ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳ ಹಣಕ್ಕೆ ಈ ಕೆಲಸ ಮಾಡುವುದು ಕಡ್ಡಾಯ

ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಉಚಿತ ಹಣ ಪಡೆಯಲು, ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಿ!

ನಮ್ಮ ರಾಜ್ಯ ಸರ್ಕಾರವು ಕರ್ನಾಟಕದ ಎಲ್ಲಾ ಜನರಿಗೆ ಅನುಕೂಲ ಆಗುವ ಹಾಗೆ 5 ಯೋಜನೆಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆ (Shakti Scheme), ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆ.

ಈ ಯೋಜನೆಗಳ ಮೂಲಕ ಈಗಾಗಲೇ ರಾಜ್ಯದ ಎಲ್ಲಾ ಮಹಿಳೆಯರು ಹಾಗೂ ಕುಟುಂಬಗಳು ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಉಚಿತವಾಗಿ ಪಡೆಯಿರಿ ಸೋಲಾರ್ ಪಂಪ್ ಸೆಟ್! ರೈತರಿಗೆ ಬಂಪರ್ ಅವಕಾಶ; ಅರ್ಜಿ ಸಲ್ಲಿಸಿ

Kannada News

ಈ ಕೆಲಸ ಕಡ್ಡಾಯವಾಗಿ ಮಾಡಿ!

ಗೃಹಲಕ್ಷ್ಮಿ ಯೋಜನೆ ಆಗಲಿ, ಅನ್ನಭಾಗ್ಯ ಯೋಜನೆ ಆಗಲಿ ಈ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಹಣ ಸಿಗುತ್ತಿದೆ. ಅರ್ಜಿ ಹಾಕಿದ ಎಲ್ಲರಿಗು ಸಹ ಈ ಯೋಜನೆಯಿಂದ ಸಿಗಬೇಕಾದ ಹಣ ಸಿಗುತ್ತಿಲ್ಲ. ಅದಕ್ಕೆ ಕಾರಣಗಳು ಸಾಕಷ್ಟಿರಬಹುದು.

ಒಂದು ವೇಳೆ ನಿಮಗೆ ಇನ್ನು ಕೂಡ ಈ ಯೋಜನೆಗಳ ಹಣ ಸರಿಯಾಗಿ ಬರುತ್ತಿಲ್ಲ ಎಂದರೆ ಮೊದಲನೆಯದಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ಯಾ ಎಂದು ನೀವು ಚೆಕ್ ಮಾಡಿಕೊಳ್ಳುವುದು ಬಹಳ ಮುಖ್ಯ ಆಗುತ್ತದೆ.

ಹಾಗೆಯೇ ಈ ಯೋಜನೆಗಳ ಹಣವನ್ನು ಪಡೆಯಲು ಸರ್ಕಾರ ಹೇಳಿರುವ ಒಂದು ಪ್ರಮುಖವಾದ ಕೆಲಸವನ್ನು ನೀವು ತಪ್ಪದೇ ಮಾಡಬೇಕಾಗುತ್ತದೆ. ಆ ಒಂದು ಕೆಲಸವನ್ನು ಮಾಡಿಲ್ಲ ಎಂದರೆ, ನಿಮಗೆ ಹಣ ಬರದೆಯೇ ಹೋಗಬಹುದು ಅಥವಾ ಸರ್ಕಾರದ ಹಣ ಬರುವುದಕ್ಕೆ ಸಮಸ್ಯೆ ಕೂಡ ಆಗಬಹುದು. ಹಾಗಾಗಿ ಈ ಒಂದು ಕೆಲಸವನ್ನು ನೀವು ಮಾಡಲೇಬೇಕಾಗುತ್ತದೆ. ಹಾಗಿದ್ದಲ್ಲಿ ಆ ಒಂದು ಕೆಲಸ ಯಾವುದು ಎಂದು ತಿಳಿದುಕೊಳ್ಳೋಣ..

ಇಂತಹವರ ರೇಷನ್ ಕಾರ್ಡ್ ರದ್ದು! ರಾತ್ರೋ-ರಾತ್ರಿ ಸರ್ಕಾರ ಖಡಕ್ ನಿರ್ಧಾರ; ಇಲ್ಲಿದೆ ಮಾಹಿತಿ

ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿ

Aadhaar Cardಸರ್ಕಾರದಿಂದ ಬಂದಿರುವ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು, ಅದರಿಂದ ಬರುವ ಹಣ ಪಡೆಯಲು ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಆಗಿರಬೇಕು. ಆಧಾರ್ ಕಾರ್ಡ್ ನಿಯಂತ್ರಣವು ಕೇಂದ್ರ ಸರ್ಕಾರದ್ದಾಗಿದ್ದು, ಕಳೆದ 10 ವರ್ಷಗಳಿಂದ ಯಾರೆಲ್ಲಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲವೋ ಅವರೆಲ್ಲರೂ ಸಹ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ತಿಳಿಸಿತ್ತು.

ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಎಲ್ಲರೂ ಆಧಾರ್ ಕಾರ್ಡ್ (Aadhaar Card) ಅಪ್ಡೇಟ್ ಮಾಡಿಸುವುದು ಕಡ್ಡಾಯ ಆಗಿದೆ. ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು 2024ರ ಜೂನ್ 14 ಕೊನೆಯ ದಿನಾಂಕ.

ಮೊಬೈಲ್ ಇಂದಲೇ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿ

Aadhaar Card Updateಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ನೀವು ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಸುಲಭವಾಗಿ ನಿಮ್ಮ ಮೊಬೈಲ್ ಫೋನ್ ಮೂಲಕವೇ ಅಪ್ಡೇಟ್ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ಸ್ಟೆಪ್ ಬೈ ಸ್ಟೆಪ್ ತಿಳಿದುಕೊಳ್ಳೋಣ..

ಸ್ಟೆಪ್ 1 :- ಮೊದಲಿಗೆ ಈ ಅಧಿಕೃತ ಲಿಂಕ್ ಓಪನ್ ಮಾಡಿ
https://myaadhaar.uidai.gov.in/verifyAadhaar

ಸ್ಟೆಪ್ 2 :- ಇಲ್ಲಿ ಕಾಣುವ Login ಮೇಲೆ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿ, ಕ್ಯಾಪ್ಚ ಕೋಡ್ ಹಾಕಿ, ಓಟಿಪಿ ಪಡೆದು ಲಾಗಿನ್ ಮಾಡಿ.

ಸ್ಟೆಪ್ 3 :- ನಂತರ Document Update ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಬಳಿಕ Next ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಸ್ಟೆಪ್ 4 :- ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಬಗ್ಗೆ ಇರುವ ಎಲ್ಲಾ ಮಾಹಿತಿಗಳು ಅಂದರೆ ಹೆಸರು, ಅಡ್ರೆಸ್, ಹುಟ್ಟಿದ ದಿನಾಂಕ ವರ್ಷ ಎಲ್ಲವೂ ಸರಿ ಇದೆಯಾ ಎಂದು ಚೆಕ್ ಮಾಡಿ. ಎಲ್ಲವೂ ಸರಿ ಇದ್ದರೆ, I verify above details are correct ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, Next ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಸ್ಟೆಪ್ 5 :- ಈ ಎಲ್ಲಾ ಸ್ಟೆಪ್ ಗಳು ಮುಗಿದ ಬಳಿಕ ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ. Next ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ, ಬಳಿಕ Submit ಆಪ್ಶನ್ ಸೆಲೆಕ್ಟ್ ಮಾಡಿ.

ಅಗತ್ಯವಿರುವ ದಾಖಲೆಗಳು

*ಫೋನ್ ನಂಬರ್
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್ / ಗ್ಯಾಸ್ ಸಿಲಿಂಡರ್ ಬಿಲ್
*ಐಡೆಂಟಿಟಿ ಕಾರ್ಡ್ / ರೇಷನ್ ಕಾರ್ಡ್

1947 ಈ ನಂಬರ್ ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು

Update Aadhaar Card to Get the money of all Govt schemes

Follow us On

FaceBook Google News