ಬೆಂಗಳೂರು: ಎಟಿಎಂಗೆ ನಗದು ತುಂಬುವ ಸಿಬ್ಬಂದಿಯೇ ಕಳ್ಳತನ, ಸಿಕ್ಕಿಬಿದ್ದಿದ್ದೇ ರೋಚಕ
ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಸ್ಮಾರ್ಟ್ ತಂತ್ರದಿಂದ ಲಕ್ಷಾಂತರ ಹಣ ಕದ್ದ ಪ್ರಕರಣದಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ
- ಎಟಿಎಂಗೆ ನಗದು ತುಂಬುವ ಸಿಬ್ಬಂದಿಯೇ ಕಳ್ಳತನ
- 51.76 ಲಕ್ಷ ನಗದು, 90 ಲಕ್ಷ ಮೌಲ್ಯದ ಕಾರುಗಳು ವಶ
- ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಕಳ್ಳತನ ಪದ್ದತಿ
ಬೆಂಗಳೂರು (Bengaluru): ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ಪೊಲೀಸರ ಬಲೆಗೆ ಎಟಿಎಂಗಳಿಗೆ (ATM) ಹಣ ತುಂಬುವ ನೌಕರರೇ ಬಿದ್ದಿದ್ದಾರೆ. ಬೇಲಿಯೇ ಹೊಲ ಮೇಯ್ದಂತೆ, ಹಣ ತುಂಬುವ ನೌಕರರು ತಾವು ಹೇರಬೇಕಾದ ಹಣವನ್ನು ವಂಚಿಸಿ ಕದಿಯುವ ಕೆಲಸ ಮಾಡಿದ್ದಾರೆ.
ಬಂಧಿತರು ಶಿವು, ಸಮೀರ್, ಮನೋಹರ್, ಗಿರೀಶ್, ಜಗ್ಗೇಶ್ ಹಾಗೂ ಜಸ್ವಂತ್ ಎಂದು ಗುರುತಿಸಲಾಗಿದ್ದು, ಇವರಿಂದ 51.76 ಲಕ್ಷ ನಗದು ಹಾಗೂ 90 ಲಕ್ಷ ಮೌಲ್ಯದ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಜ.25ರಂದು ಕೆಂಪೇಗೌಡ ಬಡಾವಣೆಯಲ್ಲಿ ಹಣಕಾಸು ವಿಚಾರವಾಗಿ ಗಲಾಟೆ ಮಾಡುತ್ತಿದ್ದ ವೇಳೆ ಈ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಎಟಿಎಂ ಕಳ್ಳತನ ಮಾಫಿಯಾದ ಬಗ್ಗೆ ಮಾಹಿತಿ ಲಭಿಸಿದೆ.
ಈ ಆರೋಪಿಗಳು ನಂದಿನಿ ಲೇಔಟ್ ಹಾಗೂ ಲಗ್ಗೆರೆ ಸುತ್ತಮುತ್ತಲಿನ ನಿವಾಸಿಗಳಾಗಿದ್ದು, ಸೆಕ್ಯೂರ್ ವ್ಯಾಲಿ ಪ್ರೈವೇಟ್ ಏಜೆನ್ಸಿಯಲ್ಲಿ ಎಟಿಎಂಗಳಿಗೆ ಹಣ ತುಂಬುವ ಕೆಲಸ ಮಾಡುತ್ತಿದ್ದರು.
ಹದಿನಾರು ಕಳ್ಳತನಗಳು ಎಟಿಎಂನಲ್ಲಿ ಹೇರಲಾಗಿದ್ದ ಹಣವನ್ನು ಲೋಪದೋಷದಿಂದ ಕದಿಯುವ ಮೂಲಕ ನಡೆದಿದೆ. ಸದ್ಯ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru Police Nab Six in ATM Cash Theft Case
Our Whatsapp Channel is Live Now 👇