ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ! ಅರ್ಜಿ ಸಲ್ಲಿಕೆಯ ವಿವರ
ಕರ್ನಾಟಕ ಸರ್ಕಾರ (Karnataka Government) ಹೊಸ ನ್ಯಾಯಬೆಲೆ ಅಂಗಡಿ ಮಂಜೂರಿಗೆ ಅರ್ಜಿ ಆಹ್ವಾನ, ಅರ್ಹ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ
- ನ್ಯಾಯಬೆಲೆ ಅಂಗಡಿಗೆ (Fair Price Shop) ಹೊಸ ಅನುಮತಿ
- ಅರ್ಜಿ ಸಲ್ಲಿಕೆಗೆ (Application Process) ಅವಶ್ಯವಿರುವ ದಾಖಲೆಗಳ ವಿವರ
- ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ
ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food & Civil Supplies) ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಅನುಮತಿ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಅಂಗಡಿಗಳ ಮೂಲಕ ಸಾರ್ವಜನಿಕರಿಗೆ ಅಕ್ಕಿ, ರಾಗಿ ಮತ್ತು ಇತರ ಅವಶ್ಯಕ ತಿಂಡಿಪದಾರ್ಥಗಳು ಕಡಿಮೆ ದರದಲ್ಲಿ ಲಭ್ಯವಾಗಲಿವೆ.
ಈಗಾಗಲೇ ದಾವಣಗೆರೆ ನಗರದ ಬೇತೂರು ರಸ್ತೆ ಹಾಗೂ ಅಜಾದ್ ನಗರ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳಿಗೆ (Ration Shop) ಅವಕಾಶ ನೀಡಲಾಗಿದ್ದು, ಅರ್ಹ ವ್ಯಕ್ತಿಗಳು ಅಥವಾ ಸಂಸ್ಥೆಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಗೃಹಲಕ್ಷ್ಮಿ ಯೋಜನೆ ಬದಲಾವಣೆ? ರಾಜ್ಯ ಸರ್ಕಾರದ ಹೊಸ ನಿರ್ಧಾರ
ಅರ್ಜಿ ಸಲ್ಲಿಸಲು ಕನಿಷ್ಠ 2 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್ (Bank Balance) ಹೊಂದಿರುವುದು ಅಗತ್ಯ. ವಿಶೇಷವಾಗಿ, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳಿಗೆ (Transgender) ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಲಾಗಿದೆ. ಅಲ್ಲದೇ, ಸಹಕಾರ ಸಂಘಗಳು, ಗ್ರಾಮ ಪಂಚಾಯತಿ, ಸರ್ಕಾರಿ ನಿಗಮಗಳು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಅನೇಕ ಅರ್ಹ ಸಂಸ್ಥೆಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು ‘ಎ’ ನಮೂನೆಯಲ್ಲಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ 30 ದಿನದೊಳಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಅಂಗಡಿ ಮಂಜೂರಾದ ಬಳಿಕ, ನಿಯಮಾನುಸಾರ ನವೀಕರಣ ಪ್ರಕ್ರಿಯೆ ಪಾಲಿಸಬೇಕಾಗುತ್ತದೆ.
ಬಿಪಿಎಲ್ ಪಡಿತರ ಚೀಟಿದಾರರಿಗೆ ಹೊಸ ಮಾರ್ಗಸೂಚಿ: ಸರ್ಕಾರದ ಮಹತ್ವದ ನಿರ್ಧಾರ
ಲೈಸೆನ್ಸ್ ನವೀಕರಣವನ್ನು ಪ್ರತಿ ವರ್ಷದ ಡಿಸೆಂಬರ್ 31ರೊಳಗೆ ಮಾಡಿಸಬೇಕು. ವಿಳಂಬವಾದರೆ, ದಂಡ ಸಹಿತ ₹500 ಪಾವತಿಸಿ ಮರುಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಜನವರಿ 31ರ ನಂತರ ನವೀಕರಣಕ್ಕೆ ಅವಕಾಶವಿರುವುದಿಲ್ಲ.
Apply Now for New Fair Price Shops in Karnataka
Our Whatsapp Channel is Live Now 👇