ಭೂ ರಹಿತ ರೈತರಿಗೆ, ಕೃಷಿ ಜಮೀನು ಖರೀದಿಗೆ ಶೇ.50% ಅಥವಾ 25 ಲಕ್ಷ ಸಬ್ಸಿಡಿ ಸಾಲ - Karnataka Subsidy Loan
ಭೂ ರಹಿತ ಮಹಿಳಾ ಕೃಷಿಕರಿಗೆ 2025-26ರ ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಗೆ ಶೇ 50% ಸಹಾಯಧನ, ಉಳಿದ ಮೊತ್ತ ಕಡಿಮೆ ಬಡ್ಡಿದರ ಸಾಲ.

- ಭೂ ಒಡೆತನ ಯೋಜನೆ ಮೂಲಕ ಜಮೀನು ಖರೀದಿಗೆ ಶೇ 50% ಸಹಾಯಧನ
- ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ವಿಶೇಷ ಅವಕಾಶ
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 10 ಸೆಪ್ಟೆಂಬರ್ ಕೊನೆಯ ದಿನ
Karnataka Subsidy Loan : ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಿವಿಧ ನಿಗಮಗಳು 2025-26ನೇ ಸಾಲಿನಲ್ಲಿ ಭೂ ಒಡೆತನ ಯೋಜನೆ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಿವೆ.
ಈ ಯೋಜನೆ ಭೂ ರಹಿತ ಪರಿಶಿಷ್ಟ ಜಾತಿಯ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಗೆ (Buy Agriculture Land) 50% ಸಬ್ಸಿಡಿ ನೀಡುತ್ತದೆ. ಉಳಿದ ಮೊತ್ತವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ (Subsidy Loan) ರೂಪದಲ್ಲಿ ಒದಗಿಸಲಾಗುತ್ತದೆ.
ಇದನ್ನೂ ಓದಿ: 2025-26ರ ಸಾಲಿನ ಕುರಿ ಮತ್ತು ಮೇಕೆ ಸಾಕಾಣಿಕೆಗೆ ₹50,000 ಸಬ್ಸಿಡಿ ಸಾಲ! ಅರ್ಜಿ ಹಾಕಿ
ಈ ಯೋಜನೆಯಡಿ ಫಲಾನುಭವಿಗಳು ತಮ್ಮ ವಾಸಸ್ಥಳದಿಂದ ಗರಿಷ್ಠ 10 ಕಿಮೀ ವ್ಯಾಪ್ತಿಯಲ್ಲಿರುವ ಖುಷ್ಕಿ, ತರಿ ಅಥವಾ ಬಾಗಾಯ್ತು ಜಮೀನನ್ನು ಖರೀದಿಸಬಹುದು. ಸಾಲದ ಮೊತ್ತವನ್ನು 10 ವರ್ಷಗಳಲ್ಲಿ ವಾರ್ಷಿಕ 6% ಬಡ್ಡಿದರದಲ್ಲಿ ಹಿಂತಿರುಗಿಸಬೇಕಿದೆ.
ಸಬ್ಸಿಡಿ ವಿವರ
ಜಮೀನು ಖರೀದಿಗೆ ಒಟ್ಟು ಘಟಕ ವೆಚ್ಚ 20 ಲಕ್ಷ (27 ಜಿಲ್ಲೆಗಳಿಗೆ) ಅಥವಾ 25 ಲಕ್ಷ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ) ನಿಗದಿಯಾಗಿದೆ. ಇದರ ಅರ್ಧವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದ್ದು, ಉಳಿದ ಅರ್ಧಕ್ಕೆ 4% ಬಡ್ಡಿದರದಲ್ಲಿ ಸಾಲ ಲಭ್ಯ (Loan Facility).
ಇದನ್ನೂ ಓದಿ: ಪಿಯುಸಿ ಪಾಸಾದವರಿಗೆ ₹20 ಸಾವಿರ ಪ್ರೋತ್ಸಾಹ ಧನ! ಈ ಕೂಡಲೇ ಅರ್ಜಿ ಸಲ್ಲಿಸಿ
ಅರ್ಹತೆ
- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
- ಪರಿಶಿಷ್ಟ ಜಾತಿಯ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕೆಯಾಗಿರಬೇಕು
- ಹಿಂದಿನ ವರ್ಷಗಳಲ್ಲಿ ಈ ಯೋಜನೆಯ ಲಾಭ ಪಡೆದಿರಬಾರದು
- ಖರೀದಿಸುವ ಜಮೀನು SC/ST ಭೂ ಮಾಲೀಕರದಾಗಿರಬಾರದು
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಭೂ ರಹಿತ ಪ್ರಮಾಣಪತ್ರ (ತಹಶೀಲ್ದಾರರಿಂದ), ರೇಷನ್ ಕಾರ್ಡ್, ಜಮೀನು ಮಾರಾಟ ಮುಚ್ಚಳಿಕೆ ಪತ್ರ, ಇತ್ತೀಚಿನ ಪಹಣಿ/RTC, ಹಕ್ಕು ಬದಲಾವಣೆ ಪ್ರತಿ, 13 ವರ್ಷದ ಇಸಿಗೆ (EC), ಪಾಸ್‌ಬುಕ್ ಪ್ರತಿ, ಪೋಟೋ.
ಇದನ್ನೂ ಓದಿ: ಉಚಿತ ಬೋರ್‌ವೆಲ್, ಕೃಷಿ ಸಾಲ, ವ್ಯಾಪಾರ ಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ಲಿಂಕ್‌ಗೆ ಭೇಟಿ ನೀಡಿ: Bhu Odetana Yojana Apply Here
- “ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ಮೊಬೈಲ್ OTP ಮೂಲಕ ಲಾಗಿನ್ ಮಾಡಿ
- ಅಗತ್ಯ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ, Submit ಒತ್ತಿ
ಅರ್ಜಿಯ ಕೊನೆಯ ದಿನಾಂಕ: 10 ಸೆಪ್ಟೆಂಬರ್ 2025
Subsidy Loan for Land Purchase under Bhu Odetana Scheme




