ಹಳ್ಳಿಗಳಲ್ಲಿ ಪ್ರಮುಖ ಆದಾಯದ ಮೂಲ ಕೃಷಿ (Agriculture) ಆಗಿದೆ. ಅಲ್ಲಿರುವ ಹೆಚ್ಚಿನ ಜನರು ಕೃಷಿ ಕೆಲಸವನ್ನೇ ಅವಲಂಬಿಸಿ ಇರುತ್ತಾರೆ. ಕೆಲವು ರೈತರ ಬಳಿ ತಮ್ಮದೇ ಆದ ಸ್ವಂತ ಜಮೀನು ಇರುತ್ತದೆ. ಆದರೆ ಇನ್ನೂ ಕೆಲವು ರೈತರು ತಮ್ಮ ಬಳಿ ಜಮೀನು ಇಲ್ಲದ ಕಾರಣ, ಹೆಚ್ಚು ಜಮೀನು ಹೊಂದಿರುವವರ ಬಳಿ ಕೆಲಸ ಮಾಡುತ್ತಾ ಇರುತ್ತಾರೆ. ಇದು ಸಾಮಾನ್ಯವಾಗಿ ನಾವು ನೋಡುವಂಥ ವಿಚಾರ ಆಗಿದೆ. ಆದರೆ ಕೆಲವು ಕಡೆ ಜಮೀನಿಗೆ ಹೋಗುವ ದಾರಿಯ ವಿಷಯದಲ್ಲಿ ಸಮಸ್ಯೆ ಆಗಿರುತ್ತದೆ.
ಕೆಲವು ಸಾರಿ ಒಂದು ಜಮೀನಿಗೆ ಹೋಗುವುದಕ್ಕೆ, ಪಕ್ಕದ ಜಮೀನಿನವರು ಜಾಗ ಕೊಡುವುದಿಲ್ಲ. ಇದಕ್ಕೆ ಕಾರಣ ವೈಯಕ್ತಿಕ ದ್ವೇಷ, ಜಗಳ ಇನ್ನೇನೇ ಇರಬಹುದು. ಆದರೆ ಈ ರೀತಿ ಮಾಡುವುದು ಒಬ್ಬ ರೈತನಿಗೆ ಮಾಡುವ ಅನ್ಯಾಯ ಆಗಿದ್ದು, ಒಂದು ವೇಳೆ ಹೀಗೆ ಮಾಡುವುದಾದರೆ ನೀವು ಕಾನೂನಿನ ಮೊರೆ ಹೋಗಿ ನಿಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಇದಕ್ಕಾಗಿ ಕಾನೂನು ಕೂಡ ಇದೆ.
ಹೌದು, ಇದು ಪ್ರಮುಖವಾದ ವಿಷಯ ಆಗಿದ್ದು, ಒಂದರ ಹಿಂದೆ ಒಂದು ಜಮೀನು ಇರುವಾಗ, ಮುಂಭಾಗದಲ್ಲಿ ಜಮೀನು ಹೊಂದಿರುವ ರೈತರು ಹಿಂಭಾಗದಲ್ಲಿ ಇರುವ ಜಮೀನಿಗೆ ದಾರಿ ಬಿಟ್ಟಿಕೊಡಬೇಕು. ರೈತರು ತಮ್ಮ ಜಮೀನಿಗೆ ಓಡಾಡುವುದಕ್ಕೆ, ಕೃಷಿಗೆ ಸಂಬಂಧಿಸಿದ, ಉಪಕರಣಗಳನ್ನು ಸಾಗಿಸುವುದಕ್ಕೆ ರೈತರಿಗೆ ಜಾಗ ಕೊಡಬೇಕಾಗುತ್ತದೆ. ಇದು ಭಾರತದ ಕಾನೂನಿನಲ್ಲೇ ಇದ್ದು, ಒಂದು ವೇಳೆ ರೈತರಿಗೆ ಬೇಕೆಂದೇ ಈ ರೀತಿ ಮಾಡುತ್ತಿದ್ದರೆ, ಅವರು ಪೊಲೀಸರ ಬಳಿ ದೂರು ಕೊಡಬಹುದು..
ಹಾಗೆಯೇ ಒಂದು ವೇಳೆ ನಿಮ್ಮ ಜಮೀನಿಗೆ ಹೋಗುವುದಕ್ಕೆ ದಾರಿ ಇದ್ದು, ಆ ದಾರಿ ಮುಚ್ಚಿ ಹೋಗಿದೆ ಎನ್ನುವುದಾದರೆ, ಅದನ್ನು ಕೂಡ ನೀವು ಸರಿಪಡಿಸಿಕೊಳ್ಳಬಹುದು. ಕಾನೂನಿನ ಮೊರೆ ಹೋಗಿ, ನಿಮ್ಮ ಜಮೀನಿಗೆ ಬರುವುದಕ್ಕೆ ದಾರಿ ಇತ್ತು ಎನ್ನುವ ವಿಷಯ ತಿಳಿಸಿ, ಸರಿಪಡಿಸಿಕೊಳ್ಳಬಹುದು. ರೈತರಿಗೆ ಸಹಾಯ ಆಗಬೇಕು, ಅವರಿಗೆ ವ್ಯವಸಾಯ ಮಾಡುವುದಕ್ಕೆ ಯಾವುದೇ ಸಮಸ್ಯೆ ಬರಬಾರದು ಎನ್ನುವ ಕಾರಣಕ್ಕೆ ಸರ್ಕಾರವು ಈ ಥರದ ಕಾನೂನುಗಳನ್ನು ಜಾರಿಗೆ ತಂದಿದೆ..
ಒಂದು ವೇಳೆ ನಿಮ್ಮ ಜಮೀನಿಗೆ ಹೋಗುವುದಕ್ಕೆ ದಾರಿ ಬಿಡದೇ, ಪಕ್ಕದ ಜಮೀನಿನವರು ತೊಂದರೆ ಕೊಡುತ್ತಿದ್ದರೆ, ರೈತರು ಹಿಂದೂ ಮುಂದು ಯೋಚಿಸದೇ, ಪಕ್ಕದ ರೈತರ ಮೇಲೆ ದೂರು ಕೊಡಬಹುದು. ಟೆನೆನ್ಸಿ ಆಕ್ಟ್ ಸೆಕ್ಷನ್ 251ರಲ್ಲಿ ಕೇಸ್ ತೆಗೆದುಕೊಳ್ಳಲಾಗುತ್ತದೆ. ಈ ರೀತಿಯಲ್ಲಿ ನಿಮ್ಮ ವ್ಯವಸಾಯ ಭೂಮಿಗೆ ಹೋಗುವುದಕ್ಕೆ ದಾರಿ ನಿರ್ಮಿಸಿ ಕೊಡುವುದಕ್ಕೆ ಸರ್ಕಾರ್ಸ್ ಸಹಾಯ ಮಾಡುತ್ತದೆ. ಎಲ್ಲಾ ರೈತರಿಗೂ ಈ ವಿಷಯ ತಲುಪಿದರೆ, ಅವರಿಗೆಲ್ಲಾ ಸಹಾಯ ಆಗುತ್ತದೆ.
Are the neighboring farmers not giving way to your Agriculture farm
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.