ಈ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಮಹಿಳೆಯರೇ ಅರ್ಜಿ ಸಲ್ಲಿಸಿ, ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಕೆಗೆ 2024ರ ಸೆಪ್ಟೆಂಬರ್ 9ನೇ ತಾರೀಕು ಕೊನೆಯ ದಿನಾಂಕ ಆಗಿದೆ. ಈ ದಿನಾಂಕದ ಒಳಗೆ ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸಬಹುದು.
2 ಅಥವಾ 3 ತಿಂಗಳಿಗೆ ಒಂದು ಸಾರಿ ಅಂಗನವಾಡಿಯಲ್ಲಿ ಖಾಲಿ ಇರುವ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಯನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗೆ ಆಸಕ್ತಿ ಇರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 19 ರಿಂದ 35 ವರ್ಷಗಳ ಒಳಗಿರಬೇಕು.
ಅರ್ಜಿ ಸಲ್ಲಿಕೆಗೆ 2024ರ ಸೆಪ್ಟೆಂಬರ್ 9ನೇ ತಾರೀಕು ಕೊನೆಯ ದಿನಾಂಕ ಆಗಿದೆ. ಈ ದಿನಾಂಕದ ಒಳಗೆ ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹಾಗಿದ್ದಲ್ಲಿ ಈ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲಾ ಅರ್ಹತೆಗಳು ಇರಬೇಕು ಎಂದು ತಿಳಿದುಕೊಳ್ಳೋಣ..
ಅರ್ಹತೆಗಳು: ಅಂಗನವಾಡಿ ಸಹಾಯಕಿ ಹಾಗು ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳೆಯು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು. ಇನ್ನು ವಿದ್ಯಾರ್ಹತೆಯ ಬಗ್ಗೆ ಹೇಳುವುದಾದರೆ.. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರಲ್ಲಿ ಇರಬೇಕಾದ
ಅರ್ಹತೆಗಳು ಹೀಗಿದೆ..
*ಪಿಯುಸಿ ಪಾಸ್ ಆಗಿದ್ದು, ಕನ್ನಡ ಭಾಷೆಯನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಓದಿರಬೇಕು.
*ಈ ಹುದ್ದೆಯ ನೇಮಕಾತಿ ಸಮಯದಲ್ಲಿ ಸರ್ಕಾರದ ಮಾನ್ಯತೆ ಹೊಂದಿರುವ ಸಂಸ್ಥೆ ಇಂದ, DSERT ಇಂದ ECCE ಡಿಪ್ಲೊಮಾ, JOC F NTT ಕೋರ್ಸ್, ಜೊತೆಗೆ ಅಂಗನವಾಡಿಗೆ ಬೇಕಾದ ಡಿಪ್ಲೊಮಾ ನ್ಯೂಟ್ರಿಶಿಯನ್, ಹೋಮ್ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್, ಅಥವಾ 1 ವರ್ಷದ ನರ್ಸರಿ ಅಥವಾ ಪೂರ್ವ ಪ್ರಾಥಮಿಕ ತರಬೇತಿ ಪಡೆದು, ಸರ್ಟಿಫಿಕೇಟ್ ಹೊಂದಿರುವವರಿಗೆ ಪ್ರಾಮುಖ್ಯ ಇರುತ್ತದೆ.
ಇನ್ನು ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರ ಅರ್ಹತೆ ಬಗ್ಗೆ ಹೇಳುವುದಾದರೆ, ಈ ಮಹಿಳೆಯರು 10ನೇ ತರಗತಿಯಲ್ಲಿ ಓದಿ, ಪಾಸ್ ಆಗಿರಬೇಕು. ಈಗ ಯಾವೆಲ್ಲಾ ಜಿಲ್ಲೆಗಳಲ್ಲಿ ಈ ಹುದ್ದೆಗಳು ಖಾಲಿ ಇದೆ ಎಂದು ನೋಡುವುದಾದರೆ, ಯಾದಗಿರಿ, ದಾವಣಗೆರೆ, ವಿಜಯನಗರ, ಶಿವಮೊಗ್ಗ, ಹಾಸನ, ಬೆಳಗಾವಿ, ಚಿತ್ರದುರ್ಗ ಈ ಊರುಗಳಲ್ಲಿ ಹುದ್ದೆಗಳು ಖಾಲಿ ಇದೆ..
ಅಗತ್ಯವಿರುವ ದಾಖಲೆಗಳು:
*ಆನ್ಲೈನ್ ಅಪ್ಲಿಕೇಶನ್ ಫಾರ್ಮ್
*ಬರ್ತ್ ಸರ್ಟಿಫಿಕೇಟ್, 10ನೇ ತರಗತಿ ಮಾರ್ಕ್ಸ್ ಕಾರ್ಡ್
*ವಿದ್ಯಾರ್ಹತೆ ಹೊಂದಿರುವ ಮಾರ್ಕ್ಸ್ ಕಾರ್ಡ್
*3 ವರ್ಷದಿಂದ ವಾಸವಿರುವ ವಾಸಸ್ಥಳ ದೃಢೀಕರಣ ಪತ್ರ, ಇದನ್ನು ತಹಸೀಲ್ದಾರ್ ಅಥವಾ ಉಪ ತಹಸೀಲ್ದಾರ್ ಅವರಿಂದ ಪಡೆದಿರಬೇಕು.
*ಕ್ಯಾಸ್ಟ್ ಸರ್ಟಿಫಿಕೇಟ್
*ವಿಧವೆ ಆದರೆ, ಅವರ ಪ್ರಮಾಣ ಪತ್ರ ಹಾಗೂ ಗಂಡನ ಡೆತ್ ಸರ್ಟಿಫಿಕೇಟ್
*ಅಂಗವಿಕಲರಾದರೆ ಅದಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್
*ವಿಚ್ಛೇದನ ಪಡೆದಿದ್ದರೆ, ಅದರ ಸರ್ಟಿಫಿಕೇಟ್
*ದೇವದಾಸಿಯರು ಎಂದರೆ ಅದಕ್ಕೆ ಸಂಬಂಧಿಸಿದ ಪ್ರಮಾಣಪತ್ರ.
*ಸುಧಾರಣಾ ಸಂಸ್ಥೆಯಲ್ಲಿ ಮಿನಿಮಮ್ ಮೂರು ವರ್ಷ ಇರಬೇಕು.
*ನಿರಾಶ್ರಿತರಾದರೆ ತಹಸೀಲ್ದಾರ್ ಇಂದ ಪತ್ರ ಪಡೆದಿರಬೇಕು.
*ಆಧಾರ್ ಕಾರ್ಡ್/ವೋಟರ್ ಐಡಿ/ರೇಷನ್ ಕಾರ್ಡ್ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ದೃಢೀಕರಣ ಪತ್ರ ಇರಬೇಕು.
ಅರ್ಜಿ ಸಲ್ಲಿಕೆ ಪ್ರಕ್ರಿಯೆ;
*ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ನಿಮ್ಮ ಹತ್ತಿರದ ಕರ್ನಾಟಕ ಒನ್ ಕಛೇರಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಮೊದಲಿಗೆ ನೀವು https://karnemakaone.kar.nic.in/abcd/ApplicationForm_JA_org.aspx ಈ ಲಿಂಕ್ ಗೆ ಭೇಟಿ ನೀಡಿ.
*ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ/ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಈಗ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ.
*ಈಗ ಸೆಲೆಕ್ಟ್ ಪ್ರಾಜೆಕ್ಟ್ ಎನ್ನುವ ಆಪ್ಶನ್ ನಲ್ಲಿ ಪ್ರಾಜೆಕ್ಟ್ ಅನ್ನು ಸೆಲೆಕ್ಟ್ ಮಾಡಿ.
*ಈ ಹೊಸ ಪೇಜ್ ನಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ, ನಂತರ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ. ನಂತರ ಈ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ಮಾಡಿಸಿಕೊಳ್ಳಿ.
Applications invited for Anganwadi posts in these districts