Student Bus Pass : ನಮ್ಮ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ, ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಆರ್ಥಿಕವಾಗಿ ಹೊರೆ ಆಗದೇ ಇರಲಿ ಎನ್ನುವ ಕಾರಣಕ್ಕೆ ಸರ್ಕಾರವು ಸಬ್ಸಿಡಿ ಬಸ್ ಪಾಸ್ ಗಳನ್ನು (Bus Pass) ವಿತರಿಸುತ್ತದೆ.
ಇದಕ್ಕಾಗಿ ಪ್ರತಿ ವರ್ಷವೂ ಅರ್ಜಿ ಆಹ್ವಾನ ನೀಡಲಾಗುತ್ತದೆ. ಅದೇ ರೀತಿ ಈ ವರ್ಷ ಸಹ ಇತ್ತೀಚೆಗೆ ಶಾಲಾ ಕಾಲೇಜುಗಳು (Schools and College) ಶುರುವಾಗಿದ್ದು, ಈಗಷ್ಟೇ ಬಸ್ ಪಾಸ್ ಗಾಗಿ ಅರ್ಜಿ ಸಲ್ಲಿಕೆ ಶುರುವಾಗಿದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳ ಹಣಕ್ಕೆ ಈ ಕೆಲಸ ಮಾಡುವುದು ಕಡ್ಡಾಯ
ರಾಜ್ಯದ ವಿದ್ಯಾರ್ಥಿಗಳು ಉಚಿತ ಹಾಗೂ ಸಬ್ಸಿಡಿ ಪಾಸ್ ಗಳನ್ನು ಪಡೆಯಲು ಅಪ್ಲಿಕೇಶನ್ ಓಪನ್ ಆಗಿದ್ದು, ಎಲ್ಲಾ ವಿದ್ಯಾರ್ಥಿಗಳು ಹಾಗೂ ಅರ್ಹತೆ ಹೊಂದಿರುವವರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದು.
ಮೊದಲಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಅರ್ಥಿಕವಾಗಿ ಹೊರೆ ಇರದಂಥ ಶಾಲೆಗೆ ಹೋಗುತ್ತಿರಬೇಕು ಹಾಗೆಯೇ SC/ST ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ (Free Bus Pass), ಬೇರೆ ವಿದ್ಯಾರ್ಥಿಗಳಿಗೆ ಸಬ್ಸಿಡಿ ದರದಲ್ಲಿ ಬಸ್ ಪಾಸ್ ಹಾಗೆಯೇ ಮಹಿಳಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸಿಗುತ್ತದೆ.
*ಪ್ರೈಮರಿ ಸ್ಕೂಲ್ ಮಕ್ಕಳ ಬಸ್ ಪಾಸ್ ದರ 150 ರೂಪಾಯಿಗಳು
*ಹೈಸ್ಕೂಲ್ ವಿದ್ಯಾರ್ಥಿಗಳ ಬಸ್ ಪಾಸ್ ದರ 750 ರೂಪಾಯಿಗಳು
*SC/ST ವಿದ್ಯಾರ್ಥಿಗಳ ಬಸ್ ಪಾಸ್ ದರ 150 ರೂಪಾಯಿಗಳು
*ITI/Diploma ವಿದ್ಯಾರ್ಥಿಗಳ ಬಸ್ ಪಾಸ್ ದರ 1310 ರೂಪಾಯಿಗಳು
*ITI/Diploma ಓದುತ್ತಿರುವ SC/ST ವಿದ್ಯಾರ್ಥಿಗಳ ಬಸ್ ಪಾಸ್ ದರ 160 ರೂಪಾಯಿಗಳು
*ಇತರೆ ವೃತ್ತಿಪರ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸ್ ದರ 1550 ರೂಪಾಯಿಗಳು
*ಇತರೆ ವೃತ್ತಿಪರ ಕೋರ್ಸ್ ಮಾಡುತ್ತಿರುವ SC/ST ವಿದ್ಯಾರ್ಥಿಗಳ ಬಸ್ ಪಾಸ್ ದರ 150 ರೂಪಾಯಿ ಆಗಿದೆ.
ಇಂತಹವರ ರೇಷನ್ ಕಾರ್ಡ್ ರದ್ದು! ರಾತ್ರೋ-ರಾತ್ರಿ ಸರ್ಕಾರ ಖಡಕ್ ನಿರ್ಧಾರ; ಇಲ್ಲಿದೆ ಮಾಹಿತಿ
*ಆಧಾರ್ ಕಾರ್ಡ್
*ಫೋನ್ ನಂಬರ್
*ಶಾಲಾ/ಕಾಲೇಜಿನ ಅಡ್ಮಿಷನ್ ರೆಸಿಪ್ಟ್
*ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಹಿಂದಿನ ಸಾಲಿನ ಮಾರ್ಕ್ಸ್ ಕಾರ್ಡ್
*ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿ ಅರ್ಜಿ ಸಲ್ಲಿಸಲು ಈ ಎಲ್ಲಾ ದಾಖಲೆಗಳು ಬೇಕಾಗುತ್ತದೆ.
*ಮೊದಲಿಗೆ ಸರ್ಕಾರದ ಸೇವಾಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು. ಈ ಲಿಂಕ್ ಕ್ಲಿಕ್ ಮಾಡಿ https://sevasindhuservices.karnataka.gov.in/
*ಫೋನ್ ನಂಬರ್ ಇಂದ ಅಕೌಂಟ್ ಹಾಗೂ ಪಾಸ್ ವರ್ಡ್ ಕ್ರಿಯೆಟ್ ಮಾಡಿ. ನಂತರ ರಿಜಿಸ್ಟರ್ ಆಗಿರುವ ಫೋನ್ ನಂಬರ್ ಇಂದ ಲಾಗಿನ್ ಆಗಿ.
*ಈಗ ಮೆನು ನಲ್ಲಿ ಸೇವೆಗಳನ್ನು ಅನ್ವಯಿಸು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
*ಈಗ KSRTC ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಆ ಲಿಂಕ್ ಕ್ಲಿಕ್ ಮಾಡಿ.
*ಅಪ್ಲಿಕೇಶನ್ ಫಾರ್ಮ್ ಓಪನ್ ಮಾಡಿ, Continue ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ ಜೊತೆಗೆ ಬೇಕಿರುವ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ.
*ಈಗ ಅಪ್ಲಿಕೇಶನ್ ಪ್ರಿಂಟೌಟ್ ಪಡೆಯಿರಿ..
ವಿದ್ಯಾರ್ಥಿ ಅರ್ಜಿ ಸಲ್ಲಿಸಿದ ಒಂದು ಅಥವಾ ಎರಡು ದಿನಗಳ ಒಳಗೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಿಗುತ್ತದೆ. ತಮಗೆ ಹತ್ತಿರ ಇರುವ ಪಾಸ್ ವಿತರಣಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಶಾಲಾ ಕಾಲೇಜುಗಳಲ್ಲಿ ಕೂಡ ಬಸ್ ಪಾಸ್ ವಿತರಣೆ ಮಾಡಲಾಗುತ್ತದೆ, ಅಲ್ಲಿ ಕೂಡ ಪಡೆದುಕೊಳ್ಳಬಹುದು.
Apply on mobile to get free bus pass, Here is the information