ಇನ್ಮುಂದೆ ಬಿಪಿಎಲ್ ಕಾರ್ಡ್ ಇದ್ದೋರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು!
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಡಿರುವ ಸೂಕ್ಷ್ಮ ಹೇಳಿಕೆ ಫಲಾನುಭವಿಗಳಿಗೆ ನೂತನ ಆತಂಕವನ್ನು ಹುಟ್ಟಿಸುತ್ತಿದೆ.

- ಗ್ಯಾರಂಟಿ ಯೋಜನೆಗಳನ್ನು ಬಿಪಿಎಲ್ ಕುಟುಂಬಗಳಿಗೆ ಸೀಮಿತಗೊಳಿಸುವ ಕುರಿತು ಚರ್ಚೆ
ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಹೆಚ್ಚಾದ ಆತಂಕ
ಗ್ಯಾರಂಟಿ ಯೋಜನೆಗಳ ಬದಲಾವಣೆ ಆಗುವ ಸಾಧ್ಯತೆ
ಬೆಂಗಳೂರು (Bengaluru): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಪಿಎಲ್ ಕುಟುಂಬಗಳಿಗೆ (BPL Ration Card Families) ಮಾತ್ರ ಸೀಮಿತಗೊಳಿಸಬೇಕೆಂಬ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಹೇಳಿಕೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಬಜೆಟ್ ಮಂಡನೆಗೆ ಕೇವಲ ಕೆಲವು ದಿನಗಳು ಬಾಕಿ ಇರುವುದರಿಂದ ಈ ಹೇಳಿಕೆಯು ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ. ಗೃಹಜ್ಯೋತಿ ಯೋಜನೆ (Gruha Jyothi Scheme), ಅನ್ನಭಾಗ್ಯ ಯೋಜನೆ (Anna Bhagya Scheme), ಶಕ್ತಿ ಯೋಜನೆ (Shakti Yojane), ಯುವ ನಿಧಿ ಯೋಜನೆ (Yuva Nidhi Yojana), ಗೃಹಲಕ್ಷ್ಮಿ ಯೋಜನೆಗಳಿಂದ (Gruha Lakshmi Scheme) ಬಡವರಿಗೆ ನೆರವು ಸಿಗುತ್ತದೆಯೋ ಅಥವಾ ಬದಲಾವಣೆಗಳ ನಡುವೇ ಎಲ್ಲಿ ನಮ್ಮನ್ನು ಹೊರಗುಳಿಸುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚುತ್ತಿದೆ.
ಇದನ್ನೂ ಓದಿ: ಕರ್ನಾಟಕ ರೈತರಿಗೆ ಬಂಪರ್ ಸುದ್ದಿ! ಕೃಷಿ ಪಂಪ್ಸೆಟ್‌ಗೆ 1 ಲಕ್ಷ ಸಹಾಯಧನ
ಹೆಚ್ಚು ಕುತೂಹಲ ಹುಟ್ಟಿಸಿರುವುದು ಪರಮೇಶ್ವರ್ ಅವರ ಹೇಳಿಕೆ. “ಬಿಪಿಎಲ್ ಕಾರ್ಡ್‌ದಾರರಿಗೆ (BPL Card Holders) ಮಾತ್ರ ಗ್ಯಾರಂಟಿ ಯೋಜನೆಗಳನ್ನು ಸೀಮಿತಗೊಳಿಸಬೇಕೆಂಬ ಸಲಹೆ ಬಂದಿದೆ. ಈ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ,” ಎಂದು ಅವರು ಹೇಳಿದ್ದಾರೆ. ಇದು ಗ್ಯಾರಂಟಿಗಳ ಕುರಿತು ಹೊಸ ದಿಕ್ಕನ್ನು ತೋರಿಸುವ ಸೂಚನೆಯೆಂಬ ಸಂದೇಶವನ್ನು ಸಾರ್ವಜನಿಕ ವಲಯದಲ್ಲಿ ಹರಡಿದೆ.
ಇದಕ್ಕೂ ಮುಂಚೆ, ಕಾಂಗ್ರೆಸ್ ಶಾಸಕರ ವಲಯದಲ್ಲಿಯೂ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಭಿವೃದ್ಧಿ ಪರ ಬಜೆಟ್ ಮಂಡಿಸಲಿದ್ದಾರೆ ಎಂಬ ನಿರೀಕ್ಷೆಗೆ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿದಂತೆ ಆಗಿದೆ. ಹೀಗಾಗಿ, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುತ್ತದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಮತ್ತೊಂದೆಡೆ, ಪರಮೇಶ್ವರ್ ತಮ್ಮ ಹೇಳಿಕೆಗೆ ಮತ್ತಷ್ಟು ಸ್ಪಷ್ಟತೆ ನೀಡುತ್ತಾ, “ಆದಾಯ ತೆರಿಗೆ ಪಾವತಿಸುವವರು ಮತ್ತು ಸರ್ಕಾರಿ ನೌಕರರು ಸ್ವಯಂಪ್ರೇರಿತವಾಗಿ ಯೋಜನೆಗಳ ಪ್ರಯೋಜನಗಳನ್ನು ಬಿಟ್ಟು ಕೊಡುತ್ತಿದ್ದಾರೆ. ಹೀಗಾಗಿ ಬಡವರಿಗೆ ಮಾತ್ರ ಸೀಮಿತಗೊಳಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದ್ದು, ಸಾಧಕ-ಬಾಧಕಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ.” ಎಂದಿದ್ದಾರೆ
ಇದನ್ನೂ ಓದಿ: ಈ ಪಟ್ಟಿಯಲ್ಲಿರೋ ಮಹಿಳೆಯರಿಗೆ ಮಾತ್ರ 3 ತಿಂಗಳ ಬಾಕಿ ಗೃಹಲಕ್ಷ್ಮಿ ಹಣ ಸಿಗುತ್ತೆ!
ಈ ಮಧ್ಯೆ ಬಿಜೆಪಿ ವಿರುದ್ಧವೂ ಪರಮೇಶ್ವರ್ ಕಿಡಿಕಾರಿದರು. “ಬಿಜೆಪಿಗೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗೋದು ಬೇಕಿಲ್ಲ. ಬಡವರಿಗೆ ನೆರವು ನೀಡುವುದು ಕಾಂಗ್ರೆಸ್ ಉದ್ದೇಶ. ದಲಿತರ ಅಭಿವೃದ್ಧಿಗೆ ಮೀಸಲಾದ ಹಣವನ್ನು ಅದೇ ಉದ್ದೇಶಕ್ಕೆ ಬಳಸಲಾಗುತ್ತಿದೆ,” ಎಂದು ಹೇಳಿದರು.
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಪರಮೇಶ್ವರ್ ಅವರು ಪ್ರಣಾಳಿಕೆ ಸಮಿತಿಗೆ ಅಧ್ಯಕ್ಷರಾಗಿದ್ದರೆಂದು ನೋಡಿದಾಗ, ಅವರು ಈಗ ಗ್ಯಾರಂಟಿಗಳ ಹೊರೆಯ ಕುರಿತು ಮಾತನಾಡಿರುವುದು ರಾಜಕೀಯ ವಲಯದಲ್ಲಿ ವಿಶೇಷ ಚರ್ಚೆ ಮಾಡುವಂತೆ ಮಾಡಿದೆ.
Congress Guarantee Scheme Limit Only to BPL Families




