್ಯರಿಂದ ವ್ಯಾಪಕ ವಿರೋಧ ಕೇಳಿ ಬಂದಿತ್ತು. ಇದರಿಂದ ಎಚ್ಚೆತ್ತಿರುವಂತಹ ರಾಜ್ಯ ಸರ್ಕಾರ ಈಗ ಮತ್ತೆ ಬಿಪಿಎಲ್ ಕಾರ್ಡುಗಳನ್ನು ಅವರಿಗೆ ವಾಪಸ್ ಮರಳಿಸುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಹೊಸದಾಗಿ ಬಂದಿರುವಂತಹ ಟೆಕ್ನೋಲಜಿ ಅಡಿಯಲ್ಲಿ ಮೇರ ರೇಷನ್ 2.0 ಅಪ್ಲಿಕೇಶನ್ ಬಳಸಿಕೊಳ್ಳುವ ಮೂಲಕ ಪಡಿತರ ಅಂಗಡಿಗೆ ಹೋಗಿ ನೀವು ಪಡಿತರವನ್ನು ಪಡೆದುಕೊಳ್ಳುವಂತಹ ವಿಧಾನವನ್ನು ಕೂಡ ಪರಿಚಯಿಸಲಾಗಿದ್ದು, ಈ ಟೆಕ್ನಾಲಜಿಯ ಮೂಲಕ ಕೂಡ ನೀವು ನಿಮ್ಮ ಪಡಿತರ ಚೀಟಿ ಇಲ್ಲದೆ ಪಡಿತರ ಅಂಗಡಿಯಲ್ಲಿ ರೇಷನ್ ಪಡೆದುಕೊಳ್ಳಬಹುದಾಗಿದೆ.
Another Good News for People from the Government on Ration Card Distribution