ನೀವೇ ಗ್ರಾಮ ಒನ್ ಕೆಂದ್ರಗಳ ಫ್ರಾಂಚೈಸಿ ಆರಂಭಿಸಿ! ಇಲ್ಲಿದೆ ಅರ್ಜಿ ಸಲ್ಲಿಕೆ ಮಾಹಿತಿ

ಇ-ಆಡಳಿತ ಇಲಾಖೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಸ್ಥಾಪನೆಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಫ್ರಾಂಚೈಸಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಗ್ರಾಮ ಪಂಚಾಯಿತಿಗಳಲ್ಲಿ ಈ ಅವಕಾಶ.

  • ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಅವಕಾಶ
  • ಅರ್ಜಿ ಸಲ್ಲಿಕೆ ಆನ್‌ಲೈನ್‌ ಮೂಲಕ ಮಾತ್ರ
  • ಸರ್ಕಾರಿ ಸೇವೆಗಳ ನಾಗರಿಕ ಸ್ನೇಹಿ ಪ್ರಾಪ್ತಿ ಉದ್ದೇಶ

ಬೆಂಗಳೂರು (Bengaluru): ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಮಹತ್ವದ ಯೋಜನೆಯಾದ “ಗ್ರಾಮ ಒನ್” (Grama One) ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಇ-ಆಡಳಿತ ಇಲಾಖೆ ಹೆಜ್ಜೆ ಹಾಕಿದ್ದು, ಫ್ರಾಂಚೈಸಿ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ಮೂಲಕ ಗ್ರಾಮಸ್ಥರಿಗೆ ಬೇರೆಡೆಗೆ ಹೋಗದೆ ತಮ್ಮ ಗ್ರಾಮದಲ್ಲಿಯೇ ಸರ್ಕಾರದ (government services) ಅನೇಕ ಸೇವೆಗಳನ್ನು ಲಭ್ಯವಾಗಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆ, ಶಾಲೆಗಳಿಗೆ ರಜೆ ಘೋಷಣೆ!

ಅರ್ಜಿಗಳು ಆನ್‌ಲೈನ್ (online) ಮೂಲಕ ಮಾತ್ರ ಸಲ್ಲಿಸಬಹುದಾಗಿದ್ದು, ಯಾವುದೇ ಇತರ ಮಾಧ್ಯಮಗಳಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ಇಲಾಖೆ ಸ್ಪಷ್ಟಪಡಿಸಿದೆ.

ಆಸಕ್ತ ಅಭ್ಯರ್ಥಿಗಳು Seva Sindhu ಪೋರ್ಟಲ್ (sevasindhu.karnataka.gov.in) ಅಥವಾ (Karnataka One ವೆಬ್‌ಸೈಟ್) (karnatakaone.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ gramaonedesk.cms@gmail.com ಈ-ಮೇಲ್‌ಗೆ ಸಂಪರ್ಕಿಸಬಹುದಾಗಿದೆ.

ಈ ಫ್ರಾಂಚೈಸಿ ಅವಕಾಶವು ಶಿವಮೊಗ್ಗ, ವಿಜಯಪುರ, ಬೆಂಗಳೂರು ನಗರ, ತುಮಕೂರು, ಧಾರವಾಡ, ಗದಗ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆಲ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಲಭ್ಯವಿದೆ.

ಇದನ್ನೂ ಓದಿ: ಬೆಂಗಳೂರು ಸರ್ಕಾರಿ ಸೈಟುಗಳ ಹರಾಜು! ಕಮ್ಮಿ ಬೆಲೆಗೆ ನಿವೇಶನ ಖರೀದಿಸುವ ಅವಕಾಶ

Gram One Center in your district

ಇದನ್ನೂ ಓದಿ: ಅನುಮತಿ ಇಲ್ಲದೆ ಕಟ್ಟಡ, ಮನೆ ಕಟ್ಟುವವರಿಗೆ ಕಾನೂನು ಸಂಕಷ್ಟ: ಡಿ.ಕೆ.ಶಿವಕುಮಾರ್

ಗ್ರಾಮ ಒನ್ ಕೇಂದ್ರಗಳ ಉದ್ದೇಶ ಸಾರ್ವಜನಿಕರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸುವುದಾಗಿದೆ. ಒಂದು ಮಧ್ಯಮದ್ವಾರ (single interface) ಮೂಲಕ ಸರ್ಕಾರ ಹಾಗೂ ಖಾಸಗಿ ಕ್ಷೇತ್ರದ ಸೇವೆಗಳನ್ನು ಸಮಗ್ರವಾಗಿ ಒದಗಿಸುವ ಈ ಯತ್ನ, ಗ್ರಾಮೀಣ ತಂತ್ರಜ್ಞಾನ ಸೇವಾ ವಿತರಣೆಯಲ್ಲಿ ನವೀನ ಹೆಜ್ಜೆಯಾಗಿದೆ.

ಈ ಯೋಜನೆಯ ಹಿಂದಿರುವ “ಕರ್ನಾಟಕ ಒನ್” ಕನಸೆಂದರೆ, ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದಲೂ ಬಹುಸೇವೆಗಳ ಲಾಭ ದೊರೆಯುವಂತಾಗಬೇಕು ಎಂಬುದು. ಸರ್ಕಾರದ ಜತೆಗೆ ಕೆಲ ಖಾಸಗಿ ಕಂಪನಿಗಳ ಸೇವೆಯನ್ನೂ ಸೇರಿಸಿ, ನಾಗರಿಕ ಸ್ನೇಹಿ ಅನುಭವವನ್ನು ಒದಗಿಸುವ ಗುರಿ ಇದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿಗಳಲ್ಲಿ ಇನ್ಮುಂದೆ ಇ-ಖಾತೆ ಕಡ್ಡಾಯ ಘೋಷಣೆ! ಬಿಗ್ ಅಪ್ಡೇಟ್

ಈ ಸೇವಾ ಕೇಂದ್ರಗಳು ಈಗಾಗಲೇ ಮೈಸೂರು, ಹುಬ್ಬಳ್ಳಿ-ಧಾರವಾಡ, ಉಡುಪಿ, ಬಾಗಲಕೋಟೆ, ಮಂಗಳೂರು, ಬೀದರ್, ಹಾಸನ, ಮಂಡ್ಯ, ಕಾರವಾರ, ಯಾದಗಿರಿ ಸೇರಿದಂತೆ 25ಕ್ಕೂ ಹೆಚ್ಚು ನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸೇವೆಗಳು Karnataka One ಪೋರ್ಟಲ್ ಮೂಲಕ ಆನ್‌ಲೈನ್ ಪಾವತಿಗಳನ್ನು (online payments) ಸುಲಭಗೊಳಿಸುತ್ತವೆ.

ಸೂಚನೆ: ಅರ್ಜಿ ಸಲ್ಲಿಕೆಗೆ ನಿಮ್ಮ ಜಿಲ್ಲೆಯಲ್ಲಿ ಅಥವಾ ನಿಮ್ಮ ಸ್ಥಳದಲ್ಲಿ ಫ್ರಾಂಚೈಸಿ ಆರಂಭಕ್ಕೆ ಅವಕಾಶ ಇದಿಯಾ ಎಂಬುದನ್ನು ಪರಿಶೀಲಿಸಿ, ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ಅವಕಾಶವಿದೆ

Apply Now, Grama One Franchise Centers Across Karnataka Villages

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories