ಗ್ರಾಮ ಒನ್ ಸೆಂಟರ್ ಪ್ರಾಂಚೈಸಿ ಪಡೆಯಿರಿ! ಕೈತುಂಬಾ ದುಡ್ಡು, ಒಳ್ಳೆಯ ಆದಾಯ - Karnataka Grama One Center
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಸೇವೆಗಳನ್ನು ಹಳ್ಳಿ ಮಟ್ಟದಲ್ಲೇ ಒದಗಿಸಲು ಗ್ರಾಮ ಒನ್ ಕೇಂದ್ರ ಆರಂಭಕ್ಕೆ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

- ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ
- ಹಳ್ಳಿಯಲ್ಲಿ ಸರಕಾರಿ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯುವ ಅವಕಾಶ
- ಅರ್ಹ ಅಭ್ಯರ್ಥಿಗಳಿಗೆ ಹೂಡಿಕೆ ಮತ್ತು ತಾಂತ್ರಿಕ ಸಾಮರ್ಥ್ಯ ಅಗತ್ಯ
Karnataka Grama One Center : ನಗರಕ್ಕೆ ಹೋಗದೆ ಹಳ್ಳಿಯಲ್ಲೇ ಸರ್ಕಾರದ ಎಲ್ಲಾ ಆನ್ಲೈನ್ ಸೇವೆಗಳು ಸಿಗುವ ವ್ಯವಸ್ಥೆ — ಇದೇ ‘ಗ್ರಾಮ ಒನ್’ ಕೇಂದ್ರದ ಉದ್ದೇಶ. ಕರ್ನಾಟಕ ಸರ್ಕಾರದ ಇ-ಆಡಳಿತ ವಿಭಾಗದಡಿ, ಗ್ರಾಮೀಣ ಜನತೆಗೆ ವಿವಿಧ ಸರಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸಲು ಈ ಯೋಜನೆ ಜಾರಿಯಲ್ಲಿದೆ.
ಆಸಕ್ತರು ಕನಿಷ್ಠ ಪಿಯುಸಿ II, ಡಿಪ್ಲೊಮಾ, ಐಟಿಐ ಅಥವಾ ಪದವಿ ಹೊಂದಿರಬೇಕು. ಜೊತೆಗೆ 1-2 ಲಕ್ಷ ರೂ. ಹೂಡಿಕೆ ಸಾಮರ್ಥ್ಯ, ಕಂಪ್ಯೂಟರ್ ಜ್ಞಾನ, ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಕಡ್ಡಾಯ. ಕೇಂದ್ರವನ್ನು ಸಾರ್ವಜನಿಕರು ಸುಲಭವಾಗಿ ತಲುಪುವ ಸ್ಥಳದಲ್ಲಿ ಸ್ಥಾಪಿಸುವುದು ಮುಖ್ಯ.
ಇದನ್ನೂ ಓದಿ: ಭೂ ರಹಿತ ರೈತರಿಗೆ, ಕೃಷಿ ಜಮೀನು ಖರೀದಿಗೆ ಶೇ.50% ಅಥವಾ 25 ಲಕ್ಷ ಸಬ್ಸಿಡಿ ಸಾಲ
ಈ ಕೇಂದ್ರಗಳಲ್ಲಿ ಜನರು ಬೆಳೆ ವಿಮೆ (Crop Insurance), ಆರೋಗ್ಯ ವಿಮೆ (Health Insurance), ವಾಹನ ವಿಮೆ (Vehicle Insurance), ರೇಷನ್ ಕಾರ್ಡ್ ತಿದ್ದುಪಡಿ (Ration Card), ಪಹಣಿ ಪಡೆದುಕೊಳ್ಳುವುದು, ವಂಶಾವಳಿ ಪ್ರಮಾಣ ಪತ್ರ ಸೇರಿದಂತೆ ಅನೇಕ ಸೇವೆಗಳನ್ನು ಪಡೆಯಬಹುದು. ಕಡಿಮೆ ಶುಲ್ಕದಲ್ಲಿ ಎಲ್ಲ ಸೇವೆಗಳು ಒಂದೇ ಸ್ಥಳದಲ್ಲಿ ಸಿಗುವುದು ಈ ಯೋಜನೆಯ ಪ್ರಮುಖ ಆಕರ್ಷಣೆ.
ಗ್ರಾಮ ಒನ್ ಕೇಂದ್ರ ಆರಂಭಿಸಲು ಲ್ಯಾಪ್ಟಾಪ್/ಡೆಸ್ಕ್ಟಾಪ್, ಪ್ರಿಂಟರ್, ಬಯೋಮೆಟ್ರಿಕ್ ಸಾಧನ, ವೆಬ್ ಕ್ಯಾಮೆರಾ ಮತ್ತು ಇಂಟರ್ನೆಟ್ ಸಂಪರ್ಕ ಅಗತ್ಯ.
ಇದನ್ನೂ ಓದಿ: 2025-26ರ ಸಾಲಿನ ಕುರಿ ಮತ್ತು ಮೇಕೆ ಸಾಕಾಣಿಕೆಗೆ ₹50,000 ಸಬ್ಸಿಡಿ ಸಾಲ! ಅರ್ಜಿ ಹಾಕಿ
ಆನ್ಲೈನ್ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ https://gramaone.karnataka.gov.in/ ಭೇಟಿ ನೀಡಬೇಕು. ಮೊಬೈಲ್ ನಂಬರ್, ಇಮೇಲ್ ವಿಳಾಸ, OTP ದೃಢೀಕರಣದ ನಂತರ ಅಗತ್ಯ ವಿವರಗಳು ಮತ್ತು ದಾಖಲೆಗಳನ್ನು ಸಲ್ಲಿಸಿ ಅರ್ಜಿಯನ್ನು ಪೂರ್ಣಗೊಳಿಸಬೇಕು.
ಈ ಯೋಜನೆ ಹಳ್ಳಿಯ ಜನರಿಗೆ ನಗರ ಪ್ರಯಾಣದ ಅವಶ್ಯಕತೆ ಕಡಿಮೆ ಮಾಡುವುದರೊಂದಿಗೆ, ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸುವಲ್ಲಿ ಸಹ ಸಹಕಾರಿ ಆಗಲಿದೆ.
Applications Open for Starting Grama One Centers in Karnataka




