Bengaluru News

ಬೆಂಗಳೂರು ಜನರಿಗೆ ಬೋಟ್ ಭಾಗ್ಯ! ಬಿಬಿಎಂಪಿ ನಡೆಗೆ ಜನಾಕ್ರೋಶ

ಮಳೆಗಾಲದ ಮುನ್ನೆಚ್ಚರಿಕೆಯಲ್ಲಿ ಬಿಬಿಎಂಪಿ ಹೊಸ ತಂತ್ರ ಅಳವಡಿಸಲು ತೀರ್ಮಾನಿಸಿದೆ. ಬೇಜವಾಬ್ದಾರಿಯ ಕಾಮಗಾರಿಗಳ ನಡುವೆಯೇ ಬೋಟ್ ಖರೀದಿಗೆ 2 ಕೋಟಿ ಟೆಂಡರ್, ಸಾರ್ವಜನಿಕ ಆಕ್ರೋಶ ಮತ್ತಷ್ಟು ಹೆಚ್ಚಿದೆ.

Publisher: Kannada News Today (Digital Media)

  • ಮಳೆಹಾನಿಗೆ ಬಿಬಿಎಂಪಿಯಿಂದ ಬೋಟ್ ಖರೀದಿ ತೀರ್ಮಾನ
  • ಪ್ರತಿ ಜೋನ್‌ಗೆ ಒಂದು ಬೋಟ್, ಒಟ್ಟು ಏಳು ಬೋಟ್‌ಗಳಿಗೆ ಟೆಂಡರ್
  • ನೀರಿನ ಸಮಸ್ಯೆ ಬಗೆಹರಿಸದೇ ಜನರ ಆಕ್ರೋಶಕ್ಕೆ ಗುರಿಯಾದ ಪಾಲಿಕೆ

ಬೆಂಗಳೂರು (Bengaluru): ಮುಂಗಾರು ಮಳೆಯಾಗುವ ಮುನ್ನವೇ ರಾಜಧಾನಿ ಬೆಂಗಳೂರು (Bangalore)ನಲ್ಲಿ ಜಲಾವೃತ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ಬೋಟ್ ಭಾಗ್ಯ ತಂದು ಕೊಡಲು ಮುಂದಾಗಿದೆ.

ಯಲಹಂಕ, ಸಾಯಿಲೇಔಟ್, ಕೋರಮಂಗಲ ಸುತ್ತಲಿನ ಹಲವು ಪ್ರದೇಶಗಳು ಕಳೆದ ಬಾರಿ ಮಳೆಯಿಂದ (Rain) ಸಂಪೂರ್ಣ ಜಲಾವೃತಗೊಂಡಿದ್ದವು. ಈ ವೇಳೆ ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಬೋಟ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದ ಅನುಭವದ ಮೇಲೆ ಪಾಲಿಕೆ ಮುಂದಿನ ತಯಾರಿಗೆ ಕೈಹಾಕಿದೆ.

ಬೆಂಗಳೂರು ಜನರಿಗೆ ಬೋಟ್ ಭಾಗ್ಯ! ಬಿಬಿಎಂ

ಇದನ್ನೂ ಓದಿ: ಹಸು, ಎಮ್ಮೆ, ಕುರಿ ಸಾಕಾಣಿಕೆ ಶೆಡ್‌ಗಳ ನಿರ್ಮಾಣಕ್ಕೆ ₹57,000 ಸಹಾಯಧನ!

ಸದ್ಯ, ಬಿಬಿಎಂಪಿ ಪ್ರತೀ ಜೋನ್‌ಗೆ ಒಂದರಂತೆ ಏಳು ಬೋಟ್‌ಗಳನ್ನು ಖರೀದಿಸಲು ಬರೋಬ್ಬರಿ ₹2 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಜೊತೆಗೆ 50 ಲೈಫ್ ಜಾಕೆಟ್ (life jackets), ಮೋಟಾರ್ ಪಂಪ್‌ಗಳನ್ನು (motor pumps) ಖರೀದಿಸಲು ಕೂಡ ಯೋಜನೆ ರೂಪಿಸಿದೆ. ಈ ನಿರ್ಧಾರ ಮುಂಗಾರು ಅವಾಂತರಗಳ ವಿರುದ್ಧ ತಕ್ಷಣದ ಸ್ಪಂದನೆ ನೀಡಲು ಸಹಾಯಕಲಿದೆ ಎಂಬ ಪಾಲಿಕೆ ವಾದ.

ಆದರೆ, ಸಾರ್ವಜನಿಕರು ಪಾಲಿಕೆಯ ಈ ಹೆಜ್ಜೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಬೋಟ್ ಖರೀದಿಗೆ ಬದಲು ನೀರು ನಿಲ್ಲುವ ಕಾರಣವಾಗಿರುವ ರಾಜಕಾಲುವೆ ಮತ್ತು ಕೆರೆಗಳ ಅಕ್ರಮ ಒತ್ತುವರಿ ತೆರವು ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪ್ರವಾಹ ತಡೆಗಟ್ಟಬೇಕಾದಲ್ಲಿ ಮೂಲಸೌಕರ್ಯ ಸರಿಪಡಿಸಬೇಕು ಎಂದು ಒತ್ತಡ ಹಾಕಿದ್ದಾರೆ.

ಇದನ್ನೂ ಓದಿ: ಸ್ಥಗಿತಗೊಂಡಿದ್ದ ಸೈಟ್ ರಿಜಿಸ್ಟ್ರೇಷನ್ ನೋಂದಣಿ ಪ್ರಕ್ರಿಯೆ ಮತ್ತೆ ಆರಂಭ

ಈಗಾಗಲೇ 200 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ ಪಾಲಿಕೆ, ಕೆಲವು ಕಡೆ ಮಾತ್ರ ಕಾಮಗಾರಿಗಳನ್ನು ಆರಂಭಿಸಿ ಮಧ್ಯದಲ್ಲಿ ನಿಲ್ಲಿಸಿದ್ದು, ಜನತೆ ಮತ್ತಷ್ಟು ಕೋಪಗೊಂಡಿದ್ದಾರೆ. ಮಳೆ ಬಂದಾಗ ನೀರು ಹರಿಯುವ ವ್ಯವಸ್ಥೆ ಇಲ್ಲದೆ ಬೋಟ್‌ಗಳ ಮೂಲಕ ಪರಿಹಾರ ಕಂಡುಹಿಡಿಯಲು ಹೋಗುತ್ತಿರುವ ಬಿಬಿಎಂಪಿ ನಡೆಗೆ ಜನರಿಂದ ಕಿಡಿಕಾರಿಕೆ ವ್ಯಕ್ತವಾಗಿದೆ.

“ಇದು ಯಾವ ನಗರಾಭಿವೃದ್ಧಿ ತಂತ್ರ?” ಎಂದು ಹಲವು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. “ಗ್ರೇಟರ್ ಬೆಂಗಳೂರು ಇಂದು ವಾಟರ್ ಬೆಂಗಳೂರು ಆಗುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಚುಟುಕಗಳು ಹರಿದಾಡುತ್ತಿವೆ.

Bengaluru BBMP Boat Plan Triggers Public Outcry

English Summary

Related Stories