Bengaluru News

ಬೆಂಗಳೂರು ಸುತ್ತ-ಮುತ್ತ ಬೋರ್‌ವೆಲ್‌ ಕೊರೆಸುವುದು ನಿಷೇಧ! ಉಲ್ಲಂಘನೆಗೆ ಕಠಿಣ ಕ್ರಮ

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದರಿಂದ ಬೋರ್‌ವೆಲ್‌ ಕೊರೆಸುವುದರ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.

  • ಬೋರ್‌ವೆಲ್ ಕೊರೆಸಲು ಅನುಮತಿ ಇಲ್ಲ, ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ
  • ನೀರಿನ ದುರ್ಬಳಕೆ ಮಾಡಿದರೆ ₹5,000 ದಂಡ, ಈಗಾಗಲೇ ₹5.60 ಲಕ್ಷ ವಸೂಲಿ
  • ನೀರಿನ ಕೊರತೆಯಿಂದ 80 ವಾರ್ಡ್‌ಗಳು ಗಂಭೀರ ಸ್ಥಿತಿಯಲ್ಲಿ – IISc ವರದಿ

ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಬೇಸಿಗೆ ಪ್ರಾರಂಭಕ್ಕೂ ಮುನ್ನವೇ ನೀರಿನ ಕೊರತೆ ತೀವ್ರವಾಗಿ ಕಂಡುಬರುತ್ತಿದೆ. ಅಂತರ್ಜಲ ಮಟ್ಟ ಮೂರು ವರ್ಷಗಳಿಂದ ನಿರಂತರ ಕುಸಿಯುತ್ತಾ ಬಂದಿರುವುದರಿಂದ, ಬೋರ್‌ವೆಲ್ (Borewell) ಕೊರೆಯುವ ಹೊಸ ಅರ್ಜಿಗಳನ್ನುBWSSB (Bangalore Water Supply and Sewerage Board) ತಾತ್ಕಾಲಿಕವಾಗಿ ನಿಲ್ಲಿಸಿದೆ.

ಈ ನಿಷೇಧ 2025ರ ಬೇಸಿಗೆ ಮುಗಿಯುವವರೆಗೂ ಮುಂದುವರಿಯಲಿದೆ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.

ಬೆಂಗಳೂರು ಸುತ್ತ-ಮುತ್ತ ಬೋರ್‌ವೆಲ್‌ ಕೊರೆಸುವುದು ನಿಷೇಧ! ಉಲ್ಲಂಘನೆಗೆ ಕಠಿಣ ಕ್ರಮ

80 ವಾರ್ಡ್‌ಗಳಿಗೆ ಗಂಭೀರ ನೀರಿನ ಕೊರತೆ!

IISc (Indian Institute of Science) ಸಂಶೋಧನೆಯ ಪ್ರಕಾರ, ಬೆಂಗಳೂರು ನಗರ ವ್ಯಾಪ್ತಿಯ 80 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದರಿಂದ, ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು ಅವಕಾಶ ನೀಡುವುದಿಲ್ಲ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಹೇಳಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 28,608 ಕೋಟಿ ಹಣ ಬಿಡುಗಡೆ! ಇಲ್ಲಿದೆ ಪಕ್ಕಾ ಮಾಹಿತಿ

Borewell Banned

ಬೋರ್‌ವೆಲ್‌ಗಾಗಿ ಹೊಸ ಅರ್ಜಿ ಸ್ವೀಕಾರ ಇಲ್ಲ

ಪ್ರತಿ ತಿಂಗಳು 200-300 ಜನರು ಹೊಸ ಬೋರ್‌ವೆಲ್‌ಗಾಗಿ (borewell Application) ಅರ್ಜಿ ಸಲ್ಲಿಸುತ್ತಿದ್ದರು, ಆದರೆ ಬೇಸಿಗೆಯಲ್ಲಿ ಈ ಸಂಖ್ಯೆ 1,000 ದಾಟುತ್ತದೆ. 2024ರಲ್ಲಿ 2,835 ಅರ್ಜಿಗಳು ಬಂದಿದ್ದು, ಬೇಸಿಗೆಯಲ್ಲೇ 1,634 ಅರ್ಜಿಗಳು ಬಂದಿವೆ. ಈ ವರ್ಷ ಈಗಾಗಲೇ 600 ಹೊಸ ಬೋರ್‌ವೆಲ್ ಅರ್ಜಿಗಳು ಬಂದಿವೆ, ಆದರೆ ಇದರಲ್ಲಿ ಕೇವಲ 30ಕ್ಕಷ್ಟೇ ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಬಿಪಿಎಲ್ ಕಾರ್ಡ್ ಇದ್ದೋರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು!

ನೀರಿನ ದುರ್ಬಳಕೆ ಮಾಡಿದರೆ ₹5,000 ದಂಡ!

ಜಲಮಂಡಳಿ ನೀರಿನ ದುರ್ಬಳಕೆಯನ್ನು ತಡೆಯಲು ದಂಡಾಸ್ತ್ರವನ್ನು ಜಾರಿ ಮಾಡಿದ್ದು, ಹೋದ ಒಂದೇ ವಾರದಲ್ಲಿ 112 ಪ್ರಕರಣಗಳನ್ನು ದಾಖಲಿಸಿ ₹5.60 ಲಕ್ಷ ದಂಡ ವಸೂಲಿ ಮಾಡಿದೆ. ಕುಡಿಯುವ ನೀರನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ₹5,000 ದಂಡ ವಿಧಿಸಲಾಗುವುದು. ನೀರನ್ನು ಸೂಕ್ಷ್ಮವಾಗಿ ಬಳಸುವುದು ನಮ್ಮೆಲ್ಲರ ಕರ್ತವ್ಯ!

banned new borewells in Bengaluru

English Summary

Our Whatsapp Channel is Live Now 👇

Whatsapp Channel

Related Stories