ಬನ್ನೇರುಘಟ್ಟ: ಈಜಲು ಹೋದ ಇಬ್ಬರು ನೀರುಪಾಲು, ಮೊಬೈಲ್‌ನಲ್ಲಿ ದೃಶ್ಯ ಸೆರೆ
ಆನೇಕಲ್ ಸಮೀಪದ ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಯಲ್ಲಿ ಈಜಲು ಹೋದ ಐವರ ಪೈಕಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಸಾವಿನ ಸಂಪೂರ್ಣ ದೃಶ್ಯ ಸ್ನೇಹಿತನ ಮೊಬೈಲ್‌ನಲ್ಲಿ ಸೆರೆಯಾಗಿದೆ.
- ಈಜಲು ಹೋದ ಐವರು ಸ್ನೇಹಿತರ ಪೈಕಿ ಇಬ್ಬರು ನೀರುಪಾಲು
- ಬೊಮ್ಮನಹಳ್ಳಿ ಗಾರ್ವೇಬಾವಿ ಪಾಳ್ಯ ನಿವಾಸಿ ದೀಪು, ಯೋಗಿಶ್ವರನ್ ದುರ್ಮರಣ
- ಮೊಬೈಲ್‌ನಲ್ಲಿ ಸೆರೆಯಾದ ಜೀವನದ ಕೊನೆಯ ಕ್ಷಣಗಳು
ಬೆಂಗಳೂರು (Bengaluru): ಬನ್ನೇರುಘಟ್ಟ (Bannerghatta) ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ಭಾನುವಾರ ಸಂಜೆ ಈಜಲು ಹೋದ ಐವರು ಸ್ನೇಹಿತರ ಪೈಕಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ. ಈ ದುರ್ಘಟನೆ ಎಲ್ಲರಿಗೂ ಆಘಾತ ಮೂಡಿಸಿದೆ.
ಮೃತರು: ದೀಪು (20) ಮತ್ತು ಯೋಗೇಶ್ವರನ್ (20). ಇವರು ಬೊಮ್ಮನಹಳ್ಳಿಯ ಗಾರ್ವೇಬಾವಿ ಪಾಳ್ಯ ನಿವಾಸಿಗಳು ಎಂದು ಗುರುತಿಸಲಾಗಿದೆ.
ನೋಡ ನೋಡುತ್ತಿದ್ದಂತೆ ನೀರುಪಾಲಾದ ಇಬ್ಬರು ಸ್ನೇಹಿತರು
ಬೊಮ್ಮಸಂಸ್ರದ ಎಸ್‌ಎಫ್‌ಎಸ್ ಕಾಲೇಜಿನ ಐವರು ಸ್ನೇಹಿತರು ಪಿಕ್ನಿಕ್‌ಗಾಗಿ ಸುವರ್ಣಮುಖಿಗೆ ಹೋಗಿದ್ದರು. ನಂತರ, ಕಲ್ಯಾಣಿಯಲ್ಲಿ ಈಜಲು ಇಳಿದಿದ್ದರು. ಈಜು ಬಾರದ ದೀಪು ಮತ್ತು ಯೋಗೇಶ್ವರನ್ ನೀರಿನಲ್ಲಿ ನಿಧಾನವಾಗಿ ಮುಳುಗಿ ಹೋಗಿದ್ದಾರೆ.
ಸ್ನೇಹಿತರ ಕಣ್ಣೆದುರೇ ನಡೆದ ಸಾವಿನ ಹೋರಾಟ!
ಇದ್ದಕ್ಕಿದ್ದಂತೆ ಒಬ್ಬ ಮುಳುಗಿದಾಗ, ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ ಸ್ನೇಹಿತನೂ ಮುಳುಗಿ ಹೋಗಿದ್ದಾನೆ. ಉಳಿದ ಸ್ನೇಹಿತರು ಕಂಗಾಲಾಗಿ ಕೂಗಾಡಿದರು ರಕ್ಷಣೆ ಮಾಡಲಾಗಲಿಲ್ಲ. ಇದನ್ನೆಲ್ಲಾ ಅವರ ಸ್ನೇಹಿತನೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ.
ಈ ದಾರುಣ ಘಟನೆಯ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಎಲ್ಲರಿಗೂ ಭಯ ಹುಟ್ಟಿಸಿದೆ. ಈಜು ಬಾರದವರು ಇಂತಹ ದುರ್ಗತಿಗೆ ಸಿಲುಕದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಎಚ್ಚರಿಸಿದ್ದಾರೆ.
Bannerghatta Tragedy, Two Students Drown
Our Whatsapp Channel is Live Now 👇