Bengaluru: ಬೆಂಗಳೂರು ಅಪಾರ್ಟ್‌ಮೆಂಟ್ ನಿವಾಸಿ ಶಾಕ್! ಬರೋಬ್ಬರಿ 16,883 ವಿದ್ಯುತ್ ಬಿಲ್

ಬೆಂಗಳೂರು 3 ಬಿಹೆಚ್‌ಕೆ ಅಪಾರ್ಟ್‌ಮೆಂಟ್ ನಿವಾಸಿಗೆ ₹16,883 ವಿದ್ಯುತ್ ಬಿಲ್ ಬಂದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

  • 16,883 ವಿದ್ಯುತ್ ಬಿಲ್ ನೋಡಿ ಬೆಂಗಳೂರಿಗ ಅಚ್ಚರಿ
  • 3 ಬಿಹೆಚ್‌ಕೆ ಮನೆಯ ಸಾಮಾನ್ಯ ಬಳಕೆಗೆ ಭಾರೀ ಮೊತ್ತ
  • ಬೆಸ್ಕಾಂಗೆ ದೂರು ಹೇಗೆ ಸಲ್ಲಿಸಬೇಕು? ನೆಟ್ಟಿಗರ ಸಲಹೆ

ಬೆಂಗಳೂರು (Bengaluru): ಬೆಂಗಳೂರು ದುಬಾರಿ ನಗರ ಎಂಬ ಹೆಸರಿನ ನಡುವೆಯೇ ಮತ್ತೊಂದು ಘಟನೆ ಜನರ ಗಮನ ಸೆಳೆದಿದೆ. 3 ಬಿಹೆಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ವ್ಯಕ್ತಿಯೊಬ್ಬನಿಗೆ ಈ ತಿಂಗಳು ಬಂದಿರುವ ₹16,883 ವಿದ್ಯುತ್ ಬಿಲ್ (Electricity Bill) ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ರಿಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಮನೆಯಲ್ಲಿ ನಾಲ್ವರು ಸದಸ್ಯರು. ಒಂದು ಎಸಿ ದಿನಕ್ಕೆ 5–7 ಗಂಟೆ ಮಾತ್ರ ಬಳಸಲಾಗುತ್ತದೆ. ಜೊತೆಗೆ 650 ವಾಟ್ ಗೇಮಿಂಗ್ ಪಿಸಿ, ಇಂಡಕ್ಷನ್ ಸ್ಟವ್, ಏರ್ ಫ್ರೈಯರ್ ಹಾಗೂ ನಾಲ್ಕು ಫ್ಯಾನ್‌ಗಳು ಮಾತ್ರ ಬಳಕೆಯಲ್ಲಿವೆ.

ಇದುವರೆಗೂ ತಿಂಗಳಿಗೆ ₹5,000ರಿಂದ ₹9,000ರೊಳಗೆ ಬಿಲ್ ಬರುತ್ತಿತ್ತು. ಆದರೆ ಯಾವುದೇ ಹೆಚ್ಚುವರಿ ಬಳಕೆ ಇಲ್ಲದಿದ್ದರೂ ಏಕಾಏಕಿ ₹16 ಸಾವಿರ ಮೀರಿರುವುದು ಮನೆಮಾಲೀಕನಿಗೆ ಆಘಾತ ತಂದಿದೆ.

“ಇದು ಸಾಧ್ಯವೇ?” – ನೆಟ್ಟಿಗರ ಚರ್ಚೆ

‘ಇಷ್ಟೊಂದು ಮೊತ್ತ ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿ, ಸಂಬಂಧಿತ ವಿದ್ಯುತ್ ಸರಬರಾಜು ಸಂಸ್ಥೆಗೆ ದೂರು ನೀಡಬೇಕೇ ಎಂದು ಆತ ಕೇಳಿದ್ದಾನೆ. ಪೋಸ್ಟ್ ವೈರಲ್ ಆದ ನಂತರ ಅನೇಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೆಲವರು ‘ನಮಗೆ ನಾಲ್ವರು ಇದ್ದರೂ ₹2,000 ಮೀರೋದಿಲ್ಲ’ ಎಂದರೆ, ಇನ್ನೂ ಕೆಲವರು ಮೀಟರ್ ರೀಡಿಂಗ್ ಅಥವಾ ಅಂದಾಜು ಬಿಲ್ಲಿಂಗ್ ಸಮಸ್ಯೆ ಇರಬಹುದು ಎಂದು ಸೂಚಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚದ ನಡುವೆ ಇಂತಹ ವಿದ್ಯುತ್ ಬಿಲ್ ಸಾಮಾನ್ಯ ನಾಗರಿಕರಿಗೆ ಭಾರವಾಗಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ತಾಂತ್ರಿಕ ದೋಷವೇ? ಅಥವಾ ಬಿಲ್ಲಿಂಗ್ ಲೆಕ್ಕಾಚಾರದಲ್ಲಿನ ವ್ಯತ್ಯಾಸವೇ? ಎಂಬ ಪ್ರಶ್ನೆಗಳು ಈಗ ಎದುರಾಗಿದೆ.

ದೂರು ನೀಡುವುದು ಹೇಗೆ?

ವಿದ್ಯುತ್ ಬಿಲ್ ಅಸಮಾನ್ಯವಾಗಿದ್ದರೆ ತಕ್ಷಣ ಸಂಬಂಧಿತ ಇಎಸ್‌ಕಾಂ ಕಚೇರಿಯಲ್ಲಿ ಪರಿಶೀಲನೆ ಕೇಳಬಹುದು. ಮೀಟರ್ ಟೆಸ್ಟಿಂಗ್, ರೀಡಿಂಗ್ ಮರುಪರಿಶೀಲನೆ ಹಾಗೂ ಆನ್‌ಲೈನ್ ದೂರು ಸಲ್ಲಿಕೆ ಸೌಲಭ್ಯಗಳಿವೆ. ಸರಿಯಾದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.

Related Stories